Advertisement

ಫಿಶ್‌ ಬಿರಿಯಾನಿ ಉಣಬಡಿಸುವ ಟ್ರಕ್‌

04:36 PM Apr 21, 2018 | Team Udayavani |

ಶಾಖಾಹಾರಪ್ರಿಯರಿಗೆ ಮೀನಿನ ಖಾದ್ಯದ ಪರಿಮಳ ಚೆನ್ನಾಗಿ ಗೊತ್ತಿರುತ್ತೆ. ಇಂಥ ಫ‌ುಡ್ಡಿಗಳೇನಾದರೂ ಆರ್‌ಎಂವಿ 2ನೇ ಸ್ಟೇಜ್‌ನ ನ್ಯೂ ಬಿಇಎಲ್‌ ರಸ್ತೆಯಲ್ಲಿ ಸಂಚರಿಸಿದ್ರೆ, ಅಲ್ಲಿ ನಿಂತ ಒಂದು ಟ್ರಕ್‌ನ ಬಳಿ ಸಡನ್ನಾಗಿ ಬ್ರೇಕ್‌ ಹಾಕ್ತಾರೆ. ಯಾಕೆ ಗೊತ್ತೇ? ಆ ಟ್ರಕ್‌ ಬಗೆ ಬಗೆಯ ಫಿಶ್‌ ವೆರೈಟಿಗಳನ್ನು ಬಿಸಿ ಬಿಸಿಯಾಗಿ ಸಿದ್ಧಪಡಿಸಿ, ಮೀನುಪ್ರಿಯರನ್ನು ಕಾಯುತ್ತಿರುತ್ತೆ. ಅದರಲ್ಲೂ ಕರಾವಳಿಯ ರುಚಿಯೇ ಈ ಟ್ರಕ್‌ನ ಹೈಲೈಟ್‌.  ಅಂದಹಾಗೆ, ಈ ಟ್ರಕ್‌ನ ಹೆಸರು “ಗೋ ಫಿಶ್‌’. 

Advertisement

  ಫಿಶ್‌ ಅಂದ್ರೆ ಬರೀ ಬಂಗುಡೆ ಫ್ರೈ, ಕರ್ರಿ ಎನ್ನುವ ಸಾಂಪ್ರದಾಯಿಕ ರುಚಿಗಳನ್ನೂ ಮೀರಿ, ಇಲ್ಲಿ ಸ್ಪೆಷೆಲ್‌ ಖಾದ್ಯಗಳು ಆಸೆ ಹುಟ್ಟಿಸುತ್ತವೆ. ಪ್ರಾನ್‌ ಬಿರಿಯಾನಿ ಇಲ್ಲಿನ ಪ್ರಮುಖ ಸೆಳೆತ. ಇದಲ್ಲದೇ ಬಗೆ ಬಗೆಯ ಫಿಶ್‌ ಕಬಾಬ್‌ಗಳ ರುಚಿಯನ್ನೂ ನೀವು ಮೆಲ್ಲಬಹುದು. ಸಾಮಾನ್ಯವಾಗಿ ಫಿಶ್‌ಪ್ರಿಯರು ಖಾದ್ಯಗಳು ಖಾರ ಖಾರವಿರಲಿಯೆಂದೇ ಬಯಸುತ್ತಾರೆ. ಆ ನಿರೀಕ್ಷೆಗೆ ತಕ್ಕಂತೆ ಟ್ರಕ್‌ನಲ್ಲಿ ಖಾದ್ಯಗಳು ಅಣಿಯಾಗಿರುತ್ತವೆ.

ಎಲ್ಲಿ ನಿಂತಿರುತ್ತೆ?: ಹೊಸ ಬಿಇಎಲ್‌ ರಸ್ತೆ, ಆರ್‌ಎಂವಿ ಸ್ಟೇಜ್‌ 2ನೇ ಸ್ಟೇಜ್‌
ಸಮಯ: ಬೆ.10ರಿಂದ ಸಂ.5

Advertisement

Udayavani is now on Telegram. Click here to join our channel and stay updated with the latest news.

Next