Advertisement

ಒಎನ್‌ಜಿಸಿ  ನೌಕೆ ಸ್ಫೋಟ: ಐವರ ಸಾವು

09:41 AM Feb 14, 2018 | Team Udayavani |

ಕೊಚ್ಚಿ/ಹೊಸದಿಲ್ಲಿ: ಕೇರಳದ ಕೊಚ್ಚಿಯ ಹಡಗು ನಿರ್ಮಾಣ ಕಟ್ಟೆಯಲ್ಲಿ ಭಾರತೀಯ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ)ಕ್ಕೆ ಸೇರಿದ ನೌಕೆಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಐವರು ಅಸುನೀಗಿ, ಮೂವರು ಗಾಯಗೊಂಡಿದ್ದಾರೆ. ಅಸುನೀಗಿದವರು ಗುತ್ತಿಗೆ ಕಾರ್ಮಿಕ ರಾಗಿದ್ದಾರೆ. ಗಾಯಗೊಂಡ ಮೂವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾ ಗಿದ್ದು, ಈ ಪೈಕಿ ಶೇ.40ರಷ್ಟು ಸುಟ್ಟ ಗಾಯ ಗಳಾಗಿರುವ ಒಬ್ಬನ ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ತನಿಖೆಗೆ ಕೇಂದ್ರ ನೌಕಾಯಾನ ಸಚಿವ ನಿತಿನ್‌ ಗಡ್ಕರಿ ಆದೇಶಿಸಿದ್ದಾರೆ.

Advertisement

ಸಾಗರ ಭೂಷಣ ನೌಕೆಯಲ್ಲಿ ಮಂಗಳವಾರ ಬೆಳಗ್ಗೆ 9.15ಕ್ಕೆ ಈ ಘಟನೆ ನಡೆದಿದ್ದು, ನಿಗಮದ ಯಾವುದೇ ಸಿಬಂದಿಗೆ ಅಪಾಯವಾಗಿಲ್ಲ. 2017ರ ಡಿ.7ರಿಂದ ನೌಕೆ ಹಡಗು ಕಟ್ಟೆಯಲ್ಲಿ ಲಂಗರು ಹಾಕಿತ್ತು. ನೌಕೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಯಾವ ಕಾರಣದಿಂದಾಗಿ ಸ್ಫೋಟ ಸಂಭ ವಿಸಿದೆ ಎನ್ನುವುದು ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಒಎನ್‌ಜಿಸಿ ತಿಳಿಸಿದೆ. ಘಟನೆ ನಡೆದಾಗ 11 ಮಂದಿ ಅಲ್ಲಿ ಸಿಲುಕಿ ಕೊಂಡಿದ್ದು, ನಂತರ ಅವರನ್ನು ರಕ್ಷಿಸಲಾ ಯಿತು ಎಂದು ಕೊಚ್ಚಿ ನಗರ ಪೊಲೀಸ್‌ ಆಯುಕ್ತ ಎಂ.ಪಿ.ದಿನೇಶ್‌ ಮಾಹಿತಿ ನೀಡಿದ್ದಾರೆ. 

ನೀರಿನ ಟ್ಯಾಂಕ್‌ನಲ್ಲಿ ಸ್ಫೋಟ?: ದುರಸ್ತಿಯಲ್ಲಿರುವ ನೌಕೆಯ ಎದುರು ಭಾಗದಲ್ಲಿರುವ ನೀರಿನ ಟ್ಯಾಂಕ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಫೋಟದಿಂದಾಗಿ ಹೊರಸೂಸಲ್ಪಟ್ಟ ಹೊಗೆ ದೇಹದ ಒಳಕ್ಕೆ ಸೇರಿ ಸಾವು ಉಂಟಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

ತನಿಖೆಗೆ ಗಡ್ಕರಿ ಆದೇಶ: ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸಚಿವ ಗಡ್ಕರಿ ತನಿಖೆಗೆ ಆದೇಶಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೂಡ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next