Advertisement
ಕಾಸರಗೋಡು: ಪ್ರತೀ ವರ್ಷದಂತೆ ಈ ವರ್ಷವೂ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಜೂ. 9ರ ಮಧ್ಯರಾತ್ರಿಯಿಂದ ಜುಲೈ 31ರ ಮಧ್ಯ ರಾತ್ರಿವರೆಗೆ ನಿಷೇಧ ಮುಂದುವರಿಯಲಿದೆ. ಅಂದರೆ 52 ದಿನಗಳ ಕಾಲ ಟ್ರಾಲಿಂಗ್ ಅಸಾಧ್ಯ. ಈ ಕಾರಣದಿಂದ ದುಡಿಮೆಯಿಲ್ಲದೆ ಬೆಸ್ತರು ಸವಾಲನ್ನು ಎದುರಿಸಬೇಕಾಗಿದೆ.ಸಮುದ್ರದಲ್ಲಿ ಮೀನಿನ ಸಂತಾನೋತ್ಪತ್ತಿ ಋತು ಆರಂಭಗೊಂಡ ಹಿನ್ನೆಲೆಯಲ್ಲಿ ಮತ್ಸé ಸಂರಕ್ಷಿಸುವ ಹಿನ್ನೆಲೆಯಲ್ಲಿ ಕೆ.ಎಂ.ಎಫ್.ಆರ್. ಕಾಯ್ದೆಯಂತೆ ಕೇರಳದ ಆಳ ಸಮುದ್ರದಲ್ಲಿ ಜುಲೈ 31 ರ ವರೆಗೆ ಮೀನುಗಾರಿಕೆ ನಿಷೇಧ ಹೇರಿದ್ದು, ಪರಂಪರಾಗತ ಮೀನುಗಾರಿಕೆಗೆ ಯಾವುದೇ ನಿಯಂತ್ರಣವಿಲ್ಲದೆ ಮೀನುಗಾರಿಕೆ ನಡೆಸಬಹುದಾಗಿದೆ. ಈ ಕಾರಣದಿಂದ ಪರಂಪರಾಗತ ಮೀನುಗಾರಿಕೆ ನಡೆಸುವ ಬೆಸ್ತರು ಸ್ವಲ್ಪಮಟ್ಟಿಗೆ ಉಸಿರಾಡುವಂತಾಗಿದೆ.
ಮೀನುಗಾರಿಕೆಯನ್ನು ಜೀವನಮಾರ್ಗವಾಗಿ ಆಶ್ರಯಿಸಿ ರುವ ಬೆಸ್ತರಿಗಿನ್ನು ಸಂಕಷ್ಟದ ದಿನಗಳು. ಸಮುದ್ರದಲ್ಲಿ ಮೀನು ಸಂತತಿ ಸಂರಕ್ಷಣೆಗಾಗಿ ಏರ್ಪಡಿಸಿರುವ ಟ್ರಾಲಿಂಗ್ ನಿಷೇಧದ ಪರಿಣಾಮವಾಗಿ ಜುಲೈ 31ರ ಮಧ್ಯರಾತ್ರಿಯ ವರೆಗೆ ಮೀನುಗಾರರು ಯಾಂತ್ರೀಕೃತ ಬೋಟ್‌ಗಳಲ್ಲಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಂತಿಲ್ಲ. ಈ ಆದೇಶವನ್ನು ಉಲ್ಲಂಘಿಸಿ ಮೀನುಗಾರಿಕೆಗೆ ತೆರಳಿದರೆ ಬೋಟ್‌ಗಳನ್ನು ವಶಪಡಿಸಿಕೊಳ್ಳುವ ಮೊದಲಾದ ಕಠಿನ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಮೀನುಗಾರಿಕಾ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಕಾಲಾವಧಿಯಲ್ಲಿ ಟ್ರಾಲ್ ನೆಟ್ ಬಳಸಿ ಮೀನುಗಾರಿಕೆ ಸಂಪೂರ್ಣ ನಿಷೇಧಿಸಲಾಗಿದೆ. ಆದರೆ ಪರಂಪರಾಗತ ಬೆಸ್ತರಿಗೆ ಮೀನುಗಾರಿಕೆ ನಡೆಸಬಹುದಾಗಿದೆ.
Related Articles
Advertisement
ಟ್ರಾಲಿಂಗ್ ನಿಷೇಧ: ಬೆಸ್ತರಿಗೆ ಸವಾಲಿನ ದಿನಗಳು ಟ್ರಾಲಿಂಗ್ ನಿಷೇಧ ಕಾಲಾವಧಿಯಲ್ಲಿ ಸಮುದ್ರದಲ್ಲಿ ಪೆಟ್ರೋಲಿಂಗ್ ಹಾಗೂ ರಕ್ಷಣಾ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ತಲಾ ಒಂದರಂತೆ ಮೆಕನೈಸ್ಡ್ ಬೋಟ್ ಮತ್ತು ಫೈಬರ್ ದೋಣಿಗಳನ್ನು ಸಜ್ಜುಗೊಳಿಸಲಾಗುವುದು. ಬೋಟ್‌ಗಳ, ದೋಣಿಗಳ ಕಾರ್ಮಿಕರಲ್ಲದೆ ತರಬೇತಿ ಪಡೆದ ಸುರಕ್ಷಾ ಜವಾನರನ್ನು ಮೀನುಗಾರಿಕಾ ಇಲಾಖೆ ರಕ್ಷಣಾ ಕಾರ್ಯಕ್ಕೆ ನೇಮಿಸಲಿದೆ. ತುರ್ತು ಸಂದರ್ಭಗಳಲ್ಲಿ ಕೋಸ್ಟ್‌ಗಾರ್ಡ್ ಮತ್ತು ನೌಕಾಪಡೆಯ ನೆರವನ್ನು ಪಡೆಯಲಾಗುವುದು. ಫಿಶರೀಸ್ ಇಲಾಖೆ ಆರಂಭಿಸಿದ ಕಂಟ್ರೋಲ್ ರೂಂಗಳಲ್ಲೂ, ಜಿಲ್ಲಾ ಕೇಂದ್ರಗಳಲ್ಲೂ, ತಾಲೂಕು ಕಚೇರಿಗಳಲ್ಲೂ ಕಾರ್ಯಾಚರಿಸುವ ಕಂಟ್ರೋಲ್ ರೂಂಗಳಲ್ಲೂ ಅಪಘಾತ ಮಾಹಿತಿಗಳನ್ನು ಸಲ್ಲಿಸಬಹುದು. ಪರಂಪರಾಗತ ಮೀನುಗಾರಿಕೆ ನಡೆಸುವ ಬೆಸ್ತರು ಸಾಕಷ್ಟು ಜೀವ ರಕ್ಷಾ ಉಪಕರಣಗಳು, ಲೈಫ್ ಜಾಕೆಟ್, ಅಗತ್ಯಕ್ಕೆ ತಕ್ಕಂತೆ ಇಂಧನ, ಟೂಲ್ ಕಿಟ್ ಮೊದಲಾದವುಗಳನ್ನು ದೋಣಿಗಳಲ್ಲಿ ಇರಿಸಿಕೊಳ್ಳಬೇಕು. ದೋಣಿಗಳಲ್ಲಿ ಮೀನುಗಾರಿಕೆ ನಡೆಸುವ ಕಾರ್ಮಿಕರ ಪೂರ್ಣ ಮಾಹಿತಿಗಳನ್ನು ದೋಣಿಯ ಮಾಲಕರು ದಾಖಲಿಸಿಕೊಂಡಿರಬೇಕು. ಟ್ರಾಲಿಂಗ್ ನಿಷೇಧ ಕಾಲಾವಧಿಯಲ್ಲಿ ಸಮುದ್ರದಲ್ಲಿ ಪೆಟ್ರೋಲಿಂಗ್ ಹಾಗೂ ರಕ್ಷಣಾ ಚಟುವಟಿಕೆಗಳಿಗಾಗಿ ಜಿಲ್ಲೆಯಲ್ಲಿ ಒಂದು ಯಾಂತ್ರೀಕೃತ ಬೋಟ್ ಹಾಗೂ ಒಂದು ಫೈಬರ್ ದೋಣಿಗಳನ್ನು ಸಜ್ಜುಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ ರಕ್ಷಣೆಗಾಗಿ ಕೋಸ್ಟ್ ಗಾರ್ಡ್, ನೌಕಾ ಪಡೆಯ ನೆರವನ್ನು ಪಡೆದುಕೊಳ್ಳಲಾಗುವುದು. 12 ನಾಟಿಕಲ್ ಮೈಲ್ : ಸಮುದ್ರ ಕಿನಾರೆಯಿಂದ 12 ನಾಟಿಕಲ್ ಮೈಲ್ ದೂರದ ವರೆಗೆ ಜುಲೈ 31ರ ಮಧ್ಯರಾತ್ರಿವರೆಗೆ ಟ್ರಾಲಿಂಗ್ ನಿಷೇಧ ಜಾರಿಯಲ್ಲಿರುವುದು. ಪ್ರಸ್ತುತ ವರ್ಷ 52 ದಿನಗಳ ವರೆಗೆ ಟ್ರಾಲಿಂಗ್ ನಿಷೇಧವಿದೆ. ಕಳೆದ ವರ್ಷಗಳಿಗಿಂತ ಐದು ದಿನ ಹೆಚ್ಚು ಟ್ರಾಲಿಂಗ್ ನಿಷೇಧಿಸಲಾಗಿದೆ. ಈ ಕಾಲಾವಧಿಯಲ್ಲಿ ಪರಂಪರಾಗತ ದೋಣಿ ಮತ್ತು ಇನ್ ಬೋರ್ಡ್‌ಗಳಲ್ಲಿ ಮೀನುಗಾರಿಕೆಗೆ ತಡೆಯಿಲ್ಲ. ಮೀನುಗಾರಿಕೆಗೆ ಹೋಗುವ ಮೀನು ಕಾರ್ಮಿಕರು ಕಡ್ಡಾಯವಾಗಿ ಬಯೋಮೆಟ್ರಿಕ್ ಗುರುತು ಚೀಟಿ ತಮ್ಮ ಕೈಯಲ್ಲಿರಿಸಿಕೊಳ್ಳಬೇಕು. ಮೀನುಗಾರಿಕೆ ಸಂದರ್ಭದಲ್ಲಿ ಲೈಫ್ ಜಾಕೆಟ್ ಕಡ್ಡಾಯವಾಗಿ ಧರಿಸಬೇಕೆಂದು ಫಿಶರೀಸ್ ಡೆಪ್ಯೂಟಿ ಡೈರೆಕ್ಟರ್ ಕೆ.ಸುಹೈರ್ ತಿಳಿಸಿದ್ದಾರೆ. ಈ ಸಂಬಂಧವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಡಿಎಂ ಎನ್. ದೇವಿದಾಸ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಆರ್‌ಡಿಒ ಅಬ್ದುಲ್ ಸಮದ್, ಫಿಶರೀಸ್ ಅಸಿಸ್ಟೆಂಟ್ ಡೈರೆಕ್ಟರ್ ಪಿ.ವಿ. ಸತೀಶನ್, ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಮೀನು ಕಾರ್ಮಿಕ ಪ್ರತಿನಿಧಿಗಳು, ಫಿಶರೀಸ್ ಅಧಿಕಾರಿಗಳು, ಕೋಸ್ಟಲ್ ಪೊಲೀಸರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದರು. ಮೀನುಗಾರಿಕೆ ನಡೆಸಿದರೆ ಬೋಟ್ ವಶಕ್ಕೆ
ಜುಲೈ 31ರ ವರೆಗೆ ಟ್ರಾಲಿಂಗ್ ಬಳಸಿ ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಈ ಕಾಲಾವಧಿಯಲ್ಲಿ ಟ್ರಾಲಿಂಗ್ ಬಳಸಿ ಮೀನುಗಾರಿಕೆ ನಡೆಸುವ ಬೋಟ್‌ಗಳನ್ನು ವಶಪಡಿಸಿಕೊಳ್ಳಲಾಗುವುದೆಂದು ಫಿಶರೀಸ್ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಅನ್ಯ ರಾಜ್ಯಗಳಿಂದ ಬಂದ ಯಂತ್ರ ಜೋಡಿಸಿದ ಬೋಟ್‌ಗಳು ಕೇರಳ ಕರಾವಳಿ ಪ್ರದೇಶದಿಂದ ವಾಪಸಾಗಬೇಕೆಂದು ಆದೇಶ ನೀಡಲಾಗಿದೆ. ಕೇರಳ ಕರಾವಳಿಯಿಂದ ವಾಪಸಾಗದ ಬೋಟ್‌ಗಳಲ್ಲಿ ಜುಲೈ 31 ರ ವರೆಗೆ ಮೀನುಗಾರಿಕೆಗೆ ಅವಕಾಶ ನೀಡುವುದಿಲ್ಲ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಬೋಟ್‌ಗಳನ್ನು ವಶಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಯಾಂತ್ರೀಕೃತ ಬೋಟ್‌ಗಳಿಗೆ ಡೀಸೆಲ್ ವಿತರಿಸುತ್ತಿದ್ದ ಬಂಕ್‌ಗಳಿಂದ ಈ ಕಾಲಾವಧಿಯಲ್ಲಿ ಡೀಸೆಲ್ ವಿತರಿಸದಿರುವಂತೆ ತಿಳಿಸಲಾಗಿದೆ. – ಪ್ರದೀಪ್ ಬೇಕಲ್