ಇಂಗ್ಲಿಷ್ ಬಜಾರ್: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದ ಕಚ್ಚಾ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಭಾರತ-ಬಾಂಗ್ಲಾದೇಶ ಗಡಿಗೆ ಸಮೀಪವಿರುವ ಕಾಲಿಯಾಚಕ್‌ನ ಗೋಪಾಲನಗರ ಗ್ರಾಮದಲ್ಲಿ ಭಾನುವಾರ ಮಕ್ಕಳು ಚೆಂಡುಗಳೆಂದು ತಿಳಿದು
ಆಟವಾಡುತ್ತಿದ್ದ ಕಚ್ಚಾ ಬಾಂಬ್‌ಗಳು ಸ್ಫೋಟಗೊಂಡ ನಂತರ ನಾಲ್ವರು ಮಕ್ಕಳು ಗಾಯಗೊಂಡಿದ್ದರು.
ಗಂಭೀರವಾಗಿ ಗಾಯಗೊಂಡು ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿರುವ ಇಬ್ಬರು ಮಕ್ಕಳ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಬಂಧಿತ ಐವರು ಸ್ಥಳೀಯ ನಿವಾಸಿಗಳು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತವ ಮೈತಿ ತಿಳಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ದಳವು ಸ್ಥಳೀಯ ಮಸೀದಿಯ ಪಕ್ಕದ ಮರದ ಕೆಳಗೆ ಪತ್ತೆಯಾದ ಕಚ್ಚಾ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತಹ ಸ್ಫೋಟಕಗಳು ಇವೆಯೇ ಎಂದು ಕಂಡುಹಿಡಿಯಲು ಪ್ರದೇಶವನ್ನು ಸ್ಕ್ಯಾನ್ ಮಾಡುತ್ತಿದೆ.