Advertisement

ಪುದುಚೆರಿಯ ಅಧಿಕಾರ ಸ್ವೀಕರಿಸಿದ ಎನ್ ಆರ್ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರ..!

04:09 PM Jun 27, 2021 | Team Udayavani |

ಪುದುಚೆರಿ : ವಿಧಾನ ಸಭಾ ಚುನಾವಣೆಯ ಫಲಿತಾಂಶ ಬಂದು 50 ದಿನಗಳು ಆದ ಬಳಿಕ ಪುದುಚೆರಿಯಲ್ಲಿ ಇಂದು(ಭಾನುವಾರ, ಜೂನ್ 27) ಎನ್ ರಂಗಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

Advertisement

ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೆರಿಯಲ್ಲಿ ಇಂದು ಸರ್ಕಾರ ರಚನೆಯಾಗಿದ್ದು, ಬಿಜೆಪಿಯ ಇಬ್ಬರನ್ನು ಒಳಗೊಂಡು 5 ಮಂದಿ ಶಾಸಕರು ಪ್ರಮಾನ ಚವನವನ್ನು ಸ್ವೀಕರಿಸಿದ್ದಾರೆ.

ಇದನ್ನೂ ಓದಿ : ಭಾರತ- ಇಂಗ್ಲೆಂಡ್ ವನಿತೆಯರ ಮೊದಲ ಏಕದಿನ: ಶಫಾಲಿ ವರ್ಮಾ ಪದಾರ್ಪಣೆ

ಎನ್ ಆರ್ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸುದೀರ್ಘ ಅಧಿಕಾರ ಹಂಚಿಕೆ ಮಾತುಕತೆಗಳು ಈ ವಾರದ ಆರಂಭದಲ್ಲಿ ಮುಕ್ತಾಯಗೊಂಡು ಮತ್ತು ಶುಕ್ರವಾರ ಅಂತಿಮ ನಿರ್ಧಾರ ಘೋಷಣೆಯಾಗಿದ್ದು, ಸರ್ಕಾರ ರಚನೆಯ ಮೇಲಿನ ಕುತೂಹಲ ಕೊನೆಗೊಂಡಿತು. ಹಿಂದಿನ ಫ್ರೆಂಚ್ ವಸಾಹತು ಪ್ರದೇಶದಲ್ಲಿ ಹೆಚ್ಚು ಅಸ್ತಿತ್ವ ಹೊಂದಿರದ ಬಿಜೆಪಿ ಇದೇ ಮೊದಲ ಬಾರಿಗೆ ಸರ್ಕಾರದ ಭಾಗವಾಗುತ್ತಿದೆ ಎನ್ನುವುದು ವಿಶೇಷ.

ಸಚಿವ  ಸಂಪುಟಕ್ಕೆ ಸೇರಿದ ಬಿಜೆಪಿ ಮುಖಂಡ ನಮಸಿವಯ್ಯಮ್ ಚುನಾವಣೆಗೂ ಮುನ್ನ ಕಾಂಗ್ರೆಸ್ ನನ್ನು ತೊರೆದು ಬಿಜೆಪಿಯನ್ನು ಸೇರ್ಪಡೆಗೊಂಡಿದ್ದರು. ಮತ್ತೊರ್ವ ಬಿಜೆಪಿ ಶಾಸಕ ಸಾಯಿ ಜೆ. ಸರವಣನ್ ಕುಮಾರ್ ಪ್ರಮಾನ ವಚನ ಪಡೆದರು. ಎನ್ ಆರ್ ಕಾಂಗ್ರೆಸ್  ನಿಂದ , ಕೆ. ಲಕ್ಷ್ಮೀ ನಾರಾಯಣನ್, ಸಿ ಡಿಜೀಕೌಮರ್ ಮತ್ತು ಚಂಡಿರಾ ಪ್ರಿಯಂಗ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಚಂಡಿರಾ ಪ್ರಿಯಂಗಾ ನಾಲ್ಕು ದಶಕಗಳಲ್ಲೇ ಮೊಟ್ಟ ಮೊದಲ ಬಾರಿಗೆ ಪುದುಚೇರಿಯ ಮೊದಲ ಮಹಿಳಾ ಮಂತ್ರಿಯಾಗಿದ್ದಾರೆ.

Advertisement

ಮುಖ್ಯಮಂತ್ರಿಯಿಂದ ಬುಧವಾರ ಆರು ಮಂದಿ ಇರುವ ಸಚಿವ ಸಂಪುಟದ ಪಟ್ಟಿಯನ್ನು ಸ್ವೀಕರಿಸಿದ ರಾಜ್ಯಪಾಲ ತಮಿಳುಸಾಯಿ ಸೌಂಡರಾಜನ್ ಅವರು ನೂತನ  ಸಚಿವರಿಗೆ ಪ್ರಮಾಣ ವಚನ ನೀಡಿದ್ದಾರೆ.

ಚುನಾವಣೆಗೂ ಮುನ್ನ ಶಾಸಕರ ಗುಂಪು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡಗೊಂಡ ನಂತರ ವಿ ನಾರಾಯಣಸಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು. ಈಗ ಬಿಜೆಪಿ ಹಾಗೂ ಎನ್ ಆರ್ ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ರಚನೆಯಾಗಿದೆ.

ಫಲಿತಾಂಶ ಬಂದ ಐದನೇ ದಿನ ಅಂದರೇ ಮೇ 7 ರಂದು ಮುಖ್ಯಮಂತ್ರಿ ರಂಗಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು, ಆದರೇ, ಮೃತ್ರಿಗೆ ಸಂಬಮಧಿಸಿ ವಿಚಾರಗಳು ನಡೆಯುತ್ತಿದ್ದ ಕಾರಣ ಸಚಿವ ಸಂಪುಟ ರಚನೆಯಾಗಿರಲಿಲ್ಲ.

ಆರಂಭದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿ, ಅಂತಿಮವಾಗಿ ಸ್ಪೀಕರ್ ಹುದ್ದೆಗೆ ಇತ್ಯರ್ಥ ಮಾಡಿಕೊಂಡಿತ್ತು. ಜೂನ್ 16 ರಂದು ” ಎಂಬಾಲಂ ” ಆರ್ ಸೆಲ್ವಂ ಅವರು ಅವಿರೋಧವಾಗಿ ಆಯ್ಕೆಯಾದರು.

ಇತ್ತೀಚೆಗೆ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರಾಡಳಿತ ಪ್ರದೇಶದ 30 ವಿಧಾನಸಭಾ ಕ್ಷೇತ್ರಗಳಲ್ಲಿ 10 ಸ್ಥಾನಗಳನ್ನು ಎ ಐ ಎನ್‌ ಆರ್‌ ಸಿ ಗೆದ್ದಿತ್ತು, ಬಿಜೆಪಿ ಆರು ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

ಈ ಹೀಂದೆ ಪುದುಚೆರಿಯನ್ನು ಆಳಿದ ಕಾಂಗ್ರೆಸ್ ತನ್ನ ಸ್ಥಾನಗಳ ಕೇವಲ ಎರಡು ಸ‍್ಥಾನಗಳಲ್ಲಿ ಜಯಗೊಳಿಸುವುದರ ಮೂಲಕ ತೃಪ್ತಿಪಟ್ಟುಕೊಂಡಿತ್ತು.

ಇದನ್ನೂ ಓದಿ : ಕರ್ಪ್ಯೂ ನಿಯಮ ಉಲ್ಲಂಘಿಸಿದವರಿಗೆ ಮಧ್ಯರಾತ್ರಿ ವ್ಯಾಯಾಮ ಮಾಡಿಸಿದ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next