Advertisement

ಮುಂಬಯಿಯಲ್ಲಿ ವಿಮಾನ ಪತನ: ಐದು ಸಾವು

06:00 AM Jun 29, 2018 | |

ಮುಂಬಯಿ: ಪೈಲಟ್‌ನ ನಿಯಂತ್ರಣ ತಪ್ಪಿದ ಲಘು ವಿಮಾನವೊಂದು ನಿರ್ಮಾಣ ಹಂತದ ಕಟ್ಟಡದ ಮೇಲೆ ಪತನಗೊಂಡು, ಹೊತ್ತಿ ಉರಿದ ಘಟನೆ ಪೂರ್ವ ಮುಂಬೈನ ಘಾಟ್ಕೊಪರ್‌ ನಗರದಲ್ಲಿ ಗುರುವಾರ ನಡೆದಿದೆ. ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಸೇರಿ ಐವರು ಮೃತಪಟ್ಟಿದ್ದಾರೆ. 24 ಗಂಟೆಗಳ ಅಂತರದಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.

Advertisement

ಪತನಗೊಂಡಿರುವ “ಕಿಂಗ್‌ ಏರ್‌ ಸಿ90′ ವಿಮಾನ 12 ಸೀಟುಗಳ ಸಾಮರ್ಥ್ಯದ್ದಾಗಿದ್ದು, ಇಬ್ಬರು ಪೈಲಟ್‌ಗಳು ಹಾಗೂ ಇಬ್ಬರು ನಿರ್ವ ಹಣಾ ಎಂಜಿನಿಯರ್‌ಗಳು ವಿಮಾನದಲ್ಲಿದ್ದರು. ಈ ನಾಲ್ವರೂ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪತನದ ಬಳಿಕ ವಿಮಾನ ಕಟ್ಟಡದ ಮೇಲಿಂದ ಕೆಳಕ್ಕೆ ಉರುಳಿದ ಪರಿಣಾಮ ಪಾದಚಾರಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರವಷ್ಟೇ ನಾಸಿಕ್‌ನಲ್ಲಿ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ‌ ಎಂಜಿನಿಯರ್‌ಗಳು ಪ್ರಯಾಣಿಸುತ್ತಿದ್ದ ಸುಖೋಯ್‌ ಸು-30ಎಂ ವಿಮಾನ ಪತನಗೊಂಡಿತ್ತು. ಅದೃಷ್ಟವಶಾತ್‌ ಯಾರಿಗೂ ಏನೂ ಆಗಿರಲಿಲ್ಲ. ಇದರ ಬೆನ್ನಿಗೇ ಮುಂಬೈ ದುರಂತ ಸಂಭವಿಸಿದೆ. 

ಯುವೈ ಏವಿಯೇಷನ್‌ಗೆ ಸೇರಿದ್ದು: ಉತ್ತರ ಪ್ರದೇಶ ಸರಕಾರಕ್ಕೆ ಸೇರಿದ್ದ ಈ ವಿಮಾನವನ್ನು ಇತ್ತೀಚೆಗಷ್ಟೇ ಯುವೈ ಏವಿಯೇಷನ್‌ಗೆ ಮಾರಾಟ ಮಾಡಲಾಗಿತ್ತು. 

ತನಿಖೆಗೆ ಆದೇಶ: ಪ್ರಾಥಮಿಕ ವರದಿ ಪಡೆದು ಕೊಂಡಿರುವ ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು, “ಕೂಡಲೇ ಸಮಗ್ರ ತನಿಖೆ ನಡೆಸಿ ವರದಿ ನೀಡಿ’ ಎಂದು ಡಿಜಿಸಿಎಗೆ ನಿರ್ದೇಶನ ನೀಡಿದ್ದಾರೆ. 

ಪೈಲಟ್‌ ಸಮಯ ಪ್ರಜ್ಞೆಯಿಂದ ಹಲವರ ಜೀವ ಉಳಿದಿದೆ. ತಮ್ಮ ಜೀವದ ಹಂಗು ತೊರೆದು, ಜನನಿಬಿಡ ಪ್ರದೇಶದಲ್ಲಿ ಬೀಳಬಹುದಾದ ವಿಮಾನ ವನ್ನು ನಿರ್ಮಾಣ ಹಂತದ ಕಟ್ಟಡದ ಮೇಲೆ ಬೀಳಿಸಿದ್ದಾರೆ. ಅವರಿಗೊಂದು ಸಲಾಮ್‌. ಆದರೆ, ದುರದೃಷ್ಟವಶಾತ್‌ ಐದು ಸಾವು ಸಂಭವಿಸಿದೆ.
ಪ್ರಫ‌ುಲ್‌ ಪಟೇಲ್‌, ನಾಗರಿಕ ವಿಮಾನಯಾನ ಮಾಜಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next