Advertisement

ರೈತನ ಮಗಳಿಗೆ ಐದು ಚಿನ್ನದ ಪದಕ

12:45 PM Apr 28, 2022 | Team Udayavani |

ಮಾನ್ವಿ: ತಾಲೂಕಿನ ಸಾದಾಪೂರ ಗ್ರಾಮದ ರೈತ ಕುಟುಂಬದ ಮಗಳು ರಾಧ ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಗರಿಷ್ಠ ಅಂಕ ಪಡೆಯುವುದರೊಂದಿಗೆ ಐದು ಚಿನ್ನದ ಪದಕ ಪಡೆಯುವ ಮೂಲಕ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

Advertisement

ಪಟ್ಟಣದ ಕಲ್ಮಠ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಓದಿದ ರಾಧಳ ಶಿಕ್ಷಣಕ್ಕೆ ತಂದೆ ಶರಣಬಸವ ಕೃಷಿಯ ಜೊತೆಗೆ ಮೊದಲ ಆದ್ಯತೆ ನೀಡಿದ್ದರಿಂದ 5 ಚಿನ್ನದ ಪದಕ ಪಡೆಯಲು ಸಾಧ್ಯವಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯದ 40ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿ ರಾಧ ಮಾತನಾಡಿ, ಕೆ.ಪಿ.ಎಸ್‌.ಎಸ್‌.ಎಸ್‌. ಪದವಿ ಮಹಾವಿದ್ಯಾಲಯ ಕಲ್ಮಠ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಸಿದ್ದನಗೌಡ ಪಾಟೀಲ್‌ ಹಾಗೂ ಉಪನ್ಯಾಸಕರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆ ಲೆಕ್ಕಪರಿಶೋಧಕಿಯಾಗಬೇಕೆಂಬ ಆಸೆ ಇದೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next