Advertisement

ಮೊದಲ ಬಾರಿ ಬಾಹ್ಯಾಕಾಶಕ್ಕೆ ಸೌದಿ ಅರೇಬಿಯಾದ ಮಹಿಳೆ

11:24 PM Feb 13, 2023 | Team Udayavani |

ರಿಯಾದ್‌: ಖಟ್ಟರ್‌ ಸಂಪ್ರದಾಯವಾದಿ ದೇಶವಾದ ಸೌದಿ ಅರೇಬಿಯಾವು ಬದಲಾಗುತ್ತಿರುವುದಕ್ಕೆ ಹೊಸ ಸಾಕ್ಷ್ಯವೊಂದು ಲಭ್ಯವಾಗಿದೆ. ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾವು ಮಹಿಳೆಯೊಬ್ಬರನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲು ಸಜ್ಜಾಗಿದೆ.

Advertisement

ಪ್ರಸಕ್ತ ವರ್ಷಾಂತ್ಯದಲ್ಲೇ ಸೌದಿಯ ಬಾಹ್ಯಾಕಾಶ ಯೋಜನೆಯೊಂದರ ಮೂಲಕ ಮೊದಲ ಮಹಿಳಾ ಗಗನಯಾತ್ರಿ ನಭಕ್ಕೆ ಜಿಗಿಯಲಿದ್ದಾರೆ.

2023ರ ದ್ವಿತೀಯಾರ್ಧದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ತೆರಳುತ್ತಿರುವ ಪುರುಷ ಗಗನಯಾತ್ರಿ ಅಲಿ-ಅಲ್‌ ಖರ್ನಿ ಅವರಿಗೆ ಮಹಿಳಾ ಗಗನಯಾತ್ರಿ ರೆಯ್ನಾನಾ ಬರ್ನಾವಿ ಅವರೂ ಸಾಥ್‌ ನೀಡಲಿದ್ದಾರೆ ಎಂದು ಸೌದಿಯ ಅಧಿಕೃತ ಪ್ರಸ್‌ ಏಜೆನ್ಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next