Advertisement

ಐಪಿಎಲ್‌ ವೇಳೆ ಫಿಟ್‌: ಪೃಥ್ವಿ ಶಾ ವಿಶ್ವಾಸ

12:30 AM Jan 22, 2019 | Team Udayavani |

ಹೊಸದಿಲ್ಲಿ: ಕಾಲು ನೋವಿನಿಂದಾಗಿ ಆಸ್ಟ್ರೇಲಿಯ ವಿರುದ್ಧ ಸರಣಿಯಿಂದ ಹೊರಬಿದ್ದ ಪೃಥ್ವಿ ಶಾ ಮುಂಬರುವ ಐಪಿಎಲ್‌ ವೇಳೆ ಫಿಟ್‌ ಆಗುವ ವಿಶ್ವಾಸದಲ್ಲಿದ್ದಾರೆ.

Advertisement

“ಐಪಿಎಲ್‌ಗ‌ೂ ಮೊದಲೇ ನಾನು ಫಿಟ್‌ ಆಗಲಿದ್ದು, ಸಂಪೂರ್ಣ ದೈಹಿಕ ಕ್ಷಮತೆಗಾಗಿ ಕಠಿನ ಶ್ರಮ ವಹಿಸುತ್ತಿದ್ದೇನೆ. ಆಸ್ಟ್ರೇಲಿಯದಲ್ಲಿ ನಡೆದ ಘಟನೆ ದುರದೃಷ್ಟಕರ. 

ಆಸ್ಟ್ರೇಲಿಯದ ಸವಾಲಿನ ವಾತಾವರಣದಲ್ಲಿ ಆಡಲು ನಾನು ಕಾತರನಾಗಿದ್ದೆ. ಅಲ್ಲಿನ ಬೌನ್ಸ್‌ ಟ್ರ್ಯಾಕ್‌ ನನಗೆ ಇಷ್ಟ. ಆದರೆ ಕಾಲಿನ ಸಮಸ್ಯೆಯಿಂದ ಎಲ್ಲವೂ ಎಡವಟ್ಟಾಯಿತು. ಭಾರತ ಟೆಸ್ಟ್‌ ಸರಣಿ ಗೆದ್ದಿರುವುದಕ್ಕೆ ಸಂತಸವಿದೆ’ ಎಂದು ಶಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next