Advertisement
ಈ ಕುರಿತು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಾತನಾಡಿ, ಗೋವಾ ಸರಕಾರದ ಎಫ್‌ಡಿಎ ಕಾಯ್ದೆಯಡಿ ಜಾರಿಗೊಳಿಸಲಾಗಿದ್ದ ಸೂಚನೆಗಳನ್ನು ಪಾಲಿಸುವವರಿಗೆ ಗೋವಾಕ್ಕೆ ಪ್ರವೇಶಾವಕಾಶ ಲಭಿಸಲಿದೆ. ಕರ್ನಾ ಟಕದಿಂದ ಗೋವಾಕ್ಕೆ ಮೀನು ತುಂಬಿಕೊಂಡು ಬರುತ್ತಿದ್ದ ವಾಹನಗಳನ್ನು ಗಡಿ ಭಾಗದ ಆರ್‌ಟಿಒ ಮತ್ತು ಪೊಲೀಸರು ತಪಾಸಣೆ ನಡೆಸಿದ್ದು ಅವರಿಗೆ ಆಕ್ಷೇಪಾರ್ಹ ಯಾವುದೇ ಸಂಗತಿ ಕಂಡು ಬಂದಿಲ್ಲ ಎಂದರು. ಗೋವಾ ನಿಷೇಧ ಪರಿಣಾಮ 6 ತಿಂಗಳಿನಿಂದ ಕರ್ನಾಟಕ, ಮಹಾ ರಾಷ್ಟ್ರ ಮತ್ತು ಇತರ ಭಾಗಗಳಿಂದ ಮೀನು ಪೂರೈಕೆ ಸ್ಥಗಿತಗೊಂಡಿತ್ತು. ಈ ಮೊದಲು ಕರ್ನಾಟಕದಿಂದ ಪ್ರತಿದಿನ 80ರಿಂದ 90 ಟ್ರಕ್ ಮೀನು ಗೋವಾಕ್ಕೆ ಬರುತ್ತಿತ್ತು.
ಕುಂದಾಪುರ: ನಿಷೇಧವನ್ನು ಸಡಿಲಿಕೆ ಮಾಡಿರುವ ಹಿನ್ನೆಲೆ ಯಲ್ಲಿ ಗೋವಾ ಮಾರುಕಟ್ಟೆಗೆ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೀನು ಬುಧ ವಾರ ರಾತ್ರಿಯಿಂದ ರವಾನೆ ಆರಂಭಗೊಂಡಿದೆ. ಈಗ ಎಫ್‌ಡಿಎ ಪರವಾನಿಗೆ ಹೊಂದಿರುವ ಇನ್ಸುಲೇಟರ್ ವಾಹನಗಳು ಗೋವಾ ಕಡೆಗೆ ಮೀನುಗಳನ್ನು ಸಾಗಿಸುತ್ತಿವೆ. ಸೋಮವಾರ ಇನ್ನೊಂದು ಸುತ್ತಿನ ಮಾತು ಕತೆ ನಡೆಯಲಿದೆ.