Advertisement

ಜಿಡಿಪಿ ನಿರೀಕ್ಷೆ ಇಳಿಸಿದ ಫಿಚ್‌

12:30 AM Mar 23, 2019 | |

ಹೊಸದಿಲ್ಲಿ: ಭಾರತದ ಆರ್ಥಿಕ ಪ್ರಗತಿಯ ನಿರೀಕ್ಷೆಯನ್ನು ಅಂತಾರಾಷ್ಟ್ರೀಯ ವಿತ್ತೀಯ ರೇಟಿಂಗ್ಸ್‌ ಸಂಸ್ಥೆ ಫಿಚ್‌ ಇಳಿಕೆ ಮಾಡಿದೆ. ಮುಂದಿನ ವಿತ್ತ ವರ್ಷದಲ್ಲಿ ಶೇ.7 ರ ದರದಲ್ಲಿ ಜಿಡಿಪಿ ಪ್ರಗತಿ ಕಾಣುತ್ತದೆ ಎಂದು ನಿರೀಕ್ಷಿ ಸಲಾಗಿತ್ತು. ಆದರೆ ಈಗ ಬಿಡುಗಡೆ ಮಾಡಿರುವ ಫಿಚ್‌ ರೇಟಿಂಗ್‌ನಲ್ಲಿ ಜಿಡಿಪಿ ನಿರೀಕ್ಷೆಯನ್ನು ಶೇ. 6.8 ಕ್ಕೆ ಇಳಿಕೆ ಮಾಡಲಾಗಿದೆ. ಅಷ್ಟೇ ಅಲ್ಲ, ಪ್ರಸ್ತುತ ವಿತ್ತವರ್ಷದಲ್ಲಿ ಶೇ. 7.2 ರ ಬದಲಿಗೆ ಶೇ. 6.9 ರಲ್ಲಿ ಜಿಡಿಪಿ ಇರಲಿದೆ ಎಂದು ನಿರೀಕ್ಷಿಸಿದೆ. ಜಿಡಿಪಿ ನಿರೀಕ್ಷೆ ಇಳಿಕೆ ಮಾಡಿದ್ದರೂ, ಆರ್ಥಿಕತೆ ಉತ್ತಮವಾಗಿಯೇ ಪ್ರಗತಿ ಇದೆ ಎಂದು ಫಿಚ್‌ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next