ಮಲ್ಪೆ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ವೇಳೆ ಬೋಟಿನಲ್ಲಿ ಮಲಗಿದ್ದ ಮೀನುಗಾರನೋರ್ವ ಸಾವನ್ನಪ್ಪಿರುವ ಘಟನೆ ಡಿ. 4ರಂದು ನಡೆದಿದೆ.
ತಮಿಳುನಾಡು ಮೂಲದ ಚೊಂಗಾಣಿ (50) ಸಾವನ್ನಪ್ಪಿದ್ದು ಅವರು ಇತರ ಮೀನುಗಾರರೊಂದಿಗೆ ನ. 30ರಂದು ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದರು. ಡಿ. 4ರಂದು ಮಧ್ಯಾಹ್ನ ಚೊಂಗಾಣಿ ಅವರು ಕೆಲಸ ಮುಗಿಸಿ ಬೋಟಿನಲ್ಲಿ ಮಗಿದ್ದರು.
ಜತೆಯಲ್ಲಿದ್ದರು ಅವರನ್ನು ಊಟಕ್ಕೆ ಕರೆದಾಗ ಅವರು ಮಾತನಾಡದಿರುವುದನ್ನು ಕಂಡು ತತ್‌ಕ್ಷಣ ಅವರನ್ನು ಚಿಕಿತ್ಸೆಗೆ ಮಲ್ಪೆ ಬಂದರು ದಡಕ್ಕೆ ತಂದು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಅವರು ಮೃತಪಟ್ಟಿರುವುದನ್ನು ತಿಳಿಸಿದ್ದಾರೆ. ಚೊಂಗಾಣಿ ಅವರು ಹೃದಯಾಘಾತದಿಂದ ಅಥವಾ ಯಾವುದೋ ಕಾಯಿಲೆಯಿಂದ ಮೃತ ಪಟ್ಟಿರಬಹುದಾಗಿದ್ದು, ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ : ವಿವಾಹಿತ ಮಹಿಳೆ ನಾಪತ್ತೆ
ಮಲ್ಪೆ: ಇಲ್ಲಿನ ಕೊಳದ ವೀಣಾ (40) ಎಂಬ ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಕೆ ಡಿ. 1ರಿಂದ ಡಿ. 5 ರ ನಡುವೆ ಕಾಣೆಯಾಗಿದ್ದು, ಕೌಟುಂಬಿಕ ವಿಚಾರದಲ್ಲಿ ಗಂಡ ಹೆಂಡತಿಯರ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗಿದೆ.