Advertisement

Five Eyes; ಫೈವ್‌ ಐಸ್‌ ಜಾಗತಿಕವಾಗಿ ಮತ್ತೆ ಸದ್ದು  ಮಾಡಿದ ಗುಪ್ತಚರ ಒಕ್ಕೂಟ

01:30 AM Oct 01, 2023 | Team Udayavani |
ಖಲಿಸ್ಥಾನಿ ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ  ಅವರ ಆರೋಪ ಇದೀಗ ಭಾರೀ ಚರ್ಚೆಗೆ ಒಳಗಾಗಿದೆ. ಬ್ರಿಟನ್‌ನ ತನಿಖಾ ಸಂಸ್ಥೆಗಳು ಮತ್ತು  “ಫೈವ್‌ ಐಸ್‌’ ಎಂಬ ಅಂತಾರಾಷ್ಟ್ರೀಯ ಗುಪ್ತಚರ ಒಕ್ಕೂಟದ ಮಾಹಿತಿಯ ಆಧಾರದ ಮೇಲೆ ಈ ಆರೋಪವನ್ನು ಟ್ರಾಡೊ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಇದಕ್ಕೆ ಪುಷ್ಟಿ ನೀಡುವಂತೆ ಕೆನಡಾದ ಅಮೆರಿಕ ರಾಯಭಾರಿ ಡೇವಿಡ್‌ ಕೊಹೇನ್‌ ಅವರು ಕೂಡ ಫೈವ್‌ ಐಸ್‌ ಇಂತಹ ಮಾಹಿತಿಯನ್ನು ಕಲೆಹಾಕಿತ್ತು ಎಂಬುದನ್ನು ಧೃಡೀಕರಿಸಿದ್ದಾರೆ. ಹಾಗಾದರೆ ಏನಿದು ಫೈವ್‌ ಐಸ್‌ ಒಕ್ಕೂಟ? ಯಾವ ದೇಶಗಳೆಲ್ಲ ಇದರಲ್ಲಿ ಇವೆ? ಇದರ ಕಾರ್ಯಾಚರಣೆ ಹೇಗೆ? ಎಂಬುದರ ಮಾಹಿತಿ ಇಲ್ಲಿದೆ.
ಏನಿದು ಫೈವ್‌ ಐಸ್‌ ಅಲಯನ್ಸ್‌
ಐದು ಪ್ರಮುಖ ದೇಶಗಳು ಒಂದಾಗಿ ಗುಪ್ತಚರ ಮಾಹಿತಿಗಳನ್ನು ಕಲೆಹಾಕಲು ಮತ್ತು ಪರಸ್ಪರ ವಿನಿಮಯ ಮಾಡಿಕೊಳ್ಳಲು ರಚಿಸಿದ ಒಂದು ಬೇಹುಗಾರಿಕ ಒಕ್ಕೂಟವಾಗಿದೆ.
ಬೇಹುಗಾರಿಕೆಯಲ್ಲೂ ಮೈತ್ರಿ!
  ಫೈವ್‌ ಐಸ್‌ನಲ್ಲಿನ ಪಾಲುದಾರ ರಾಷ್ಟ್ರಗಳು ಅತೀ
ಪ್ರಮುಖವಾದ ಹಾಗೂ ವಿಶಾಲ ವ್ಯಾಪ್ತಿಯ ಗುಪ್ತಚರ ಮಾಹಿತಿ ಗಳನ್ನು ಹಂಚಿಕೊಳ್ಳುತ್ತವೆ. ಪ್ರಪಂಚದ ಅತ್ಯಂತ ಏಕೀಕೃತ ಬಹುಪಕ್ಷೀಯ ಗುಪ್ತಚರ ವ್ಯವಸ್ಥೆಗಳಲ್ಲಿ  ಇದು ಒಂದಾಗಿದೆ.
  ಫೈವ್‌ಐಸ್‌ನಲ್ಲಿರುವ ದೇಶಗಳು ವಿಭಿನ್ನ ಸಾಮಾಜಿಕ ವ್ಯವಸ್ಥೆ
ಯನ್ನು ಹೊಂದಿವೆ. ದೃಢವಾದ ಕಾನೂನು ಹಾಗೂ ಮಾನವ ಹಕ್ಕು ಗಳನ್ನು ಹೊಂದಿದ್ದು, ಸಾಮಾನ್ಯ ಭಾಷೆಯನ್ನು ಹೊಂದಿವೆ. ಈ ಎಲ್ಲ ಅಂಶಗಳು ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡುವಲ್ಲಿ, ಗುಪ್ತಚರ ಮಾಹಿತಿ ಹಂಚಿಕೊಳ್ಳುವಲ್ಲಿ ಈ ರಾಷ್ಟ್ರಗಳಿಗೆ ಸಹಕಾರಿಯಾಗಿವೆ. c
ಬದಲಾದ ನ್ಯೂಜಿಲ್ಯಾಂಡ್‌ ಕಾರ್ಯತಂತ್ರ
ಸದಸ್ಯ ರಾಷ್ಟ್ರಗಳ ನಡುವಿನ ಒಗ್ಗಟ್ಟೇ ಈ “ಫೈವ್‌ ಐಸ್‌’ ಒಕ್ಕೂಟದ ಶಕ್ತಿ. ಆದರೆ 2021ರಿಂದೀಚೆಗೆ ನ್ಯೂಜಿಲ್ಯಾಂಡ್‌, ಚೀನದ ಕುರಿತಂತೆ ತಟಸ್ಥ ಧೋರಣೆಯನ್ನು ಅನುಸರಿಸತೊಡ ಗಿದೆ. ಹಾಂಕಾಂಗ್‌ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿನ ಚೀನದ ರಾಜಕೀಯ ನಡೆ ಹಾಗೂ ಅಲ್ಲಿನ ಅಲ್ಪಸಂಖ್ಯಾಕರನ್ನು ಚೀನ ನಡೆಸಿಕೊಳ್ಳುತ್ತಿರುವ ರೀತಿಗೆ ಉಳಿದ ದೇಶಗಳು ಖಂಡನೆ ವ್ಯಕ್ತಪಡಿಸುತ್ತಲೇ ಬಂದಿದ್ದರೂ ನ್ಯೂಜಿಲ್ಯಾಂಡ್‌ ಮಾತ್ರ ಇದರಿಂದ ದೂರ ಉಳಿದಿದೆ. ಇದಕ್ಕೆ ಕಾರಣ ಚೀನ ಮತ್ತು ನ್ಯೂಜಿಲೆಂಡ್‌ ನಡುವಿನ ಅತೀ ಮುಖ್ಯವಾದ ವ್ಯಾಪಾರ ಒಪ್ಪಂದ. ಚೀನ, ನ್ಯೂಜಿಲ್ಯಾಂಡ್‌ನ‌ ಅತೀ ದೊಡ್ಡ ರಫ್ತುದಾರ ದೇಶ ಎಂಬುದು ಗಮನಾರ್ಹ ಅಂಶ.
ಫೈವ್‌ ಐಸ್‌ ಹಿನ್ನೆಲೆ
 ಎರಡನೇ ಮಹಾಯುದ್ಧದ ಅನಂತರ 1946ರಲ್ಲಿ ಅಮೆರಿಕ ಹಾಗೂ ಬ್ರಿಟನ್‌ ನಡುವೆ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುವ ಪ್ರಕ್ರಿಯೆ ಆರಂಭವಾಯಿತು.
 1943ರಲ್ಲಿ ಬ್ರಿಟನ್‌ ಹಾಗೂ ಯುಎಸ್‌ ನಡುವೆ ಅಂಕಿತ ಹಾಕಲಾದ ಒಪ್ಪಂದವು “ಫೈವ್‌ ಐಸ್‌’ನ ಮೂಲ ತಳಹದಿ.  ಯುಎಸ್‌ ವಾರ್‌ ಡಿಪಾರ್ಟ್‌ ಮೆಂಟ್‌ ಹಾಗೂ ಯುಕೆಯ ಇಂಟೆಲಿಜೆನ್ಸ್‌ ಆ್ಯಂಡ್‌ ಸೆಕ್ಯುರಿಟಿ ಏಜೆನ್ಸಿ ಗವರ್ನ್ಮೆಂಟ್‌ ಕೋಡ್‌ ಆ್ಯಂಡ್‌ ಸೈಬರ್‌ ಸ್ಕೂಲ್‌ನ ನಡುವೆ ಈ ಒಪ್ಪಂದ ಏರ್ಪಟ್ಟಿತ್ತು.
 1949ರಲ್ಲಿ ಕೆನಡಾ, 1955ರಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ ಈ ಒಕ್ಕೂಟಕ್ಕೆ ಸೇರ್ಪಡೆ.
 ಐದು ದೇಶಗಳನ್ನು ಹೊರತುಪಡಿಸಿ ಈ ರಾಷ್ಟ್ರಗಳಿಗೆ ಅತ್ಯಾಪ್ತವಾಗಿರುವ ಮೂರನೇ ರಾಷ್ಟ್ರ ಮತ್ತು ಗುಪ್ತಚರ ಸಂಸ್ಥೆಗಳಿಂದಲೂ ಮಾಹಿತಿ ವಿನಿಮಯಕ್ಕಾಗಿ ಒಕ್ಕೂಟ ಸಹಯೋಗವನ್ನು ಪಡೆಯುತ್ತದೆ.
 1980ರ ವರೆಗೂ ಅಧಿಕೃತವಾಗಿ ಒಪ್ಪಂದವನ್ನು ಬಹಿರಂಗ ಪಡಿಸಿರಲಿಲ್ಲ, 2010ರಲ್ಲಿ ಯುಕೆ-ಯುಎಸ್‌ಎ ನಡುವಣ ಒಪ್ಪಂದದ ದಾಖಲೆಗಳನ್ನು ಬಿಡುಗಡೆಗೊಳಿಸಲಾಯಿತು.
 ಕೆನಡಾದ ನಾಲ್ಕು ಪ್ರಮುಖ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿವೆ. ಅವುಗಳೆಂದರೆ:
 ಕಮ್ಯುನಿಕೇಶನ್ಸ್‌ ಸೆಕ್ಯುರಿಟಿ ಎಸ್ಟಾಬ್ಲಿಷ್‌ಮೆಂಟ್‌ ( ಸಿಎಸ್‌ಇ )
 ರಾಯಲ್‌ ಕೆನಡಿಯನ್‌ ಮೌಂಟೆಡ್‌ ಪೊಲೀಸ್‌ ( ಆರ್‌ಸಿಎಂಪಿ )
 ಕೆನಡಿಯನ್‌ ಸೆಕ್ಯುರಿಟಿ ಇಂಟೆಲಿಜೆನ್ಸ್‌ ಸರ್ವೀಸ್‌ ( ಸಿಎಸ್‌ಐಎಸ್‌ )
 ಕೆನಡಿಯನ್‌ ಫೋರ್ಸ್‌ ಇಂಟೆಲಿಜೆನ್ಸ್‌ ಕಮಾಂಡ್‌ (ಸಿಎಫ್ಐಸಿ)
ಕಾರ್ಯಾಚರಣೆ ಹೇಗೆ?
01ಆರಂಭಿಕ ವರ್ಷಗಳಲ್ಲಿ ಗುಪ್ತಚರ ಮಾಹಿತಿ ಕಲೆ ಹಾಕಲು ಮತ್ತು ವಿನಿಮಯ ಮಾಡಿಕೊಳ್ಳಲು ರೇಡಿಯೋ ಸಿಗ್ನಲ್‌ಗ‌ಳನ್ನು ಅವಲಂಬಿಸಿದ್ದ ಈ  ಒಕ್ಕೂಟ ಈಗ ಡಿಜಿಟಲ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ.
02ಐದು ದೇಶಗಳು ಭದ್ರತೆ ಸಂಬಂಧಿಸಿದಂತೆ ಗುಪ್ತಚರ ಮಾಹಿತಿಗಳನ್ನು ಕಲೆ ಹಾಕುತ್ತದೆ ಮತ್ತು ಪರಸ್ಪರ ವಿನಿಮಯ ಮಾಡಿ ಕೊಳ್ಳುತ್ತವೆ. ವಿದೇಶಗಳ ಮೇಲೆ ಹದ್ದು ಗಣ್ಣಿಡುವ ಜತೆಯಲ್ಲಿ ಆಯಾಯ ದೇಶಗಳ ನಾಗರಿಕರ ಮೇಲೂ ಈ ಒಕ್ಕೂಟ ನಿಗಾ ಇರಿಸುತ್ತದೆ. ಈ ಸಂಬಂಧ 2013 ರಲ್ಲಿ ಜಾಗತಿಕ ಮಟ್ಟದಲ್ಲಿ  “ಫೈವ್‌ ಐಸ್‌’ ಭಾರೀ ಚರ್ಚೆಗೊಳಗಾಗಿತ್ತು.
03ಕೆಲವು ವರ್ಷಗಳಿಂದೀಚೆಗೆ  ಚೀನದ ಬೆಳವಣಿಗೆ, ಮತ್ತದರ ವಿಸ್ತರಣ ವಾದದ  ಮೇಲೆ  ನಿಗಾ ಇಡಲು ಒಕ್ಕೂಟ ಹೆಚ್ಚಿನ ಆದ್ಯತೆ ನೀಡುತ್ತಿದೆ.
042016ರಲ್ಲಿ ಫೈವ್‌ ಐಸ್‌ ಇಂಟೆಲಿಜೆನ್ಸ್‌ ಒವರ್‌ಸೈಟ್‌ ಆ್ಯಂಡ್‌ ರಿವ್ಯೂ ಕೌನ್ಸಿಲ್‌ ಆರಂಭ. ಇದು ರಾಜಕೀಯ ರಹಿತವಾದ ಗುಪ್ತಚರ ಮಾಹಿತಿಗಳನ್ನು ಗಮನಿಸುವುದರ ಜತೆಯಲ್ಲಿ ಇವುಗಳ ವಿಶ್ಲೇಷಣೆ ಕಾರ್ಯದಲ್ಲಿಯೂ ತೊಡಗಿಕೊಂಡಿದೆ.
Advertisement

Udayavani is now on Telegram. Click here to join our channel and stay updated with the latest news.

Next