Advertisement

ಇದೇ ಮೊದಲ ಬಾರಿಗೆ 1,000 ರೂ. ದಾಟಿದ ಎಲ್‌ಐಸಿ ಷೇರಿನ ಮೌಲ್ಯ

12:06 AM Feb 06, 2024 | |

ಮುಂಬಯಿ: ಇದೇ ಮೊದಲ ಬಾರಿಗೆ ಎಲ್‌ಐಸಿಯ 1ಷೇರಿನ ಬೆಲೆ 1000 ರೂ. ದಾಟಿದೆ. ಸೋಮವಾರದ ವಹಿವಾಟಿನಲ್ಲಿ ಷೇರಿನ ಬೆಲೆ ದಾಖಲೆಯ 1027.95 ರೂ.ಗೆ ತಲುಪಿದೆ. ಇದರ ಜತೆಗೆ ಎಲ್‌ಐಸಿ ಮಾರುಕಟ್ಟೆ ಮೌಲ್ಯವು 6.38 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಒಂದು ತಿಂಗಳಲ್ಲಿ ಎಲ್‌ಐಸಿ ಷೇರಿನ ಮೌಲ್ಯವು ಶೇ.20.74ರಷ್ಟು ಏರಿಕೆಯಾಗಿದೆ. ಇದೇ ರೀತಿ ಕಳೆದ ಆರು ತಿಂಗಳಲ್ಲಿ ಶೇ.51.77ರಷ್ಟು ಹಾಗೂ ಕಳೆದ ಒಂದು ವರ್ಷದಲ್ಲಿ ಶೇ.65.83ರಷ್ಟು ಏರಿಕೆಯಾಗಿದೆ. ಕೆಲ ದಿನಗಳ ಹಿಂದೆ ಎಸ್‌ಬಿಐ ಅನ್ನು ಹಿಂದಿಕ್ಕಿ ಎಲ್‌ಐಸಿ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಉದ್ಯಮವಾಗಿ ಹೊರಹೊಮ್ಮಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next