Advertisement

Bangladesh ಎದುರು ಮೊದಲ ಟೆಸ್ಟ್‌: ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

10:37 PM Sep 13, 2024 | Team Udayavani |

ಚೆನ್ನೈ: ಪ್ರವಾಸಿ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ ಪಂದ್ಯಕ್ಕಾಗಿ ಭಾರತದ ಕ್ರಿಕೆಟಿಗರು ಶುಕ್ರವಾರ ಚೆನ್ನೈಯಲ್ಲಿ ಮೊದಲ ಸುತ್ತಿನ ಅಭ್ಯಾಸ ನಡೆಸಿದರು. ಈ ಮುಖಾಮುಖಿ ಸೆ. 19ರಂದು ಆರಂಭವಾಗಲಿದೆ.

Advertisement

ನಾಯಕ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಸೇರಿದಂತೆ, ಬಹುತೇಕ ಎಲ್ಲ ಆಟಗಾರರೂ ಇಲ್ಲಿನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಬೆವರು ಸುರಿಸಿದರು.

ಗಂಭೀರ್‌ ಮಾರ್ಗದರ್ಶನ
ಇದು ನೂತನ ಕೋಚ್‌ ಗೌತಮ್‌ ಗಂಭೀರ್‌ ಅವರ ಮೊದಲ ತವರು ಪಂದ್ಯವಾಗಿದೆ. ಗಂಭೀರ್‌ ಸೇರಿದಂತೆ ನೂತನ ಬೌಲಿಂಗ್‌ ಕೋಚ್‌ ಮಾರ್ನೆ ಮಾರ್ಕೆಲ್‌, ಸಹಾಯಕ ಕೋಚ್‌ ಅಭಿಷೇಕ್‌ ನಾಯರ್‌ ಕೂಡ ಅಭ್ಯಾಸದ ವೇಳೆ ಹಾಜರಿದ್ದು ಮಾರ್ಗದರ್ಶನವಿತ್ತರು. ಇದಕ್ಕೆ ಸಂಬಂಧಿಸಿದ ಚಿತ್ರ ಹಾಗೂ ವೀಡಿಯೊಗಳನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ವಿರಾಟ್‌ ಕೊಹ್ಲಿ 45 ನಿಮಿಷಗಳ ಕಾಲ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಹಾಗೆಯೇ ಜಸ್‌ಪ್ರೀತ್‌ ಬುಮ್ರಾ ಪೂರ್ತಿ ಫಿಟ್‌ನೆಸ್‌ನೊಂದಿಗೆ ಬೌಲಿಂಗ್‌ ನಡೆಸಿ ಗಮನ ಸೆಳೆದರು.

ನಾಯಕ ರೋಹಿತ್‌ ಶರ್ಮ ಗುರುವಾರ ರಾತ್ರಿ ಚೆನ್ನೈಗೆ ಆಗಮಿಸಿದರೆ, ಕೊಹ್ಲಿ ನೇರವಾಗಿ ಲಂಡನ್‌ನಿಂದ ಬಂದರು. ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌ ಕೂಡ ಗುರುವಾರ ಚೆನ್ನೈ ತಲುಪಿದರು. ಸರ್ಫ‌ರಾಜ್‌ ಖಾನ್‌ ಅನಂತಪುರದಲ್ಲಿ ದುಲೀಪ್‌ ಟ್ರೋಫಿ ಪಂದ್ಯ ಆಡುತ್ತಿರುವ ಕಾರಣ, ಇದು ಮುಗಿದ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ.

Advertisement

ಬಾಂಗ್ಲಾದೇಶ ಕಳೆದ ಪಾಕಿಸ್ಥಾನ ವಿರುದ್ಧದ ಸರಣಿಯಲ್ಲಿ, ಅವರದೇ ನೆಲದಲ್ಲಿ 2-0 ಅಂತರದ ಕ್ಲೀನ್‌ಸ್ವೀಪ್‌ ಫ‌ಲಿತಾಂಶ ದಾಖಲಿಸಿದ ಉತ್ಸಾಹದಲ್ಲಿದೆ. ಈ ಜಯದಿಂದ ಅದು ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ನೆಗೆದಿದೆ. ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ. ಬಾಂಗ್ಲಾ ತಂಡ ಶೀಘ್ರವೇ ಚೆನ್ನೈ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next