ಹೊಸದಿಲ್ಲಿ: ಅಂತಾರಾಷ್ಟ್ರೀಯ ವಿತ್ತ ವಿಶ್ಲೇಷಣೆ ಸಂಸ್ಥೆ ಫಿಚ್, ಭಾರತದ ರೇಟಿಂಗ್ ಅನ್ನು ಬಿಬಿಬಿಯಲ್ಲಿ ಮುಂದುವರಿಸಿದೆ. ಇದು ಅತ್ಯಂತ ಕನಿಷ್ಠ ಹೂಡಿಕೆ ಶ್ರೇಣಿಯಾಗಿದ್ದು, “ಸ್ಥಿರ’ ನಿರೀಕ್ಷೆ ಮಾಡಿದೆ. 13 ವರ್ಷ ಗಳಿಂದಲೂ ಫಿಚ್, ಭಾರತದ ರೇಟಿಂಗ್ ಅನ್ನು ಬದಲಾವಣೆ ಮಾಡಿಲ್ಲ. 2006ರಲ್ಲಿ ಬಿಬಿಬಿ ಪ್ಲಸ್ ನಿಂದ ಬಿಬಿಬಿ-ಗೆ ಇಳಿಕೆ ಮಾಡಿತ್ತು. ಭಾರತದ ಅಭಿವೃದ್ಧಿ ಮಧ್ಯಮಾವಧಿಯಲ್ಲಿ ಉತ್ತಮವಾಗಿದೆ ಮತ್ತು ಹಣಕಾಸು ವಲಯ ಅತ್ಯಂತ ಕ್ಷೀಣವಾಗಿದೆ. ಸರಕಾರಿ ಸಾಲ ಅತ್ಯಧಿಕವಾಗಿದ್ದು, ವಿದೇಶಿ ಮೀಸಲು ನಿಧಿ ಸಮಸ್ಯೆಯೂ ಇದೆ ಎಂದು ಫಿಚ್ ವಿಶ್ಲೇಷಿಸಿದೆ. ರೇಟಿಂಗ್ ದೃಷ್ಟಿಕೋನಕ್ಕೆ ಮುಂಬರುವ ಸರಕಾರದ ಮಧ್ಯಮಾವಧಿ ಆರ್ಥಿಕ ನೀತಿ ಅತ್ಯಂತ ಮಹತ್ವ ದ್ದಾಗಿರು ತ್ತದೆ. 30 ವರ್ಷಗಳಿಂದಲೂ ಸರಕಾರಗಳ ಮನೋಸ್ಥಿತಿ ಸುಧಾರಣೆಯತ್ತಲೇ ಇರುವು ದರಿಂದ ಈಗಿನ ಪ್ರಗತಿ ಮುಂದುವರಿಯುವ ನಿರೀಕ್ಷೆಯಿದೆ ಎಂದಿದೆ.