Advertisement

ಮಂಗಳೂರು ಮೀನುಗಾರಿಕೆ ವಿ.ವಿ. ಸ್ಥಾಪನೆಗೆ ಹೆಚ್ಚಿದ ಪ್ರಯತ್ನ

03:14 AM Jul 13, 2021 | Team Udayavani |

ಮಂಗಳೂರು: ನಗರದ ಮೀನುಗಾರಿಕೆ ಕಾಲೇಜನ್ನು ಕೇಂದ್ರೀಕರಿಸಿ ಕರ್ನಾಟಕ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾ ನಿಲಯ ಸ್ಥಾಪಿಸುವ ಪ್ರಸ್ತಾವನೆಗೆ ಬೀದರ್‌ನ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ (ಕೆವಿಎಎಫ್‌ಎಸ್‌ಯು)ವು ನಕಾರಾತ್ಮಕ ಧೋರಣೆ ತಳೆದಿದ್ದರೂ ಮೀನುಗಾರಿಕೆ ಕಾಲೇಜಿನಿಂದ ಪ್ರಯತ್ನಗಳು ಮುಂದುವರಿದಿವೆ.
ಕೆವಿಎಎಫ್‌ಎಸ್‌ ಧೋರಣೆ ಯನ್ನು ಖಂಡಿಸಿ ಮೀನುಗಾರಿಕೆ ಕಾಲೇಜು ಈಗಾಗಲೇ ಪ್ರತಿ ಭಟನ ಪತ್ರವನ್ನು ಕಳುಹಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮೀನುಗಾರಿಕೆ ವಿ.ವಿ. ಸ್ಥಾಪನೆ ಕುರಿತು ಸರಕಾರದ ಮೇಲೆ ಒತ್ತಡ ತರುವುದಾಗಿ ತಿಳಿಸಿದ್ದಾರೆ.

Advertisement

ದೇಶದ ಪ್ರಥಮ ಕಾಲೇಜು
53 ವರ್ಷಗಳ ಇತಿಹಾಸವಿರುವ ಮಂಗಳೂರು ಮೀನುಗಾರಿಕೆ ಕಾಲೇಜು ಭಾರತಕ್ಕೆ ಪ್ರಥಮ. ಆದರೆ ಈಗ ತಮಿಳುನಾಡು, ಕೇರಳ, ಮಹಾರಾಷ್ಟ್ರಗಳಲ್ಲಿ ಮೀನುಗಾರಿಕೆ ವಿ.ವಿ. ಮತ್ತು ಅವುಗಳ ಸಂಯೋಜಿತ ಕಾಲೇಜುಗಳಿವೆ. ಒಡಿಶಾ, ತೆಲಂಗಾಣಗಳು ವಿ.ವಿ. ಸ್ಥಾಪಿಸುವ ಬಗ್ಗೆ ಅಧಿ ಸೂಚನೆ ಹೊರಡಿಸಿವೆ. ಆದ್ದರಿಂದ ಈ ಎಲ್ಲ ರಾಜ್ಯಗಳಲ್ಲಿ ಮೀನುಗಾರಿಕೆ ದೊಡ್ಡ ಉದ್ಯಮ ವಾಗಿ ಬೆಳೆದಿದ್ದು ರಾಷ್ಟ್ರ ಮಟ್ಟದಲ್ಲಿ 5ನೇ ಸ್ಥಾನ ದಲ್ಲಿವೆ. ಕರ್ನಾಟಕವು ದೇಶದಲ್ಲಿ 2ನೇ ಅತೀ ದೊಡ್ಡ ಜಲ ಪ್ರದೇಶವನ್ನು ಹೊಂದಿದ್ದರೂ ಮತ್ಸ್ಯ ಕೃಷಿಯಲ್ಲಿ 9-10ನೇ ಸ್ಥಾನದಲ್ಲಿದೆ. ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆಯ ಅಭಿ ವೃದ್ಧಿಗೆ ವಿಪುಲ ಅವಕಾಶಗಳಿದ್ದರೂ ಉತ್ತೇಜನದ ಕೊರತೆಯಿಂದಾಗಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗಿಲ್ಲ.

ಇಲ್ಲಿದೆ ಕಾಲೇಜು, ಅಲ್ಲಿದೆ ವಿ.ವಿ.!
ಮಂಗಳೂರಿನ ಕಾಲೇಜು ದೂರದ ಬೀದರ್‌ನ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ಕಾಲೇಜಿಗೆ ಸಂಯೋಜನೆಗೊಂಡಿದೆ. ಪಶು ಮತ್ತು ಪಶು ವೈದ್ಯಕೀಯದ ಜತೆಗೆ ಮೀನುಗಾರಿಕೆಯೂ ಸೇರಿರುವುದರಿಂದ ವಿ.ವಿ.ಗೆ ಮೀನುಗಾರಿಕೆ ಬಗ್ಗೆ ಹೆಚ್ಚು ಗಮನ ಸಾಧ್ಯವಾಗುತ್ತಿಲ್ಲ. ಇವೆಲ್ಲವನ್ನು ಗಮನಿಸಿ, ಮಂಗಳೂರಿನ ಮೀನುಗಾರಿಕೆ ಕಾಲೇಜು ಸಾಕಷ್ಟು ಜಮೀನು ಹೊಂದಿರುವುದರಿಂದ ಈ ಕಾಲೇಜನ್ನು ಕೇಂದ್ರವಾಗಿರಿಸಿ ಮೀನುಗಾರಿಕೆ ವಿ.ವಿ. ಸ್ಥಾಪಿಸಲು 2020ರ ಅಕ್ಟೋಬರ್‌ನಲ್ಲಿ ನಿರ್ಣಯಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಮೀನುಗಾರಿಕೆ ವಿ.ವಿ. ಅಗತ್ಯವಿಲ್ಲ ಎಂಬ ಕೆವಿಎಎಫ್‌ಎಸ್‌ನ ಧೋರಣೆ ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಾವು ಕಳುಹಿಸಿರುವ ಪ್ರತಿಭಟನ ಪತ್ರಕ್ಕೆ ಇದುವರೆಗೆ ಕೆವಿಎಎಫ್‌ಎಸ್‌ ಪ್ರತಿಕ್ರಿಯಿಸಿಲ್ಲ ಎಂದು ಕಾಲೇಜಿನ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಮೀನುಗಾರರು ಮತ್ತು ಮೀನುಗಾರಿಕೆಯ ಪರವಾಗಿ ಕೆಲಸ ಮಾಡಲು ವಿ.ವಿ.ಯ ಅಗತ್ಯ ವಿದ್ದು, ಮಂಗಳೂರಿನಲ್ಲಿ ಸ್ಥಾಪನೆ ಆಗಲೇಬೇಕು. ಅದಕ್ಕೆ ಸಂಯೋ ಜಿತ ವಾಗಿ 4 ಕಾಲೇಜುಗಳನ್ನು ಆರಂಭಿ ಸಲು ಮತ್ತು ಇತರ ಮೀನು ಗಾರಿಕೆ ಅಭಿವೃದ್ಧಿ ಕೆಲಸ ಗಳನ್ನು ಕೈಗೆತ್ತಿಕೊಳ್ಳಲು ಉದ್ದೇ ಶಿಸ ಲಾಗಿದೆ. ಇದಕ್ಕಾಗಿ ಮೀನುಗಾರಿಕೆ ಸಚಿವ ಎಸ್‌. ಅಂಗಾರ ಅವರ ಜತೆಗೂಡಿ ಸರಕಾರದ ಮೇಲೆ ಒತ್ತಡ ತರುತ್ತೇವೆ.
– ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next