Advertisement
ಮೊದಲು ಬ್ಯಾಟಿಂಗ್ ನಡೆಸಿದ ಒಮಾನ್ ತಂಡವು ಶೋಯಿಬ್ ಖಾನ್ ಮತ್ತು ಸೂರಜ್ ಕುಮಾರ್ ಅವರ ಅರ್ಧಶತಕದ ನೆರವಿನಿಂದ 9 ವಿಕೆಟಿಗೆ 221 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ರೊಮಾರಿಯೊ ಶೆಫರ್ಡ್ 44 ರನ್ನಿಗೆ 3 ವಿಕೆಟ್ ಪಡೆದರು.
ಈ ಕೂಟದಲ್ಲಿ ಗುರುವಾರ ನಡೆಯುವ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವು ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಸ್ಕಾಟ್ಲೆಂಡ್ ಸದ್ಯ ಆರಂಕ ಹೊಂದಿದ್ದರೆ ನೆದರ್ಲೆಂಡ್ಸ್ ನಾಲ್ಕಂಕ ಹೊಂದಿದೆ. ಆದರೆ ನೆದರ್ಲೆಂಡ್ಸ್ ಮೈನಸ್ 0.042 ರನ್‌ರೇಟ್ ಹೊಂದಿದ್ದರೆ ಸ್ಕಾಟ್ಲೆಂಡ್ ಪ್ಲಸ್ 0.296 ರನ್ ರೇಟ್ ಹೊಂದಿದೆ. ಹೀಗಾಗಿ ಸ್ಕಾಟ್ಲೆಂಡ್‌ಗೆ ಫೈನಲಿಗೇರುವ ಅವಕಾಶ ಹೆಚ್ಚಿದೆ. ಕೂಟದ ಅಂತಿಮ ಲೀಗ್ ಪಂದ್ಯ ಶುಕ್ರವಾರ ನಡೆಯಲಿದ್ದು 8 ಅಂಕ ಹೊಂದಿರುವ ಶ್ರೀಲಂಕಾ ಎರಡಂಕ ಹೊಂದಿರುವ ವೆಸ್ಟ್‌ಇಂಡೀಸ್ ತಂಡವನ್ನು ಎದುರಿಸಲಿದೆ.