ಹೊಸದಿಲ್ಲಿ/ ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಸಭೆ ಬುಧವಾರ ಹೊಸದಿಲ್ಲಿಯಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ದೇಗುಲ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವ ಬಗ್ಗೆ ಸೂಕ್ತವಾಗಿರುವ ಮುಹೂರ್ತ, ಅದರ ವೆಚ್ಚ ನಿಭಾಯಿಸಲು ದೇಣಿಗೆ ಸಂಗ್ರಹ, ಅದಕ್ಕೆ ಸಂಬಂಧಿಸಿದಂತೆ ಲೆಕ್ಕಪತ್ರ ನಿರ್ವಹಣೆ, ಯಾವಾಗ ನಿರ್ಮಾಣ ಕಾರ್ಯ ಮುಕ್ತಾಯವಾಗಬೇಕು ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವ ಸಾಧ್ಯತೆ ಗಳಿವೆ.
ನಿರ್ಮಾಣ ಕಾರ್ಯಕ್ಕೆ ಅಗತ್ಯವಾಗಿರುವ ಧನಸಂಗ್ರಹದ ಮಾಧ್ಯಮದ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ. ಟ್ರಸ್ಟ್‌ನಲ್ಲಿ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸದಸ್ಯರಾಗಿದ್ದಾರೆ. ಅವರೂ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಗೋರಿಗಳ ಮೇಲೆ ಸಾಧ್ಯವೇ?: ಸಭೆಗೆ ಮುನ್ನ ಅಯೋಧ್ಯೆಯ ಒಂಭತ್ತು ಮಂದಿ ನಿವಾಸಿಗಳು ಟ್ರಸ್ಟ್‌ನ ಪದಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 1, 480 ಚದರ ಮೀಟರ್ ವ್ಯಾಪ್ತಿಯಲ್ಲಿ ಮುಸ್ಲಿಮ್ ಸಮುದಾಯದವರ ಗೋರಿಗಳು ಇವೆ. ಇದೇ ಸ್ಥಳದಲ್ಲಿ ಬಾಬರಿ ಮಸೀದಿಯೂ ಇತ್ತು. ಇಂಥ ಸ್ಥಳದಲ್ಲಿ ದೇಗುಲ ನಿರ್ಮಾಣ ಮಾಡಲು ಹಿಂದೂ ಧರ್ಮದಲ್ಲಿ ಅವಕಾಶ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ನಿವಾಸಿಗಳ ಪರವಾಗಿ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಎಂ.ಆರ್.ಶಂಶಾದ್ ಹತ್ತು ಮಂದಿ ಸದಸ್ಯರಿಗೆ ನಾಲ್ಕು ಪುಟಗಳ ಪತ್ರದಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗಿದೆ.
‘ಸರಕಾರ ವಶಪಡಿಸಿಕೊಂಡಿರುವ 67 ಎಕರೆ ಜಮೀನಿನಲ್ಲಿ ದೇಗುಲ ನಿರ್ಮಾಣ ವಿಚಾರ ಕಾನೂನಿಗೆ ವಿರೋಧವಾಗುತ್ತದೆ. 4-5 ಎಕರೆಯಲ್ಲಿ ಮಸೀದಿ ಇದ್ದ ಸ್ಥಳವನ್ನು ನಿರೀಕ್ಷೆಯಂತೆಯೇ ಹಸ್ತಾಂತರ ಮಾಡಲಾಗಿದೆ. 1949ರ ಬಳಿಕ ಈ ಸ್ಥಳದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಹೀಗಾಗಿ, ಹಿಂದೆ ಅಲ್ಲಿ ಇದ್ದ ಗೋರಿಗಳು ಈಗ ಕಾಣಲಾರವು. ಅಲ್ಲಿಯೇ ಶ್ರೀರಾಮನ ಮೂರ್ತಿಯನ್ನು ಬಲವಂತವಾಗಿ ಸ್ಥಾಪಿಸಲಾಗಿತ್ತು. 1992ರಲ್ಲಿ ಮಸೀದಿಯನ್ನು ಧ್ವಂಸ ಮಾಡಲಾಯಿತು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ಹಿಂದೂ ಮತ್ತು ಸನಾತನ ಸಂಸ್ಕೃತಿಯಲ್ಲಿ ಪ್ರಖರ ಪಾಂಡಿತ್ಯ ಇರುವ ಟ್ರಸ್ಟಿಗಳು ಭಗವಾನ್ ಶ್ರೀರಾಮನ ದೇಗುಲವನ್ನು ಮುಸ್ಲಿಮರ ಗೋರಿಗಳ ಮೇಲೆ ನಿರ್ಮಿಸಲು ಸಾಧ್ಯವೇ? 1994ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ 67 ಎಕರೆ ಜಮೀನನ್ನು ಕೇಂದ್ರ ಸರಕಾರ ಸ್ವಾಧೀನ ಮಾಡಿಕೊಂಡದ್ದನ್ನು ಸಮರ್ಥಿಸಿ ತೀರ್ಪು ನೀಡಿತ್ತು. ಆದರೆ 1993ರ ಈ ಕಾಯ್ದೆ ಕೋಮು ಸೌಹಾರ್ದ ಕಾಪಾಡಲು ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಆಗಿತ್ತು’ ಪತ್ರದಲ್ಲಿ ಅಭಿಪ್ರಾಯಪಡಲಾಗಿದೆ.
‘ಮುಸ್ಲಿಂ ಸಮುದಾಯವನ್ನು ಹೊರಗಿಡುವ ನಿಟ್ಟಿನಲ್ಲಿ ಜಮೀನು ಸ್ವಾಧೀನಪಡಿಸಿಕೊಂಡದ್ದಲ್ಲ. ಬದಲಾಗಿ ಅಲ್ಲಿ ಮಸೀದಿ ನಿರ್ಮಾಣ ಮಾಡಲುಎಂದು ಬೇಸರ ವ್ಯಕ್ತಪಡಿಸಲಾಗಿದೆ.