ಗುವಾಹಾಟಿ: ಪಶ್ಚಿಮ ಬಂಗಾಲದ ನ್ಯೂ ಜಲಪಾಯ್‌ಗಾರಿಯಿಂದ ಅಸ್ಸಾಂನ ಗುವಾಹಾಟಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಚಾಲನೆ ನೀಡಿದ್ದಾರೆ. ಇದು ಈಶಾನ್ಯ ರಾಜ್ಯ ಅಸ್ಸಾಂಗೆ ಮೊದಲ ವಂದೇ ಭಾರತ್ ಎಕ್ಸ್ ಪ್ರಸ್ ಆಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಹೊಸ ರೈಲಿನಿಂದಾಗಿ ಅಸ್ಸಾಂನಲ್ಲಿ ಶಿಕ್ಷಣ, ಪ್ರವಾಸೋದ್ಯಮ, ವ್ಯಾಪಾರ, ವಾಣಿಜ್ಯ ಅವಕಾಶಗಳು ವೃದ್ಧಿಯಾಗಲಿವೆ ಎಂದು ಹೇಳಿದ್ದಾರೆ. ಕಾಝಿರಂಗ, ಮನಾಸ್ ನ್ಯಾಶನಲ್ ಪಾರ್ಕ್, ಕಾಮಾಖ್ಯಾ ದೇವಸ್ಥಾನಗಳಿಗೆ ಶೀಘ್ರವಾಗಿ ತೆರಳುವವರಿಗೆ ಇದರಿಂದ ಅನುಕೂಲವಾಗಲಿದೆ.
Advertisement