Advertisement
ಇಲ್ಲಿ ವಿವಿಧ ತಳಿಯ ಮೀನು ಮರಿಗಳು ಮಾರಾಟಕ್ಕೆ ಲಭ್ಯವಿದ್ದು, ಕೇಂದ್ರದ ವ್ಯಾಪ್ತಿಯ ನಗರ-ಪಟ್ಟಣಗಳು ಸೇರಿದಂತೆ ವಿವಿಧ ಜಿಲ್ಲೆಗಳ ಮೀನು ಕೃಷಿ ಮಾಡುವ ರೈತರು ಮೀನು ಮರಿಗಳ ಖರೀದಿಸಲು ಇಲ್ಲಿಗೆ ಆಗಮಿಸುತ್ತಿದ್ದಾರೆ.
Related Articles
Advertisement
ಕೇಂದ್ರದ ಪ್ರಗತಿಗೆ ವಿವಿಧ ಕಾಮಗಾರಿ
ಮೀನುಗಾರಿಕೆ ಇಲಾಖೆಯಿಂದ ಈಚೆಗೆ ಆರ್‌ಐಡಿಎಸ್ ಅಡಿಯಲ್ಲಿ 3 ಕೋಟಿ, ಆರ್‌ಕೆವಿವೈ 4.73 ಕೋಟಿ ಒಟ್ಟು ಅಂದಾಜು 7.5 ಕೋಟಿ ರೂ. ಮೊತ್ತದಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ನೀರು ಸಂಗ್ರಹಿಸುವ 10 ಹೊಸ ಟ್ಯಾಂಕ್ ನಿರ್ಮಿಸಲಾಗಿದೆ ಜತೆಗೆ 1 ಮೀನು ಮರಿ ಪ್ಯಾಂಕಿಂಗ್ ಶೆಡ್ ನಿರ್ಮಿಸಲಾಗಿದೆ ಹಾಗೂ ಮೀನು ಮರಿ ತಯಾರಿಕೆಗೆ 3 ಯಾಚರಿಗಳು ನಿರ್ಮಾಣ ಹಂತದಲ್ಲಿವೆ ಹಾಗೂ ಮುಖ್ಯ ರಸ್ತೆಯಿಂದ ಪಾಲಾನ ಕೇಂದ್ರದವರೆಗೆ ಸಿ.ಸಿ ರಸ್ತೆ ನಿರ್ಮಿಸಲಾಗಿದೆ.
ಬಸವಸಾಗರ ಬಳಿ ಇರುವ ಪ್ರಾದೇಶಿಕ ಮೀನು ಮರಿ ಉತ್ಪಾದನಾ ಕೇಂದ್ರ ಆಗ್ನೇಯ ಏಷ್ಯಾದ ಎರಡನೇ ದೊಡ್ಡ ಮೀನು ಮರಿ ಉತ್ಪಾದನಾ ಕೇಂದ್ರವಾಗಿದೆ. ಸರ್ಕಾರ ಪ್ರತಿ ವರ್ಷ 1.50 ಕೋಟಿ ಮೀನು ಮರಿ ಮಾರಾಟ ಮಾಡುವ ಗುರಿ ಮೀನು ಮರಿ ಪಾಲನಾ ಕೇಂದ್ರಕ್ಕೆ ನೀಡಿದೆ. ಪ್ರಸಕ್ತ ವರ್ಷದಲ್ಲಿ 16ಲಕ್ಷ ಮೀನು ಮರಿಗಳನ್ನು ಮಾರಾಟ ಮಾಡಲಾಗಿದೆ. ಇನ್ನುಳಿದ ಬಾಕಿ ಮೀನು ಮರಿ ಮಾರಾಟಕ್ಕೆ ಮುಂದಿನ 2023ರ ಮಾರ್ಚ್‌ವರೆಗೆ ಅವಕಾಶವಿದೆ. -ಸಿದ್ದಪ್ಪ ಸುರಗಿಹಳ್ಳಿ, ಉಪ ನಿರ್ದೇಶಕರು, ಪ್ರಾದೇಶಿಕ ಮೀನು ಮರಿ ಉತ್ಪಾದನಾ ಕೇಂದ್ರ ನಾರಾಯಣಪುರ (ಸಿದ್ದಾಪುರ ಡ್ಯಾಂ ಸೈಟ್)
-ಬಸವರಾಜ ಎಂ. ಶಾರದಳಿ