Advertisement

ಸಿಡಿಲಬ್ಬರದ ಮಳೆಗೆ ಗರ್ಭಿಣಿ ಸೇರಿ ಐವರ ಬಲಿ

11:40 AM May 16, 2017 | Team Udayavani |

ಬೆಂಗಳೂರು: ಬೆಂಗಳೂರು, ಬಳ್ಳಾರಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ರಾಜ್ಯದ ಹಲವೆಡೆ ಸೋಮವಾರ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದ್ದು, ಗುಡುಗು ಸಿಡಿಲಬ್ಬರಕ್ಕೆ ಗರ್ಭಿಣಿ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.
ಹಲವರಿಗೆ ಗಾಯಗಳಾಗಿವೆ. ಮನೆಗಳು ಬಿರುಕು ಬಿಟ್ಟಿದ್ದು, ಮರ, ವಿದ್ಯುತ್‌ ಕಂಬಗಳು ಧರೆಗುರುಳಿವೆ. ಬೆಳೆ ಹಾನಿ ಕೂಡ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳ ಬಳಿ ಮನೆಯೊಂದಕ್ಕೆ ಸಿಡಿಲು ಬಡಿದು, ಈ ವೇಳೆ ಮಲಗಿದ್ದ ಗರ್ಭಿಣಿ ಬೀಬಿ ಸೂμಯಾ (22) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗೂರ ಗ್ರಾಮದಲ್ಲಿ ಪರಸಪ್ಪ ಶಿವಪ್ಪ ನಾಯೊRàಡಿ (25) ಸಾವನ್ನಪ್ಪಿದ್ದಾರೆ. ಪುತ್ತೂರು ಬಳಿ ಬೊಳ್ಳಾಣದಲ್ಲಿ ಸಿಡಿಲಿನ ಆಘಾತಕ್ಕೆ ಸದಾನಂದ (32) ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.ಬಾಗಲಕೋಟೆ ತಾಲೂಕಿನ ಕಿರಸೂರ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಮನೆಯ ಚಾವಣಿ ಹಾರಿ ಕಲ್ಲು ಬಿದ್ದು ಬಾಲಕಿ ದೀಪಾ ಕಡೆಮನಿ (8) ಮೃತಪಟ್ಟಿದ್ದಾಳೆ.

Advertisement

ಬಾಲಕ ಸಾವು: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನೀರಿನಿಂದ ತುಂಬಿದ್ದ ತಿಪ್ಪೆಗುಂಡಿಯಲ್ಲಿ ಬಿದ್ದು ರಾಜಾಭಕ್ಷಾರ ಬೇಪಾರಿ (5) ಮೃತಪಟ್ಟಿದ್ದಾನೆ. ಕುಮಟಾ ಪಟ್ಟಣದ ಹೊನ್ಮಾಂವ ಚರ್ಚ್‌ ಕಟ್ಟಡಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಗೋಡೆಗಳು ಬಿರುಕು ಬಿಟ್ಟಿದ್ದು, ಮೇಲುಗಡೆಯ ದೇವರ ಮೂರ್ತಿಗಳೂ ಹಾನಿಗೊಳಗಾಗಿವೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿ 14 ಕುರಿಗಳು, 2 ಮೇಕೆಗಳು ಹಾಗೂ ಎಮ್ಮೆ ಸಿಡಿಲು ಬಡಿದು ಮೃತಪಟ್ಟಿವೆ. ಬಿರುಗಾಳಿಗೆ ಹಂಪಿಯ ಪುರಾಧಿತನ ವಿಠuಲ ಬಜಾರಿನ ಸಾಲು ಮಂಟಧಿಪಧಿಗಳು, ಧರೆಧಿಗೆ ಉರುಳಿವೆ. ಹೊಸಪೇಟೆ ಕಂಪ್ಲಿಯಲ್ಲಿ ವಿದ್ಯುತ್‌ ಕಂಬಗಳು, ಮರಗಳು ಧರೆಗುರುಳಿವೆ. ಉಡುಪಿ ಜಿಲ್ಲೆ ತೆಕ್ಕಟ್ಟೆ ಬಳಿ ಗುಳ್ಳಾಡಿಯಲ್ಲಿ ಸಿಡಿಲು ಎರಗಿ ಹಸು ಸಾವನ್ನಪ್ಪಿದೆ. ಜೊತೆಗೆ ಮನೆಗೂ ಹಾನಿಯಾಗಿದೆ.

ಹಳ್ಳದಲ್ಲಿ ಸಿಲುಕಿದ ಬಸ್‌ ಪ್ರಯಾಣಿಕರು ಪಾರು
ಲಕ್ಷ್ಮೇಶ್ವರ (ಗದಗ): ಲಕ್ಷ್ಮೇಶ್ವರದಿಂದ ಸೂರಣಗಿ ಕಡೆಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ ಸೋಮವಾರ ಬೆಳಗ್ಗೆ
ದೊಡೂxರು ಸಮೀಪ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸಿಲುಕಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಸಾರ್ವಜನಿಕರು ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ದೊಡೂxರು ಸಮೀಪದ ಹಳ್ಳ ತುಂಬಿ ಹರಿಯುತ್ತಿತ್ತು. ಆದರೂ ತುಂಬಿ ಹರಿಯುತ್ತಿದ್ದ ಹಳ್ಳದ ಸೇತುವೆ ದಾಟಿಸಲು ಚಾಲಕ ಧೈರ್ಯದಿಂದ ಬಸ್‌ ಮುನ್ನಡೆಸಿದರು. ಆದರೆ, ನೀರಿನ ಸೆಳೆತಕ್ಕೆ ಸಿಲುಕಿದ ಬಸ್‌ ಹಳ್ಳದ ಮೂಲೆಗೆ ಬಿತ್ತು. ಭಾರಿ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರನ್ನು ನೋಡಲು ನಿಂತಿದ್ದ ಜನರು ತಕ್ಷಣ ಕಾರ್ಯೋನ್ಮುಖರಾಗಿ ಬಸ್‌ಗೆ ಹಗ್ಗ ಕಟ್ಟಿ ಪ್ರಯಾಣಿಕರನ್ನು, ಚಾಲಕ ಹಾಗೂ ನಿರ್ವಾಹಕರನ್ನು ರಕ್ಷಿಸಿದರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬಸ್‌ ಮೇಲೆತ್ತಲು ಪ್ರಯತ್ನಿಸಿದರೂ ಸಾಧ್ಯವಾಗದೇ ಇದ್ದಾಗ ಕ್ರೇನ್‌ ತರಿಸಿ ಬಸ್‌ ಮೇಲೆತ್ತಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next