ಪರ್ತ್: ಆಸ್ಟ್ರೇಲಿಯ ಪ್ರವಾಸದಲ್ಲಿರುವ ಭಾರತೀಯ ಹಾಕಿ ತಂಡದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಶುಕ್ರವಾರ ನಡೆದ ಐದು ಪಂದ್ಯಗಳ ಹಾಕಿ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯ ವಿರುದ್ಧ 1-3 ಗೋಲುಗಳಿಂದ ಸೋಲನ್ನು ಕಂಡಿದೆ. ಇದು ಭಾರತಕ್ಕೆ ಎದುರಾದ ಸತತ ನಾಲ್ಕನೇ ಸೋಲು ಆಗಿದೆ.
ಅಂತಿಮ ಫಲಿತಾಂಶ ಏನೇ ಆಗಿದ್ದರೂ ಭಾರತೀಯರು ಈ ಪಂದ್ಯ ದಲ್ಲಿ ಸುಧಾರಿತ ಆಟದ ಪ್ರದರ್ಶನ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಆಸ್ಟ್ರೇಲಿಯ ನಿಜಕ್ಕೂ ಹಾಕಿ ಸ್ಪರ್ಧೆಯಲ್ಲಿ ಬಲಿಷ್ಠ ವಾಗಿದೆ. ಈ ಪಂದ್ಯದಲ್ಲಿ ದಾಖಲಾದ ನಾಲ್ಕು ಗೋಲುಗಳು ಪೆನಾಲ್ಟಿ ಕಾರ್ನರ್ ಅವಕಾಶದಿಂದಲೇ ದಾಖ ಲಾಗಿದ್ದವು. ಭಾರೀ ಮಿಂಚು ಇದ್ದ ಕಾರಣ ಈ ಪಂದ್ಯವು 40 ನಿಮಿಷ ತಡವಾಗಿ ಆರಂಭಗೊಂಡಿತ್ತು.
ಸರಣಿಯ ಅಂತಿಮ ಪಂದ್ಯವು ಶನಿವಾರ ನಡೆಯಲಿದೆ.
ಪಂದ್ಯ ಆರಂಭವಾದ 12ನೇ ನಿಮಿಷ ದಲ್ಲಿ ಭಾರತ ಮುನ್ನಡೆ ಸಾಧಿಸಿತ್ತು. ನಾಯಕ ಹರ್ಮನ್‌ಪ್ರೀತ್ ಸಿಂಗ್ 19ನೇ ನಿಮಿಷದಲ್ಲಿ ಗೋಲನ್ನು ಹೊಡೆದು ಮುನ್ನಡೆ ಸಾಧಿಸಿದ್ದರು. ಆದರೆ ಆ ಬಳಕಿ ಜೆರಿಮಿ ಹೇವಾರ್ಡ್ 47ನೇ ಮತ್ತು ಜ್ಯಾಕ್ ವೆಲ್c 54 ನಿಮಿಷದಲ್ಲಿ ಗೋಲನ್ನು ದಾಖಲಿಸಿ ಆಸ್ಟ್ರೇಲಿಯಕ್ಕೆ 2-1 ಮುನ್ನಡೆ ಒದಗಿಸಿದರು.
ಭಾರತ ಸರಣಿಯ ಮೊದಲ ಪಂದ್ಯ ವನ್ನು 1-5 ಗೋಲುಗಳಿಂದ ಸೋತಿದ್ದರೆ ಎರಡು ಮತ್ತು ಮೂರನೇ ಪಂದ್ಯವನ್ನು ಅನುಕ್ರಮವಾಗಿ 2-4 ಮತ್ತು 1-2 ಗೋಲುಗಳಿಂದ ಸೋತಿತ್ತು.