Advertisement
ಮುಧೋಳ ಕ್ಷೇತ್ರ ವ್ಯಾಪ್ತಿಯ ಶಿರೋಳದ ಸರ್ಕಾರಿ ಪ್ರೌಢಶಾಲೆ, ಬೆಳಗಲಿಯ ಸರ್ಕಾರಿ ಪ್ರೌಢ ಶಾಲೆ, ನಾಗರಾಳ, ಇಂಗಳಗಿ ಹಾಗೂ ಮುಗಳಖೋಡದ ಸರ್ಕಾರಿ ಪ್ರೌಢಶಾಲೆಗಳನ್ನು ದತ್ತು ಪಡೆದು, ಶಾಸಕರ ಪ್ರದೇಶಾಭಿವೃದ್ಧಿ ನಿಧಿ,ಡಿಎಂಎಫ್ ಅನದಾನ ಹಾಗೂ ಸರ್ಕಾರದ ಇತರೆ ಅನುದಾನ ಬಳಸಿಕೊಂಡು ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದಾರೆ. ಶಿರೋಳ ದೊಡ್ಡ ಗ್ರಾಮವಾಗಿದ್ದು ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಐದು ಜನ ಶಿಕ್ಷಕರ ಕೊರತೆಯಿದೆ.
Related Articles
Advertisement
ಅತಿ ಹೆಚ್ಚು ಶಾಲೆ ದತ್ತು: ಜಿಲ್ಲೆಯ ಎಲ್ಲ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯತಲಾ ಮೂರು ಶಾಲೆ ದತ್ತು ಪಡೆದಿದ್ದರೆ ಡಿಸಿಎಂ ಕಾರಜೋಳ ಐದು ಶಾಲೆದತ್ತು ಪಡೆದು ಮಾದರಿ ಶಾಲೆ ರೂಪಿಸಲು ಮುಂದಾಗಿದ್ದಾರೆ. ಸದ್ಯ ಶಾಸಕರಪ್ರದೇಶಾಭಿವೃದ್ಧಿ ನಿಧಿಯಿಂದ ಒಟ್ಟು 3.96 ಕೋಟಿ ಅನುದಾನ ನೀಡಿದ್ದು,ಇದರೊಂದಿಗೆ ಜಿಲ್ಲಾ ಮಿನರಲ್ ಫಂಡ್ (ಡಿಎಂಎಫ್) ಬಳಸುವ ಜತೆಗೆದಾನಿಗಳ ನೆರವು ಪಡೆಯಲು ಯೋಜನೆ ಹಾಕಿದ್ದಾರೆ. ಜಿಲ್ಲೆಯಲ್ಲಿಯೇ ಅತಿಹೆಚ್ಚು ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿಗೆ ಮುಂದಾದ ಶಾಸಕರಲ್ಲಿ ಕಾರಜೋಳ ಮೊದಲಿಗರಾಗಿದ್ದಾರೆ.
ಮುಗಳಖೋಡ ಸರ್ಕಾರಿ ಪ್ರೌಢಶಾಲೆಗೆ 85 ಲಕ್ಷ :
ಈ ಶಾಲೆಯಲ್ಲಿ 387 ಮಕ್ಕಳಿದ್ದು,ಇಲ್ಲಿಯೂ ನಾಲ್ವರು ಶಿಕ್ಷಕರ ಕೊರತೆ ಇದೆ.ಇಲ್ಲಿ 5 ಶಾಲಾ ಕೊಠಡಿ ನಿರ್ಮಾಣಕ್ಕೆ60 ಲಕ್ಷ, ಬಾಲಕ-ಬಾಲಕಿಯರಿಗಾಗಿಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ 8ಲಕ್ಷ, ಅಡುಗೆ ಕೋಣೆಗೆ 8 ಲಕ್ಷ, ಶುದ್ಧಕುಡಿಯುವ ನೀರಿನ ಘಟಕಕ್ಕೆ 5 ಲಕ್ಷ, ಶಾಲೆಗೆ ಸುಣ್ಣ ಬಣ್ಣ ಹಚ್ಚಲು 4 ಲಕ್ಷ ಸೇರಿ 85ಲಕ್ಷ ಅನುದಾನ ಮೀಸಲಿಡಲಾಗಿದೆ. ಜತೆಗೆ ಹಸಿರೀಕರಣ, ಪ್ರಯೋಗಾಲಯ,ಖುರ್ಚಿ, ಟೇಬಲ್, ಸಂಸ್ಕೃತಿ ಭವನ ನಿರ್ಮಾಣಕ್ಕೆ ಬೇರೆ ಬೇರೆ ಇಲಾಖೆಗಳ ಅನುದಾನ ಬಳಸಿಕೊಳ್ಳಲು ಡಿಸಿಎಂ ಕಾರಜೋಳ ಮುಂದಾಗಿದ್ದಾರೆ.
ಶಾಲೆಯ ಬೇಡಿಕೆಗಳ ಕುರಿತು ಡಿಸಿಎಂ ಕಾರಜೋಳ ಗಮನಕ್ಕೆ ತಂದಿದ್ದೇವೆ. ಈ ಕುರಿತು ಎಸ್‌ಡಿಎಂಸಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮಾದರಿ ಶಾಲೆ ನಿರ್ಮಾಣಕ್ಕೆವಿಶೇಷ ಆದ್ಯತೆ ನೀಡಿದ್ದೇವೆ. – ಪಿ.ಎಂ. ಹಲಗಿ, ಮುಖ್ಯೋಪಾಧ್ಯಾಯ, ಸರ್ಕಾರಿ ಪ್ರೌಢಶಾಲೆ, ಮುಗಳಖೋಡ
ಬೆಳಗಲಿ ಸರ್ಕಾರಿ ಪ್ರೌಢಶಾಲೆಗೆ 1.45 ಕೋಟಿ :
ಈ ಶಾಲೆಯಲ್ಲಿ 346 ವಿದ್ಯಾರ್ಥಿಗಳಿದ್ದು,ಇಬ್ಬರು ಕನ್ನಡ ವಿಷಯ ಶಿಕ್ಷಕರು,ಸಮಾಜ ವಿಜ್ಞಾನ ಓರ್ವ ಶಿಕ್ಷಕರ ಕೊರತೆಇದೆ. ಅತಿ ಹೆಚ್ಚು ಅನುದಾನ ಈ ಶಾಲೆಗೆನೀಡಿದ್ದಾರೆ. 5 ತರಗತಿ ಕೊಠಡಿಗೆ 85ಲಕ್ಷ, ಪ್ರಯೋಗಾಲಯಕ್ಕೆ 15 ಲಕ್ಷ,ಗ್ರಂಥಾಲಯಕ್ಕೆ 10 ಲಕ್ಷ, ಅಡುಗೆ ಕೋಣೆಗೆ8 ಲಕ್ಷ, ಬಾಲಕ-ಬಾಲಕಿಯರಿಗಾಗಿ ಪ್ರತ್ಯೇಕಶೌಚಾಲಯಕ್ಕೆ 12 ಲಕ್ಷ, 520 ಮೀಟರ್‌ಕಾಂಪೌಂಡ್ ನಿರ್ಮಾಣಕ್ಕೆ 15 ಲಕ್ಷ ಸೇರಿ ಒಟ್ಟು 145.60 ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧವಾಗಿದೆ. ಜತೆಗೆ ವಿವಿಧಯೋಜನೆಗಳಲ್ಲಿ ಮಾದರಿ ಶಾಲೆಯನ್ನಾಗಿ ರೂಪಿಸಲು ಮುಂದಾಗಿದ್ದಾರೆ.
ಶಾಲೆ ಕೊರತೆಗಳ ಪಟ್ಟಿ ಸಲ್ಲಿಸಿದ್ದೇವೆ.ಶಾಲೆ ಆರಂಭಗೊಂಡ ಬಳಿಕ ಶಿಕ್ಷಕರುಹೊಸದಾಗಿ ಬರಲಿದ್ದು, ಮುಖ್ಯವಾಗಿಬಿಸಿಯೂಟ ತಯಾರಿಸುವ ಕೊಠಡಿ, ಆಹಾರಧಾನ್ಯ ಇಡಲು ಉಗ್ರಾಣ ಹಾಗೂಕಾಂಪೌಂಡ್, ಶಾಲಾ ಕೊಠಡಿಗಳ ಅಗತ್ಯವಿದೆ. ನಮ್ಮ ಶಾಲೆ ದತ್ತು ಪಡೆದಡಿಸಿಎಂ ಕಾರಜೋಳ ವಿಶೇಷ ಆಸಕ್ತಿ ವಹಿಸಿ,ಅಭಿವೃದ್ಧಿಗೆ ಮುಂದಾಗಿದ್ದಾರೆ. ಅವರಿಗೆ ಶಾಲೆ ಪರವಾಗಿ ಅಭಿನಂದಿಸುತ್ತೇವೆ.-ಆರ್.ಎಚ್. ಕುಂಬಾರ,ಮುಖ್ಯೋಪಾಧ್ಯಾಯ ಸರ್ಕಾರಿ ಪ್ರೌಢ ಶಾಲೆ, ಬೆಳಗಲಿ
ನಾಗರಾಳ ಸರ್ಕಾರಿ ಪ್ರೌಢಶಾಲೆ :
ಈ ಶಾಲೆಯಲ್ಲಿ 380 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಾಸಕರ ನಿಧಿ ಹಾಗೂ ವಿವಿಧಯೋಜನೆಗಳಡಿ ಶಾಲಾ ಮೈದಾನ ರಿಪೇರಿಗೆ10 ಲಕ್ಷ, ಶುದ್ಧ ಕುಡಿಯುವ ನೀರಿನ ಘಟಕಕ್ಕೆ 5ಲಕ್ಷ, ಅಡುಗೆ ಕೋಣೆಗೆ 8 ಲಕ್ಷ, 500 ಮೀಟರ್‌ಕಾಂಪೌಂಡ್ ನಿರ್ಮಾಣಕ್ಕೆ 15 ಲಕ್ಷ, ಶಾಲೆಗೆಸುಣ್ಣ-ಬಣ್ಣ ಹಚ್ಚಲು 2.50 ಲಕ್ಷ ಸೇರಿ ಒಟ್ಟು40.50 ಲಕ್ಷ ಅನುದಾನ ಮೀಸಲಿಡಲಾಗಿದೆ.ಜತೆಗೆ ಅರಣ್ಯ ಇಲಾಖೆಯಿಂದ ಇಡೀಶಾಲೆಯಲ್ಲಿ ಹಸಿರೀಕರಣ, ದಾನಿಗಳ ನೆರವಿನೊಂದಿಗೆ ಪ್ರಯೋಗಾಲಯ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.
ಆಟದ ಮೈದಾನ ದುರಸ್ತಿ, ಶುದ್ಧನೀರಿನ ಘಟಕ, ಕಾಂಪೌಂಡ್ ಹಾಗೂ ಶಿಕ್ಷಕರ ವಿಶ್ರಾಂತಿ ಗೃಹ ಸೇರಿ ಶಾಲೆಗೆಅಗತ್ಯವಾದ ಬೇಡಿಕೆಗಳ ಪಟ್ಟಿ ನೀಡಿದ್ದೇವೆ. ಡಿಸಿಎಂ ಕಾರಜೋಳ ಅಧಿಕಾರಿಗಳ ಮತ್ತುಶಾಲೆಯ ಶಿಕ್ಷಕರ ಸಭೆ ನಡೆಸಿ, ಶೀಘ್ರಅಭಿವೃದ್ಧಿಗೆ ಚಾಲನೆ ನೀಡುವುದಾಗಿತಿಳಿಸಿದ್ದಾರೆ. –ವಿ.ಎಸ್. ಪಡತಾರೆ, ಮುಖ್ಯೋಪಾಧ್ಯಾಯ, ಸರ್ಕಾರಿ ಪ್ರೌಢಶಾಲೆ ನಾಗರಳ
ಶಿರೋಳದ ಸರ್ಕಾರಿ ಪ್ರೌಢಶಾಲೆಗೆ 83 ಲಕ್ಷ :
ಈ ಶಾಲೆಯಲ್ಲಿ ಒಟ್ಟು 405 ವಿದ್ಯಾರ್ಥಿಗಳುವ್ಯಾಸಂಗ ಮಾಡುತ್ತಿದ್ದು, 26 ಲಕ್ಷ ವೆಚ್ಚದ ತರಗತಿ ಕೊಠಡಿ, 15 ಲಕ್ಷದಲ್ಲಿ ಪ್ರಯೋಗಾಲಯ, 10 ಲಕ್ಷದಲ್ಲಿಗ್ರಂಥಾಲಯ, ಅಡುಗೆ ಕೊಠಡಿ ನಿರ್ಮಾಣಕ್ಕೆ8 ಲಕ್ಷ, ಬಾಲಕ-ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ 12 ಲಕ್ಷ, 400ಮೀಟರ್ ಕಾಂಪೌಂಡ್ ನಿರ್ಮಾಣಕ್ಕೆ 12 ಲಕ್ಷಅನುದಾನ ಸೇರಿ ಒಟ್ಟು 83 ಲಕ್ಷ ಅನುದಾನ ವಿನಿಯೋಗಿಸಲು ಕ್ರಿಯಾ ಯೋಜನೆ ರೂಪಗೊಂಡಿದೆ.
ಡಿಸಿಎಂ ಕಾರಜೋಳ ನಮ್ಮ ಶಾಲೆ ದತ್ತು ಪಡೆದು ಕೊರತೆಗಳ ಬಗ್ಗೆವಿವರ ಪಡೆದಿದ್ದಾರೆ. ಸಮಗ್ರ ಅಭಿವೃದ್ಧಿಗೆಎಲ್ಲ ರೀತಿ ನೆರವು ನೀಡುವುದಾಗಿಹೇಳಿದ್ದಾರೆ. 5 ಶಾಲಾ ಕೊಠಡಿ, ಐವರುಶಿಕ್ಷಕರು, ಶೌಚಾಲಯ, ಅಡುಗೆ ಕೋಣೆಹಾಗೂ ಆಹಾರ ಧಾನ್ಯಕ್ಕಾಗಿ ಉಗ್ರಾಣದ ವ್ಯವಸ್ಥೆ ಆಗಬೇಕಿದೆ. – ಎ.ಡಿ. ಛಬ್ಬಿ, ಮುಖ್ಯೋಪಾಧ್ಯಾಯ, ಸರ್ಕಾರಿ ಪ್ರೌಢಶಾಲೆ, ಶಿರೋಳ
ಇಂಗಳಗಿ ಸರ್ಕಾರಿ ಪ್ರೌಢಶಾಲೆಗೆ 42 ಲಕ್ಷ ರೂ. :
ಇಲ್ಲಿ 218 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಾಲೆಗೆ ಅಗತ್ಯವಾಗಿ ಬೇಕಿರುವ ಮೂಲಭೂತ ಸೌಲಭ್ಯಗಳಪಟ್ಟಿಯನ್ನು ಕಾರಜೋಳ ಅವರು ಪಡೆದಿದ್ದಾರೆ. ಇದು ಅತ್ಯಂತಹಳೆಯ ಕಟ್ಟಡವಾಗಿದ್ದು, ಇಲ್ಲಿನ 20 ಶಾಲಾ ಕೊಠಡಿ ದುರಸ್ತಿಗೆ 20 ಲಕ್ಷ, ಬಾಲಕ-ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯನಿರ್ಮಾಣಕ್ಕೆ 8 ಲಕ್ಷ, ಕಾಂಪೌಂಡ್ ಎತ್ತರಿಸಲು 5 ಲಕ್ಷ, ಇಡೀ ಶಾಲೆಗೆ ಸುಣ್ಣ-ಬಣ್ಣ ಹಚ್ಚಲು 4 ಲಕ್ಷ ಸೇರಿ ಒಟ್ಟು 42 ಲಕ್ಷ ವಿನಿಯೋಗಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ.
ನಮ್ಮಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು ಇಬ್ಬರು ಸಮಾಜ ವಿಜ್ಞಾನ ಶಿಕ್ಷಕರು, ಓರ್ವಕನ್ನಡ ಹಾಗೂ ಹೊಲಿಗೆ ಶಿಕ್ಷಕರ ಕೊರತೆ ಇದೆ.ಅತ್ಯಂತ ಹಳೆಯ ಕಟ್ಟಡವಿದ್ದು, ಸಂಪೂರ್ಣ ದುರಸ್ತಿಮಾಡಿಸಬೇಕಿದೆ. ಈ ಕುರಿತು ಡಿಸಿಎಂ ಗಮನಕ್ಕೆ ತರಲಾಗಿದೆ. ಶಾಲೆಯ ಅಗತ್ಯತೆ ಕುರಿತು ಕ್ರಿಯಾ ಯೋಜನೆ ಸಲ್ಲಿಸಿದ್ದೇವೆ.– ಎ.ಡಿ. ಭಜಂತ್ರಿ, ಮುಖ್ಯೋಪಾಧ್ಯಾಯ, ಸರ್ಕಾರಿ ಪ್ರೌಢ ಶಾಲೆ, ಇಂಗಳಗಿ
ಮತಕ್ಷೇತ್ರದ ಐದು ಶಾಲೆದತ್ತು ಪಡೆದಿದ್ದು,ಒಟ್ಟು 3.96ಕೋಟಿ ಶಾಸಕರನಿಧಿಯಿಂದ ನೀಡಲಾಗಿದೆ. ಡಿಎಂಎಫ್, ಅರಣ್ಯಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜತೆಗೆ ದಾನಿಗಳನೆರವಿನೊಂದಿಗೆ ಮಾದರಿ ಶಾಲೆನಿರ್ಮಿಸಲಾಗುವುದು. ಎಲ್ಲಶಾಲೆಗಳಲ್ಲೂ ಪ್ರಯೋಗಾಲಯ,ಸಸಿ ನೆಡುವಿಗೆ, ಕಂಪ್ಯೂಟರ್ ಕೊಠಡಿ ನಿರ್ಮಿಸಲಾಗುವುದು. ಇನ್ಫೋಸಿಸ್‌ಸಂಸ್ಥೆಯಿಂದ ಜಮಖಂಡಿ ಮತ್ತುನಮ್ಮ ತಾಲೂಕಿನ ಎಲ್ಲ ಶಾಲೆಗೆಕಂಪ್ಯೂಟರ್ ನೀಡಿದ್ದು, ಶಿಕ್ಷಣಸಚಿವ ಸುರೇಶಕುಮಾರ ಅವರನ್ನುಕರೆಸಿ ಎಲ್ಲ ಶಾಲೆಗಳಿಗೂ ವಿತರಣೆ ಮಾಡಲಾಗುವುದು. ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾದರಿಮಾಡಿ, ಹಳ್ಳಿ ಮಕ್ಕಳ ಕಲಿಕೆಗೆ ವಿಶೇಷಅನುಕೂಲ ಕಲ್ಪಿಸಲಾಗುವುದು. –ಗೋವಿಂದ ಕಾರಜೋಳ, ಡಿಸಿಎಂ
-ಶ್ರೀಶೈಲ ಕೆ. ಬಿರಾದಾರ