Advertisement

ಲ್ಯಾಪ್‌ಟಾಪ್‌ಬಾಳಿಕೆಗೆ ಪಂಚ ಸೂತ್ರಗಳು

04:41 PM Nov 30, 2020 | Adarsha |

ಕೋವಿಡ್ ನ ಕಾರಣದಿಂದ ಈಗ ಹೆಚ್ಚಿನವರಿಗೆ ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಆ ನೆಪದಲ್ಲಿ ಎಲ್ಲರಿಗೂ ಲ್ಯಾಪ್‌ ಟಾಪ್‌ನ ಬಳಕೆ ಅನಿವಾರ್ಯ ಮತ್ತು ಅಗತ್ಯವಾಗಿದೆ. ಲ್ಯಾಪ್‌ ಟಾಪ್‌ಗ್ಳು ವೇಗವಾಗಿ ಆಪರೇಟ್‌ ಆಗಬೇಕು ಮತ್ತು ದೀರ್ಘ‌ಕಾಲ ಬಾಳಿಕೆ ಬರಬೇಕು ಅನ್ನುವುದು ಎಲ್ಲರ ಆಸೆ. ಹೀಗೆ ಆಗಬೇಕೆಂದರೆ, ಇಲ್ಲಿ ನೀಡಲಾಗಿರುವ ಮಾರ್ಗದರ್ಶಿ ಸೂತ್ರಗಳನ್ನು ತಪ್ಪದೇ ಪಾಲಿಸಬೇಕು.

Advertisement

1. ಲ್ಯಾಪ್‌ ಟಾಪನ್ನು ಇಡೋದೆಲ್ಲಿ ?

ಇದೆಂಥಾ ಪ್ರಶ್ನೆ? ಹೆಸರಲ್ಲೇ  ಇದೆಯಲ್ಲಾ, ಇದನ್ನು ತೊಡೆ ಮೇಲೆ ಇಟ್ಟುಕೊಳ್ಳೋದು ಅಂದಿರಾ? ಆ ಗ್ರಹಿಕೆ ತಪ್ಪು! ಲ್ಯಾಪ್‌ಟಾಪಿನಕೆಳಗಿರೋ ಫ್ಯಾನುಗಳಿಂದ ಬಿಸಿಯಾದ ಗಾಳಿ ಹೊರಬರುತ್ತಿರುತ್ತೆ. ಹೆಚ್ಚು ಹೊತ್ತು ಇದನ್ನು ತೊಡೆಗಳ ಮೇಲೆ ಇಟ್ಟರೆ ಚರ್ಮ ಸುಡುತ್ತೆ! ಇದನ್ನ ದಿಂಬು ಅಥವಾ ಹಾಸಿಗೆಯ ಮೇಲೆ ಇಟ್ಟರೆ ಇದರಕೆಳಗಿನ ಫ್ಯಾನುಗಳಿಂದ ಗಾಳಿ ಹೊರಹೋಗೋಕೆ ಸರಿಯಾಗದೇ ಲ್ಯಾಪ್‌ಟಾಪ್‌ ಬೇಗ ಬಿಸಿಯಾಗುತ್ತೆ. ಲ್ಯಾಪ್‌ ಟಾಪ್‌ ಬಿಸಿಯಾಗಿ ಹೆಚ್ಚೆಚ್ಚು ಹೊತ್ತು ಇದ್ದಷ್ಟೂ ಅದರ ಬ್ಯಾಟರಿ ಮತ್ತು ಒಳಗಿನ ಸಕೀìಟುಗಳ ಬಾಳಿಕೆಕಮ್ಮಿಯಾಗುತ್ತೆ. ಹಾಗಾಗಿ ಗಾಳಿ ಸೂಕ್ತವಾಗಿ ಆಡುವಂತಹ ಟೇಬಲ್ಲಿನ ಮೇಲೋ, ಲೆಟರ್‌ ಪ್ಯಾಡಿನ ಮೇಲೋ ಇಟ್ಟು ಬಳಸೋದು ಉತ್ತಮ

2.ಪಾಸ್‌ವರ್ಡ್‌

ಮನೆಗೆ ಬೀಗ ಹೇಗೆ ಮುಖ್ಯವೋ ಲ್ಯಾಪ್‌ಟಾಪ್‌ಗೆ ಪಾಸ್‌ವರ್ಡೂ ಅಷ್ಟೇ ಮುಖ್ಯ. ಪ್ರತೀ ಸಲ ಲಾಗಿನ್‌ ಆಗುವಾಗಲೂ ಪಾಸ್‌ವರ್ಡ್‌ ಕೊಡೋದು ಹಿಂಸೆ ಅಂತಕೆಲವೊಬ್ಬರು ಪಾಸ್‌ವರ್ಡ್‌ ಅನ್ನೇ ಇಟ್ಟಿರೋಲ್ಲ, ಇಟ್ಟರೂ ಪಾಸ್‌ವರ್ಡ್‌ ಅಂತಲೋ  ವೆಲ್‌ಕಂ ಅಂತಲೋ, ಅವರ ಹುಟ್ಟಿದ ದಿನಾಂಕವನ್ನೋ ಪಾಸ್‌ವರ್ಡ್‌ ಆಗಿ ಇಟ್ಟಿರುತ್ತಾರೆ. ಇದನ್ನು ಯಾರು ಬೇಕಾದರೂಊಹಿಸಬಹುದು. ಹಾಗಾಗಿ ಯಾರೂಊಹಿಸಲಾಗದಕ್ಲಿಷ್ಟಕರವಾದ ಪಾಸ್‌ವರ್ಡ್‌ ಒಂದನ್ನು ಇಡೋದು, ಇಟ್ಟಿರೋ ಪಾಸ್‌ವರ್ಡನ್ನು ಆಗಾಗ ಬದಲಿಸುವುದು ಅತೀ ಅಗತ್ಯ.

Advertisement

ಇದನ್ನೂ ಓದಿ:ಜನಾಕರ್ಷಿಸಿದ ಗೋಪಿಚಂದ್‌ ಛಾಯಾಚಿತ್ರ ಪ್ರದರ್ಶನ

3. ಡೆಸ್ಕ್ಟಾಪ್‌ ಮತ್ತು ಬೇರೆ ಡ್ರೈವ್‌ ಬಳಕೆ

ಕಂಪ್ಯೂಟರ್‌ ಬಳಸೋ ಸುಮಾರು ಜನ ದಿನದಕೆಲಸಕ್ಕೆ ಬೇಕಾದ ವರ್ಡ್‌ ಡಾಕ್ಯುಮೆಂಟ್ , ಎಕ್ಸೆಲ್‌ ಫೈಲು, ಪಿಡಿಎಫ್ ಫೈಲುಗಳನ್ನಕಂಪ್ಯೂಟರಿನ ಡೆಸ್ಕ್  ಟಾಪ್‌ ನ ಮೇಲೇ ಇಟ್ಟುಬಿಡುತ್ತಾರೆ. ಒಳಗೆಲ್ಲೋ ಫೋಲ್ಡರ್‌ ಒಳಗೆ ಇಟ್ಟರೆ ಬೇಕೆಂದಾಗ ಹುಡುಕೋದು ತಲೆನೋವು ಅಂತ ಎಲ್ಲವನ್ನೂ ಡೆಸ್ಕ್  ಟಾಪ್‌ನಲ್ಲಿ ಇಡೋದು ಯೋಗ್ಯವಲ್ಲ. ಡೆಸ್ಕ್ ಟಾಪಿನಲ್ಲಿರೋದು ನಿಮ್ಮ ಲ್ಯಾಪ್‌ಟಾಪಿನ ಸಿ ಡ್ರೈವಿನ ಮೇಲಿರುತ್ತೆ. ಸಿ ಡ್ರೈವಿನಲ್ಲಿ ಹೆಚ್ಚೆಚ್ಚು ಫೈಲುಗಳನ್ನ ತುಂಬಿದಂತಂತೆಲ್ಲಾ ಕಂಪ್ಯೂಟರಿನ ವೇಗಕಮ್ಮಿಯಾಗುತ್ತಾ ಹೋಗುತ್ತೆ. ಹಾಗಾಗಿ ತೀರಾ ಅಗತ್ಯವಿದ್ದದ್ದನ್ನು ಮಾತ್ರ ಡೆಸ್ಕ್ ಟಾಪಿನ ಮೇಲಿಡಿ. ಉಳಿದದ್ದನ್ನೆಲ್ಲಾ ಲ್ಯಾಪ್‌ಟಾಪಿನ ಬೇರೆ ಡ್ರೈವುಗಳಲ್ಲಿ ಸೂಕ್ತ ಹೆಸರಿನ ಫೋಲ್ಡರ್‌ ಮಾಡಿ ಹಾಕಿಡಿ.

4. ಎಲ್ಲಕ್ಕೂ ಸಿ ಡ್ರೈವ್‌ ಸೂಕ್ತವಲ್ಲ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್‌

ಮಾಡೋಕೆ ನೋಡೋ ತಂತ್ರಾಂಶಗಳನ್ನೆಲ್ಲಾ ಸಿ ಡ್ರೈವಿನಲ್ಲೇ ಇನ್‌ ಸ್ಟಾಲ್‌ ಆಗೋಕೆ ನೋಡುತ್ತೆ. ಕಂಪ್ಯೂಟರಿನಲ್ಲಿ ಫೋಟೋಸ್‌, ವಿಡಿಯೋಸ್‌ ಅಂತ ಇರೋ ಫೋಲ್ಡರ್‌ ಕೂಡ ಡ್ರೈವಿನಲ್ಲೇ ಇರುತ್ತೆ! ಸುಮಾರು ಜನ ಫೋಟೋ-  ವಿಡಿಯೋಗಳನ್ನು ಈ ಫೋಲ್ಡರುಗಳಲ್ಲಿಟ್ಟು ಲ್ಯಾಪ್‌ಟಾಪ್‌ ನಿಧಾನವಾಯ್ತು ಅಂತ ಒದ್ದಾಡುತ್ತಾರೆ. ಹಾಗಾಗಿ ಲ್ಯಾಪ್‌ ಟಾಪಿನಲ್ಲಿ ಡಿ, ಇ, ಎಫ್ ಮುಂತಾರ ಪಾರ್ಟಿಷನ್‌ ಮಾಡಿ ಒಂದನ್ನು ಸಾಫ್ಟ್ವೇರ್‌ಗಳ ಸಂಗ್ರಹಕ್ಕೆ, ಇನ್ನೊಂದು ಸಂಗೀತ, ಫೋಟೋ ಮುಂತಾದವು ಗಳ ಸಂಗ್ರಹಕ್ಕೆ ಮತ್ತೂಂದು ಇತರೇಕಡತಗಳ ಸಂಗ್ರಹಕ್ಕೆ ಅಂತ ವಿಂಗಡಿಸಿಟ್ಟು ಕೊಂಡರೆ, ನಿಮಗೆ ಬೇಕಾದದ್ದನ್ನು ಬೇಕಾದಾಗ ವೇಗವಾಗಿ ಹುಡುಕಬಹುದು.

5. ದಿನನಿತ್ಯದ ಶಟ್‌ಡೌನ್‌

ನಮಗೆ ನಿದ್ದೆ ಹೇಗೆ ಅಗತ್ಯವೋ ಹಾಗೆ ಲ್ಯಾಪ್‌ಟಾಪ್‌ಗೆ ಶಟ್‌ ಡೌನು. ನಿಮ್ಮ ದೈನಂದಿನಕೆಲಸಗಳನ್ನು ಮುಗಿಸಿದ ನಂತರ, ತೆರೆದ ಫೈಲುಗಳನ್ನೆಲ್ಲಾ ಮುಚ್ಚಿ ಲ್ಯಾಪ್‌ಟಾಪ್‌ ಅನ್ನು ಶಟ್‌ಡೌನ್‌ ಮಾಡೋದು, ಮತ್ತೆ ಮಾರನೇ ದಿನ ಲ್ಯಾಪ್‌ಟಾಪ್‌ ಅನ್ನು ಹೊಸದಾಗಿ ಸ್ಟಾರ್ಟ್‌ ಮಾಡೋದು ಅತೀ ಅಗತ್ಯ. ಕೆಲವರು ಮತ್ತೆ ಯಾರು ಫೈಲುಗಳನ್ನು ತೆಗೆಯುತ್ತಾರೆ ಅಂತ ಫೈಲುಗಳನ್ನು,ಲ್ಯಾಪ್‌ ಟಾಪ್‌ ಅನ್ನು ದಿನಗಟ್ಟಲೇ ಹಾಗೇ ಇಟ್ಟಿರುತ್ತಾರೆ. ಹೀಗೆ ಶಟ್‌ಡೌನೇ ಮಾಡದಿದ್ದರೆ ನಿಧಾನವಾಗಿ ಲ್ಯಾಪ್‌ ಟಾಪಿನ ವೇಗಕುಂದುತ್ತಾ ಬರುತ್ತೆ.

„ ಪ್ರಶಸ್ತಿ. ಪಿ

Advertisement

Udayavani is now on Telegram. Click here to join our channel and stay updated with the latest news.

Next