Advertisement

ನಿತೀಶ್‌ ಕಾರ್ಯಕ್ರಮ ತಪ್ಪಿಸಿಕೊಂಡ ತೇಜಸ್ವಿ: ಘಟಬಂಧನ ಬಿರುಕು ತೀವ್ರ

04:19 PM Jul 15, 2017 | Team Udayavani |

ಪಟ್ನಾ : ಬಿಹಾರದ ಮಹಾಘಟಬಂಧನದಲ್ಲಿನ ಬಿಕ್ಕಟ್ಟು ಶಮನವಾಗುವ ಲಕ್ಷಣವೇ ತೋರಿ ಬರುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ  ಭ್ರಷ್ಟಾಚಾರ ಕಳಂಕಿತ ಲಾಲು ಪುತ್ರ, ಉಪ ಮುಖ್ಯಮಂತಿ ತೇಜಸ್ವಿ ಯಾದವ್‌ ಆ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿದ್ದಾರೆ. 

Advertisement

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಆಯೋಜಿಸಿದ್ದ  ವಿಶ್ವ ಯುವ ಕೌಶಲ ದಿವಸ ಸಮಾರಂಭದ ವೇದಿಕೆಯಲ್ಲಿ ತೇಜಸ್ವಿ ಯಾದವ್‌ ಅವರಿಗೆ ಆಸನವನ್ನು ಇಡಲಾಗಿತ್ತು; ಅದರ ಮುಂದೆ ಅವರ ನೇಮ್‌ ಪ್ಲೇಟ್‌ ಕೂಡ ಇಡಲಾಗಿತ್ತು. ಆದರೆ ತೇಜಸ್ವಿ ಕಾರ್ಯಕ್ರಮಕ್ಕೆ ಬಾರದಿದ್ದಾಗ ನೇಮ್‌ ಪ್ಲೇಟ್‌ ಮುಚ್ಚಲಾಯಿತು; ಬಳಿಕ ಆಸನ ಸಹಿತವಾಗಿ ಆ ನೇಮ್‌ ಪ್ಲೇಟನ್ನು ತೆಗೆಯಲಾಯಿತು. 

‘ಭ್ರಷ್ಟಾಚಾರ ಕಳಂಕಿತರಾಗಿರುವ ಲಾಲು ಪುತ್ರ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಕಳಂಕದಿಂದ ಮುಕ್ತರಾಗಿ ಬರುವ ತನಕ ಅಧಿಕಾರ ಬಿಟ್ಟುಕೊಡುವುದೇ ಲೇಸು; ಹಿಂದೆ ನಿತೀಶ್‌ ಕುಮಾರ್‌ ಹಾಗೆಯೇ ಮಾಡಿದ್ದಾರೆ’ ಎಂದು ಜೆಡಿಯು ವಕ್ತಾರ ಕೆ ಸಿ ತ್ಯಾಗಿ ಹೇಳಿರುವುದು ಲಾಲು ಗೆ ಪಥ್ಯವಾಗಿಲ್ಲ. 

“ತೇಜಸ್ವಿ ರಾಜೀನಾಮೆ ಕೊಡುವುದಿಲ್ಲ; ಅಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಲಾಲು ಖಡಕ್‌ ಉತ್ತರ ನೀಡಿದ್ದಾರೆ. ಹಾಗಿದ್ದರೂ ಬಿಹಾರದ ಮಹಾ ಘಟಬಂಧನಕ್ಕೆ ಯಾವುದೇ ಧಕ್ಕೆ ಇಲ್ಲ ಎಂದೂ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next