Advertisement

ಉಪ್ಪುಂದ, ಕೊಡೇರಿ ಮೀನುಗಾರರ ಘರ್ಷಣೆ ಪ್ರಕರಣ: ಹಲವರ ಬಂಧನ

10:57 PM Nov 08, 2020 | Suhan S |

ಉಪ್ಪುಂದ: ಕೊಡೇರಿ ಕಿರಿಮಂಜೇಶ್ವರ ಮೀನು ಹರಾಜು ಪ್ರಾಂಗಣಕ್ಕೆ ಸಂಬಂಧಿಸಿ ಉಪ್ಪುಂದ ಮತ್ತು ಕೊಡೇರಿ ಮೀನುಗಾರರ ನಡುವಣ ಘರ್ಷಣೆಯಿಂದ ಪೊಲೀಸರು ಲಾಠಿ ಚಾರ್ಜ್‌ ನಡೆಸಿರುವ ಘಟನೆ ಕುರಿತು ರವಿವಾರ ಪ್ರಕರಣ ದಾಖಲಾಗಿದ್ದು ಪೊಲೀಸರು ಹಲವರನ್ನು ಬಂಧಿಸಿದ್ದಾರೆ.

Advertisement

ಮೀನುಗಾರಿಕೆ ಇಲಾಖೆಯ ಆದೇಶದಂತೆ ನ. 7ರಂದು ಉಪ್ಪುಂದ ಗ್ರಾಮ ವ್ಯಾಪ್ತಿಯ ಮೀನುಗಾರರು ಮೀನು ಖಾಲಿ ಮಾಡಲು ಕೊಡೇರಿ ಬಂದರಿನ ಮೀನು ಹರಾಜು ಪ್ರಾಂಗಣಕ್ಕೆ ಬಂದಾಗ ಕೊಡೇರಿ ವ್ಯಾಪ್ತಿಯ ಮೀನುಗಾರರು 8-10 ದೋಣಿಗಳನ್ನು ಅಡ್ಡ ಇಟ್ಟು ಮೀನು ವ್ಯಾಪಾರಕ್ಕೆ ತೊಂದರೆ ಮಾಡಿದ್ದರು. ಇಲ್ಲಿನ ಪ್ರಾಂಗಣದಲ್ಲಿ ಮೂಲಸೌಕರ್ಯ ಕಲ್ಪಿಸದ ಹಾಗೂ ಎಡಮಾವಿನ ಹೊಳೆಯಲ್ಲಿ ಸೇತುವೆ ನಿರ್ಮಾಣ ಮಾಡುವವರೆಗೆ ಅವಕಾಶ ನೀಡುವುದಿಲ್ಲ ಎಂಬುದು ಅವರ ವಾದವಾಗಿತ್ತು.

ಈ ಹಿನ್ನೆಲೆಯಲ್ಲಿ ಬೈಂದೂರಿನ ಕಾರ್ಯನಿರ್ವಾಹಕ ದಂಡಾಧಿಕಾರಿ ಬಸಪ್ಪ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಮುಖಂಡರೊಂದಿಗೆ ಚರ್ಚಿಸಿ ಅಡ್ಡ ಇಟ್ಟ ದೊಣಿಗಳನ್ನು ತೆರವುಗೊಳಿಸಲು ಮನವಿ ಮಾಡಿದರು. ಅಧಿಕಾರಿಗಳ ಮನವಿಯನ್ನು ಲೆಕ್ಕಿಸದೇ ಪ್ರತಿಭಟನೆ ಮುಂದುವರಿದು ಎರಡು ಕಡೆಯ ಮೀನುಗಾರರು ಘರ್ಷಣೆಗೆ ಇಳಿದರು. ಆಬಳಿಕ ಪೊಲೀಸರು ಲಾಠಿ ಚಾರ್ಚ್‌ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು 15 ಜನರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next