Advertisement
ಪ್ರತೀ ವರ್ಷ ವಿವಿಧ ವಿಭಾಗದಲ್ಲಿ ಕ್ರೀಡಾ ಸ್ಪರ್ಧೆಗಳು ನಡೆಯುತ್ತಿದ್ದವು. ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಾಥಮಿಕ, ಪ್ರೌಢ, ಪ.ಪೂ., ಪದವಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಾಲೂಕು ಮಟ್ಟದಿಂದ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ತನಕ ಅರ್ಹತೆ ಪಡೆಯುತ್ತಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಭ್ಯಾಸಕ್ಕೆಂದೇ ದಿನದ ಒಂದು ಗಂಟೆ ಮೀಸಲಿಡಲಾಗುತ್ತದೆ. ಆದರೆ ಕೋವಿಡ್ ಕಾರಣದಿಂದ 2 ವರ್ಷಗಳಿಂದ ಅಭ್ಯಾಸ ತರಗತಿ ನಡೆದಿಲ್ಲ, ಸ್ಪರ್ಧೆಯೂ ಇಲ್ಲ.
ಎರಡು ವರ್ಷಗಳಿಂದ ಅಭ್ಯಾಸ ತಪ್ಪಿ ಹೋಗಿರುವ ವಿದ್ಯಾರ್ಥಿಗಳಿಗೆ ತಾವು ಆಯ್ದುಕೊಂಡಿರುವ ಕ್ರೀಡೆಯಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಿಸಲು ಸಾಧ್ಯವಿಲ್ಲ. ಅಭ್ಯಾಸ ಅನಿವಾರ್ಯ. ಅದಕ್ಕೆ ಒಂದಷ್ಟು ಸಮಯ ಬೇಕು. ಈ ವರ್ಷ ವಲಯ, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಪೋರ್ಟ್ಸ್ ಮತ್ತು ಗೇಮ್ಸ್ ನಡೆಸುವ ಬಗ್ಗೆ ಇನ್ನೂ ಸ್ಪಷ್ಟ ನಿಲುವು ಪ್ರಕಟವಾಗದ ಕಾರಣ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅವಕಾಶ ಅನುಮಾನ. ಇದನ್ನೂ ಓದಿ:ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ
Related Articles
ದ.ಕ., ಉಡುಪಿ, ಕೊಡಗು ಜಿಲ್ಲೆಯನ್ನು ಒಳಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ 207 ಪದವಿ ಕಾಲೇಜುಗಳಲ್ಲಿ ಕ್ರೀಡಾ ಅಭ್ಯಾಸ ಪ್ರಾರಂಭಗೊಂಡಿದೆ. ಪದವಿ ಕಾಲೇಜು, ವಿ.ವಿ., ಅಂತರ್ ವಿ.ವಿ. ಮಟ್ಟದ ಕ್ರೀಡಾ ಸ್ಪರ್ಧೆಗಳ ಆಯೋಜನೆಗೆ ಸಿದ್ಧತೆ ನಡೆದಿದ್ದು ಕೆಲವು ಸ್ಪರ್ಧೆಗಳಿಗೆ ದಿನ ನಿಗದಿ ಮಾಡಿರುವ ಕಾರಣ ಅಭ್ಯಾಸ ನಡೆಯುತ್ತಿದೆ. ಆದರೂ ನಿರಂತರ ಅಭ್ಯಾಸ ಇಲ್ಲದಿರುವುದರಿಂದ ಸಾಮರ್ಥ್ಯ ತೋರ್ಪಡಿಕೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕ್ರೀಡಾಪಟು ಅಶ್ವಿನ್.
Advertisement
ನವೆಂಬರ್ ಕೊನೆಯ ವಾರದಿಂದ ಪದವಿ ಕಾಲೇಜುಗಳಿಗೆ ಸಂಬಂಧಿಸಿ ಕ್ರೀಡಾ ಚಟುವಟಿಕೆಗಳು ಪ್ರಾರಂಭಗೊಳ್ಳಲಿವೆ. ಈಗಾಗಲೇ ಆಯಾ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರ ನೇತೃತ್ವದಲ್ಲಿ ಅಭ್ಯಾಸ ನಡೆಯುತ್ತಿದೆ.– ಜೆರಾಲ್ಡ್ ಡಿ’ಸೋಜಾ,
ನಿರ್ದೇಶಕ, ವಿ.ವಿ. ದೈಹಿಕ ಶಿಕ್ಷಣ ವಿಭಾಗ ಮೈದಾನದಲ್ಲಿ ಅಭ್ಯಾಸ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ. ಥಿಯರಿ ಬೋಧನೆ ನಡೆಯುತ್ತಿದೆ.
– ಎಸ್.ಪಿ. ಮಹಾದೇವ, ಸುಳ್ಯ ಬಿಇಒ