ಮನುಷ್ಯರಂತೆ ಮೇಲ್ದವಡೆ, ಕೆಳದವಡೆ, ಸಾಲು ಹಳ್ಳುಗಳಿರುವ ಮೀನೊಂದು ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದ ಮೀನುಗಾರ ನೊಬ್ಬನಿಗೆ ಸಿಕ್ಕಿದೆ.
ಈ ಅಪರೂಪದ ಮೀನನ್ನು ಶೀಪ್ ಶೆಡ್ ಫಿಶ್ ಎಂದು ಕರೆಯಲಾಗುತ್ತದೆ. ಮೀನಿನ ಮೂತಿ ಕುರಿಗಳ ಮೂತಿಯಂತೆಯೇ ಕಾಣುವುದರಿಂದಾಗಿ ಈ ಹೆಸರು ಬಂದಿದೆ. ಈ ಮೀನು ಸುಮಾರು 10-20 ಇಂಚು ಉದ್ದ ಬೆಳೆಯಬಲ್ಲದು.
ಇದನ್ನೂ ಓದಿ:ಟ್ರಕ್ ಚಾಲಕರಿಗೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಚಾನು ವಿಶೇಷ ಉಡುಗೊರೆ | ಯಾಕೆ ಗೊತ್ತಾ ?
ಮೀನಿನ ಫೋಟೊವನ್ನು ಜೆನೆಟ್ ಪಿಯರ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದನ್ನು ಕೊಲ್ಲದೆ ನೀರಿಗೆ ವಾಪಸು ಬಿಡಿ ಎಂದು ಅನೇಕರು ಮನವಿ
ಮಾಡಿದ್ದರೆ, ಇದೊಂದು ಎಡಿಟೆಡ್ ಫೋಟೋ ಎಂದುಕೆಲವರು ದೂರಿದ್ದಾರೆ.