Advertisement

ಇಂದಿನಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ

04:09 PM Aug 13, 2021 | Team Udayavani |

ಹಾಸನ: ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಆಜಾದಿ ಕಾ ಅಮೃತ್‌ ಮಹೋತ್ಸವದ ಅಂಗವಾಗಿ 75 ನೇ ಫಿಟ್‌ ಇಂಡಿಯಾ ಫ್ರೀಡಂ ರನ್‌ 2.0 ವನ್ನು ದೇಶಾದ್ಯಂತ ಆಯೋಜಿಸುತ್ತಿದ್ದು, ಆ.13 ರಿಂದ ಅ.2 ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಜಾದಿ ಕಾ ಅಮೃತ್‌ ಮಹೋತ್ಸವ ಪ್ರಕಟಣೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಧಾನ ಮಂತ್ರಿಯವರು 75ನೇ ಫಿಟ್‌ ಇಂಡಿಯಾ ಫ್ರೀಡಂ ರನ್‌ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿದ್ದಾರೆ ಎಂದರು.

ದೈಹಿಕ ದೃಢತೆಯ ಅಗತ್ಯತೆ: ಸಾಮಾಜಿಕ ದೂರವು ಹೊಸ ಸಾಮಾನ್ಯ ಜೀವನಶೈಲಿಯಾಗಿದ್ದು, ಸಾಮಾಜಿಕ ಅಂತರದ ಮಾನದಂಡಗಳನ್ನು ಅನುಸರಿಸುವ ಹಾಗೂ ದೈಹಿಕ ದೃಢತೆಯ ಅಗತ್ಯತೆಯನ್ನು ಸಕ್ರಿಯವಾಗಿಡಲು, ಫಿಟ್‌ ಇಂಡಿಯಾ ಫ್ರೀಡಂ ರನ್‌ 1.0 ಕಳೆದ ವರ್ಷದ ಆ.15 ರಿಂದ ಅ.2 ರವರೆಗೆ ಆಯೋಜಿಸಲಾಗಿತ್ತು.

ಕೇಂದ್ರ ಅಥವಾ ರಾಜ್ಯ ಸರ್ಕಾರದ ಯುವಜನ ಸೇವಾ ಇಲಾಖೆ ಮತ್ತುಕೇಂದ್ರ ಸಶಸ್ತ್ರ ಪಡೆಗಳು, ಎನ್‌ ಜಿಒಗಳು, ಖಾಸಗಿ ಸಂಸ್ಥೆಗಳು, ಶಾಲೆಗಳು, ವ್ಯಕ್ತಿಗಳು, ಯುವಕ, ಯುವತಿ ಮಂಡಳಿಗಳು, ಎನ್‌ಎಸ್‌ಎಸ್‌, ಎನ್‌ಸಿಸಿ ಸೇರಿದಂತೆ ಸುಮಾರು 5 ಕೋಟಿಗೂ ಹೆಚ್ಚು ಜನರು ಭಾಗವಹಿಸಿ ಸುಮಾರು 18 ಕೋಟಿ ಕಿ.ಮೀ ದೂರಕ್ರಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಇದನ್ನೂ ಓದಿ:ಜರ್ಮನಿ ಚಿತ್ರೋತ್ಸವದಲ್ಲಿ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರಕ್ಕೆ ಪ್ರಶಸ್ತಿ

Advertisement

ಒತ್ತಡ ಮುಕ್ತ: ಫಿಟ್‌ ಇಂಡಿಯಾ ಫ್ರೀಡಂ 2.0 ಓಟ ಆ.13 ರಂದು ಆರಂಭವಾಗುತ್ತವೆ ಮತ್ತು ಅ.2ರಂದು ಮುಕ್ತಾಯಗೊಳ್ಳುತ್ತವೆ. ಜನರು ತಮ್ಮ ದೈನಂದಿನ ಜೀವನದಲ್ಲಿ ಓಟ ಮತ್ತು ಕ್ರೀಡೆಗಳಂತಹ ಫಿಟೆ°ಸ್‌ ಚಟುವಟಿಕೆಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸುವುದು ಮತ್ತು ಬೊಜ್ಜು, ಸೋಮಾರಿತನ, ಒತ್ತಡ, ಆತಂಕ, ರೋಗ ಇತ್ಯಾದಿಗಳಿಂದ ಮುಕ್ತಿ ಪಡೆಯುವುದು ಇದರ ಗುರಿಯಾಗಿದೆ.

ಅರಿವು: ಈ ಅಭಿಯಾನದ ಮೂಲಕ, ನಾಗರಿಕರು ತಮ್ಮ ಜೀವನದಲ್ಲಿ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆ, ಯೋಗ, ಧ್ಯಾನದಂತಹ ಕಾರ್ಯಕ್ರಮಗಳನ್ನು ಫಿಟ್ನೆಸ್ ಕಿ ಡೋಸ್‌ ಅಧಾ ಘಂಟಾ ರೋಜ್‌ನಲ್ಲಿ ಸೇರಿಸುವ ಸಂಕಲ್ಪ ಮಾಡಲು ಅರಿವು ಮೂಡಿಸಲಾಗುವುದು ಎಂದರು.

75 ಸ್ಥಳಗಳು : ಕಾರ್ಯಕ್ರಮವನ್ನು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಮತ್ತು ರಾಜ್ಯ ಸಚಿವ ನಿಸಿತ್‌ ಪ್ರಮಾಣಿಕ್‌ ಅವರು ಆ.13 ರಂದು ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್, ರೈಲ್ವೆ, ನೆಹರು ಯುವ ಕೇಂದ್ರ, ಐಟಿಬಿಪಿ, ಎನ್‌ಎಸ್‌ಜಿ, ಕೂಡ ದೇಶದ ಮಹತ್ವದ ಸ್ಥಳಗಳಿಂದ ಬಂದು ಸೇರುತ್ತವೆ. ಜೊತೆಗೆ ಐತಿಹಾಸಿಕ ಸ್ಥಳಗಳಲ್ಲಿ 75 ಭೌತಿಕ ಘಟನೆಗಳು ನಡೆಯಲಿವೆ ಎಂದು ಹೇಳಿದರು.

ಪ್ರತಿವಾರ ಕಾರ್ಯಕ್ರಮಗಳು 75 ಜಿಲ್ಲೆಗಳಲ್ಲಿ ಮತ್ತು 75 ಹಳ್ಳಿಗಳಲ್ಲಿ, ಅ. 2ರವರೆಗೆ ಪ್ರತಿ ಜಿಲ್ಲೆಗಳಲ್ಲಿ ನಡೆಯಲಿದೆ. ಫಿಟ್‌ ಇಂಡಿಯಾ ಫ್ರೀಡಂ ರನ್‌ ಕಾರ್ಯಕ್ರಮಗಳನ್ನು 744 ಜಿಲ್ಲೆಗಳ 75 ಗ್ರಾಮಗಳಲ್ಲಿ ಮತ್ತು 30,000 ಶಿಕ್ಷಣ ಅಥವಾ ಸಂಘ ಸಂಸ್ಥೆಗಳಲ್ಲಿ ದೇಶದಾದ್ಯಂತ ಆಯೋಜಿಸಲಾಗುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ,ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಅಭೀಷೇಕ್‌ ಚಹರೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಕರ್ಪ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ ಚಂದ್ರ,ಯುವ ಸಂಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್‌, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುದರ್ಶನ್‌, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಿ.ಟಿ ಮಾನವ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

15ಕ್ಕೆ ಪರಿಸರ ಜಾಗೃತಿಗಾಗಿ ಬೈಸಿಕಲ್‌ ಜಾಥಾ
ಹಾಸನ: ಜಿಲ್ಲಾಡಳಿತ, ಜಿಪಂ ಮತ್ತು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಭಾರತ ಸೇವಾದಳ ಜಿಲ್ಲಾ ಸಮಿತಿ ಮತ್ತು ಹಾಸನ ರೋಟರಿ ಕ್ಲಬ್‌ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ.15 ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಪರಿಸರ ಜಾಗೃತಿಗಾಗಿ ಬೈಸಿಕಲ್‌ ಜಾಥಾ ವನ್ನು ವಿವಿಧ ಸಂಘ ಸಂಸ್ಥೆಗಳ ಸೈಕಲ್‌ ಸವಾರರಿಗಾಗಿ
ಏರ್ಪಡಿಸಲಾಗಿದೆ. ಬೈಸಿಕಲ್‌ ಜಾಥಾದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಕೋವಿಡ್‌ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಭಾಗವಹಿಸುವ ಸವಾರರು ಆ.14ರ ಶನಿವಾರ ಮಧ್ಯಾಹ್ನ 3 ಗಂಟೆಯೊಳಗೆ ನೋಂದಣಿ ಮಾಡಿಸಬೇಕು. ಮೊದಲು ನೋಂದಣಿ ಮಾಡಿದ 40 ಸವಾರರಿಗೆ ಮಾತ್ರ ಅವಕಾಶ. ಭಾಗವಹಿಸುವವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಭಾಗವಹಿಸಲು ಇಚ್ಚಿಸುವ ಆಸಕ್ತರು
ನೋಂದಣಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 7899301010 7760045193 ಗೆ ಸಂಪರ್ಕಿಸಬಹುದಾಗಿದೆ

ಸಂಘ ಸಂಸ್ಥೆಗಳ ಸಹಕಾರ
ಕಾರ್ಯಕ್ರಮವನ್ನು ಹಾಸನ ಜಿಲ್ಲೆಯಲ್ಲಿ ಸೆ.18 ರಂದು ಜಿಲ್ಲಾಡಳಿತ, ಜಿಪಂ, ನೆಹರು ಯುವ ಕೇಂದ್ರ, ಎನ್‌ಎಸ್‌ಎಸ್‌ ಅಥವಾ ಎನ್‌ಸಿಸಿ,
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಎನ್‌ಜಿಒ, ಯುವಜನ ಸಂಘಟನೆಗಳು,
ಸೇವಾದಳ, ಸ್ಕೌಟ್‌ಮತ್ತು ಗೈಡ್ಸ್‌ಹಾಗೂಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next