Advertisement
ಪಿಯುಸಿ ಪಠ್ಯಪುಸ್ತಕವನ್ನು ಸರಕಾರದ ವತಿಯಿಂದಲೇ ಮುದ್ರಿಸಿ, ಪುಸ್ತಕ ಮಳಿಗೆಗಳಿಗೆ ವಿತರಿಸ ಲಾಗುತ್ತದೆ. 2014ರ ಬಳಿಕ ಪಠ್ಯಕ್ರಮ ಬದಲಾಗದೆ ಪುಸ್ತಕ ಮುದ್ರಣ ವಾಗುತ್ತಿತ್ತು. ಈ ಬಾರಿ ಮಾತ್ರ ಪಠ್ಯಪುಸ್ತಕ ಪೂರೈಕೆಯಾಗದೆ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತಿಲ್ಲ.
ಪುಸ್ತಕ ಮಳಿಗೆಗಳಲ್ಲಿ ವಿಚಾರಿಸಿದರೆ, ಭಾಷಾ ವಿಷಯ ಹೊರತುಪಡಿಸಿ ಉಳಿದ ಪುಸ್ತಕ ಬಂದಿಲ್ಲ ಎನ್ನುತ್ತಾರೆ. ಯಾವಾಗ ಬರಲಿದೆ ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ಅವರಲ್ಲಿ ಇಲ್ಲ. ವಿಜ್ಞಾನ ವಿದ್ಯಾರ್ಥಿಗಳಿಗೆ ಕಷ್ಟ
ಪಠ್ಯಪುಸ್ತಕ ಇಲ್ಲದೆ ಹೆಚ್ಚು ತೊಂದರೆಗೆ ಒಳಗಾಗುವವರು ವಿಜ್ಞಾನ ವಿದ್ಯಾರ್ಥಿಗಳು. ಅವರಿಗೆ ಹಳೆ ವಿದ್ಯಾರ್ಥಿಗಳ ಪಠ್ಯ ಪುಸ್ತಕ ದೊರೆಯುವ ಸಾಧ್ಯತೆ ಕಡಿಮೆ. ಸಿಇಟಿ, ನೀಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅವುಗಳ ಅಗತ್ಯ ಇರುತ್ತದೆ. ಹೀಗಾಗಿ ಪಥಮ ಪಿಯುಸಿ ಸೈನ್ಸ್‌ಗೆ ದಾಖಲಾದ ವಿದ್ಯಾರ್ಥಿಗಳು ಕಷ್ಟಪಡುವಂತಾಗಿದೆ.
Related Articles
ವಸತಿಯುತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿ ಯಿಂದಲೇ ಪಠ್ಯಪುಸ್ತಕ ನೀಡುವುದು ರೂಢಿ. ಈ ಕಾಲೇಜುಗಳಲ್ಲಿ ಹೊರ ಜಿಲ್ಲೆಯ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿರುವುದರಿಂದ ಅಂತಹ ಕಾಲೇಜುಗಳಿಗೆ ಪುಸ್ತಕ ಹೊಂದಿಸುವುದು ತ್ರಾಸದಾಯಕ. ಉದಾಹರಣೆಗೆ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ 350 ವಿದ್ಯಾರ್ಥಿಗಳಿದ್ದಲ್ಲಿ ಅಷ್ಟೊಂದು ಪಠ್ಯಪುಸ್ತಕ ಹೊಂದಿಸುವುದು ಕಷ್ಟಸಾಧ್ಯ.
Advertisement
ರಾಜ್ಯದ ನಾಲ್ಕು ಕಡೆಗಳಲ್ಲಿ ಪಿಯುಸಿ ಪಠ್ಯಪುಸ್ತಕ ಮುದ್ರಣವಾಗುತ್ತಿದೆ. ಪುಸ್ತಕ ಮಳಿಗೆಗಳಿಗೆ ಪುಸ್ತಕ ಪೂರೈಕೆಯೂ ಆಗುತ್ತಿದೆ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದರೂ ವಿದ್ಯಾರ್ಥಿಗಳು, ಪೋಷಕರು ಆತಂಕ ಪಡಬೇಕಾಗಿಲ್ಲ.ಸುಬ್ರಹ್ಮಣ್ಯ ಜೋಷಿ, ಜಿಲ್ಲಾ ಉಪನಿರ್ದೇಶಕರು, ಪ.ಪೂ. ಶಿಕ್ಷಣ ಇಲಾಖೆ, ಉಡುಪಿ ಕಾಲೇಜಿಗೆ ಪೂರೈಕೆಯಾಗಲಿ
ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಸರಕಾರದಿಂದ ಪಠ್ಯಪುಸ್ತಕ ಪೂರೈಕೆಯಾದಂತೆ ಕಾಲೇಜುಗಳಿಗೂ ದಾಖಲಾತಿಗೆ ಅನುಗುಣವಾಗಿ ಸರಕಾರವೇ ಪಠ್ಯ ಪುಸ್ತಕಒದಗಿಸಲಿ ಎನ್ನುತ್ತಾರೆ ವಿದ್ಯಾರ್ಥಿನಿ ರಕ್ಷಾ ಸಂಪ್ಯ. ರಾಮಚಂದ್ರ ಬರೆಪ್ಪಾಡಿ