Advertisement

ಸಾಮಾಜಿಕ ಅಂತರದಲ್ಲೇ ಮೀನು ಮಾರಾಟ

11:06 PM Apr 20, 2020 | Sriram |

ಕುಂದಾಪುರ: ಇಲ್ಲಿನ ಸಂಗಂ ಬಳಿ ಮೀನು ಮಾರಾಟ ಸ್ಥಳದಲ್ಲಿ ರವಿವಾರ ಜನಜಂಗುಳಿ ಸೇರಿ ಗೊಂದಲ ಉಂಟಾದ ಕಾರಣ ಸಹಾಯಕ ಕಮಿಷನರ್‌,ಎಎಸ್‌ಪಿ ಅವರ ಸೂಚನೆಯಂತೆ ಎಸ್‌ಐ ಅವರು ಪುರಸಭೆ ಮೂಲಕ ರವಿವಾರ ರಾತ್ರಿ ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಿದ್ದರು.

Advertisement

ಸೋಮವಾರ ಹೊಸ ವ್ಯವಸ್ಥೆಯಲ್ಲಿ ಮೀನು ಮಾರಾಟ ನಡೆಯಿತು. ಹೊಸ ಪ್ರದೇಶದಲ್ಲಿ ಮೀನು ಮಾರಾಟಕ್ಕೆ ಅನುವು ಮಾಡಿ ಕೊಡಲು ಸ್ಥಳ ಪರಿಶೀಲನೆ ನಡೆಸಲಾಯಿ ತಾದರೂ ಎಲ್ಲೂ ಸರಿಯಾದ ಜಾಗ ದೊರೆತಿರಲಿಲ್ಲ. ಆದ್ದರಿಂದ ಈಗ ಮಾರಾಟ ಮಾಡುತ್ತಿರುವಲ್ಲೇ ಸೂಕ್ತ ವ್ಯವಸ್ಥೆ ಮಾಡಲಾಯಿತು. ಜನ ದೈಹಿಕ ಅಂತರ ಕಾಯ್ದು ಕೊಂಡು ಮೀನು ಖರೀದಿ ನಡೆಸಿದರು.

ರಸ್ತೆ ಬದಿ ಮೀನು ಮಾರಾಟ ಮಾಡುತ್ತಿರುವವರಿಗೆ ಈ ರೀತಿ ವ್ಯವಸ್ಥೆ ಮೂಲಕ ಅಂತರ ಕಾಪಾಡಲು ಸೂಚಿಸಿ ದ್ದರೂ ಇನ್ನೊಂದು ಮಗ್ಗುಲಲ್ಲಿ ಮೀನು ಮಾರಾಟದ ಅಂಗಡಿಯವರು ಇಂತಹ ವ್ಯವಸ್ಥೆಗಳಿಲ್ಲದೇ ಮಾರಾಟ ಮಾಡುತ್ತಿದ್ದಾರೆ ಎಂದು ಮಾರಾಟಗಾರರು ಆರೋಪಿಸಿದ್ದಾರೆ. ಇಲ್ಲಿಯೂ ಮಂಗಳವಾರದಿಂದ ಇಂತಹ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂಗಂ ಬಳಿ ಮೀನು ಮಾರಾಟ ಮಾಡುತ್ತಿದ್ದಲ್ಲಿಗೆ ಸಹಾಯಕ ಕಮಿಷನರ್‌ ಕೆ. ರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಜನಸಂದಣಿ ಸೇರದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next