Advertisement

ಕೋಡಿಯಲ್ಲಿ ಕೈರಂಪಣಿಗೆ ರಾಶಿ, ರಾಶಿ ಬೈಗೆ(ಬೂತಾಯಿ) ಮೀನು: watch

01:58 PM Nov 14, 2018 | Sharanya Alva |

ಕುಂದಾಪುರ: ಕುಂದಾಪುರ ತಾಲೂಕಿನ ಕೋಡಿಯಲ್ಲಿ ರಾಶಿ, ರಾಶಿ ಬೈಗೆ(ಬೂತಾಯಿ) ಮೀನು ಬಲೆಗೆ ಸಿಕ್ಕಿದೆ. ಹೌದು ಇಂದು ಬೆಳಗ್ಗೆ ಕೈರಂಪಣಿ ಬಲೆಗೆ ಭರ್ಜರಿ ಬೈಗೆ ಮೀನು ಸಿಕ್ಕಿರುವುದು ಮೀನುಗಾರರ ಮುಖದಲ್ಲಿ ಸಂತಸ ಮೂಡಿಸಿದೆ.

Advertisement

ಇತ್ತೀಚೆಗೆ ಹೆಜಮಾಡಿ, ಪಡುಬಿದ್ರೆ ಕೈರಂಪಣಿ ಮೀನುಗಾರರ ಬಲೆಗೆ ಭರ್ಜರಿಯಾಗಿ(ಬಿಳಿ ಮೀನು) ಸಿಲ್ವರ್ ಫಿಶ್ ಗಳು ಬಿದ್ದಿದ್ದವು. ಅಲ್ಲದೇ ಕಳೆದ ತಿಂಗಳು ಎರ್ಮಾಳ್ ನಲ್ಲಿ ಎರಡು ಕೈರಂಪಣಿ ದೋಣಿಗೆ ಮಾಂಜಿ, ಕೊಡ್ಡಾಯಿ, ಮಣಂಗು ಮೀನು ಸಿಕ್ಕಿರುವುದು ಭಾರೀ ಸುದ್ದಿಯಾಗಿತ್ತು.

ಹೆಜಮಾಡಿಯಲ್ಲಿ ಕೈರಂಪಣಿಗೆ ಬಿಳಿ ಮೀನು(ಸಿಲ್ವರ್ ಫಿಶ್) ಸಿಕ್ಕಿದ ಸಂದರ್ಭದಲ್ಲಿ ಬಲೆಯನ್ನು ಮೇಲಕ್ಕೆ ಎಳೆಯಲಾಗದೆ ಸ್ಥಳೀಯರು ಕೈಜೋಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ಸ್ಮರಿಸಿಕೊಳ್ಳಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next