Advertisement

ಪ್ರಥಮ ಪಿಯುಸಿ ಫಲಿತಾಂಶ: ದ.ಕ. ಶೇ. 91.36, ಉಡುಪಿ ಶೇ. 91

12:59 AM May 06, 2020 | Sriram |

ಉಡುಪಿ/ ಮಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆ ಫೆಬ್ರವರಿಯಲ್ಲಿ ನಡೆಸಿದ ಪ್ರಥಮ ಪಿಯುಸಿ ಫ‌ಲಿತಾಂಶ ಮಂಗಳವಾರ ಪ್ರಕಟಗೊಂಡಿದೆ.

Advertisement

ಉಡುಪಿ ಜಿಲ್ಲೆಯಲ್ಲಿ ಪ್ರಥಮ ಪಿಯುಸಿ ಪರೀಕ್ಷೆಗೆ 15,379 ಮಂದಿ ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿ, ಅದರಲ್ಲಿ 15,201 ಮಂದಿ ಪರೀಕ್ಷೆ ಬರೆದಿದ್ದರು. 13,770 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 91 ಫ‌ಲಿತಾಂಶ ಬಂದಿದೆ.

ದ.ಕ. ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು 33,498 ವಿದ್ಯಾರ್ಥಿಗಳ ಪೈಕಿ 30,603 ಮಂದಿ ಉತ್ತೀರ್ಣರಾಗಿದ್ದು, 2,509 ಮಂದಿ ಅನುತ್ತೀರ್ಣ ಗೊಂಡಿದ್ದಾರೆ. ಶೇ. 91.36 ಫಲಿತಾಂಶ ದಾಖಲಾಗಿದೆ. ಬಾಲಕರ ಪೈಕಿ 14,941 ಮಂದಿ ಉತ್ತೀರ್ಣರಾದರೆ, 1,812 ಮಂದಿ ಅನುತ್ತೀರ್ಣ, ಬಾಲಕಿಯರ ಪೈಕಿ 15,662 ಮಂದಿ ಉತ್ತೀರ್ಣ, 697 ಮಂದಿ ಅನುತ್ತೀರ್ಣರಾಗಿದ್ದಾರೆ.

ಕೋವಿಡ್-19 ವೈರಸ್‌ ಹರಡುವ ಭೀತಿ ಇರುವುದರಿಂದ ಫ‌ಲಿತಾಂಶ ನೋಡಲು ವಿದ್ಯಾರ್ಥಿಗಳು ಕಾಲೇಜಿಗೆ ಬರ ಬಾರದು ಎಂದು ಕಟ್ಟುನಿಟ್ಟಿನ ಸೂಚನೆ ಯನ್ನು ಶಿಕ್ಷಣ ಇಲಾಖೆ ನೀಡಿತ್ತು. ಜಿಲ್ಲಾ ಪಿಯು ಉಪನಿರ್ದೇಶಕ ಕಚೇರಿ ಯಿಂದಲೇ ನೇರವಾಗಿ ವಿದ್ಯಾರ್ಥಿ ಗಳಿಗೆ ಫ‌ಲಿತಾಂಶವನ್ನು ವಿದ್ಯಾರ್ಥಿಗಳ ಮೊಬೈಲ್‌ಗೆ ಹಾಗೂ ಇಮೇಲ್‌ಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು.

ಪೂರಕ ಪರೀಕ್ಷೆ ದಿನ ನಿಗದಿಯಾಗಿಲ್ಲ
ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲೆ ನಡೆಸಲು ಕಾಲೇಜು ಮಂಡಳಿ ನಿರ್ಧರಿಸಿದೆ, ಈ ಹಿಂದೆಲ್ಲ ತಾಲೂಕು ಮಟ್ಟದಲ್ಲಿ ಒಂದೆರಡು ಕೇಂದ್ರ ಗಳನ್ನು ತೆರೆದು ಪೂರಕ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡ ಲಾಗುತ್ತಿತ್ತು. ಈ ಬಾರಿ ಲಾಕ್‌ಡೌನ್‌ ಇರುವುದರಿಂದ ಒಂದಷ್ಟು ಮಾನದಂಡ ಬದಲಾಗಲಿವೆ. ಪರೀಕ್ಷೆಗೆ ದಿನ ನಿಗದಿಪಡಿಸಿ ಸರಕಾರ ಇನ್ನು ಸುತ್ತೋಲೆ ಹೊರಡಿಸಬೇಕಷ್ಟೆ.

Advertisement

ದ್ವಿತೀಯ ಪಿಯುಸಿ
ಒಂದು ಪರೀಕ್ಷೆ ಬಾಕಿ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಂಗ್ಲಿಷ್‌ ಪರೀಕ್ಷೆ ನಡೆಯಲು ಬಾಕಿ ಇದೆ. ಲಾಕ್‌ಡೌನ್‌ ತೆರವಾದ ಬಳಿಕ ನಡೆಯುವ ಸಾಧ್ಯತೆಯಿದೆ. ಈ ಬಗ್ಗೆ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ.

ಸುವಿದ್ಯಾ ಆ್ಯಪ್‌ನಲ್ಲಿ ಫ‌ಲಿತಾಂಶ
“ಸುವಿದ್ಯಾ’ https://result.dkpucpa.com ವೆಬ್‌ಸೈಟ್‌ನಲ್ಲಿ ಕೂಡ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ, ಹುಟ್ಟಿದ ದಿನಾಂಕವನ್ನು ನಮೂದಿಸಿ ಪರೀಕ್ಷೆಯ ಫ‌ಲಿತಾಂಶವನ್ನು ಪಡೆಯಲು ಅನುವು ಮಾಡಿಕೊಟ್ಟಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಫ‌ಲಿತಾಂಶ ವೀಕ್ಷಿಸಿದರು. ಇದು ರಾಜ್ಯ ಮಟ್ಟದ ಸರಕಾರದ ಅಧಿಕೃತ ವೆಬ್‌ಸೈಟ್‌. ಇದೇ ವೆಬ್‌ ಮೂಲಕ ಉಭಯ ಜಿಲ್ಲೆಯ ವಿದ್ಯಾರ್ಥಿಗಳೂ ಮಾಹಿತಿ ಪಡೆದುಕೊಂಡರು. ಈ ವೆಬ್‌ಸೈಟ್‌ ಅಲ್ಲದೆ ಇನ್ನು ಕೆಲವು ವಿದ್ಯಾರ್ಥಿಗಳು ಕಾಲೇಜು ಮುಖ್ಯಸ್ಥರಿಗೆ ಮೊಬೈಲ್‌ ಕರೆ ಮಾಡಿ ತಮ್ಮ ಫ‌ಲಿತಾಂಶದ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಫ‌ಲಿತಾಂಶ ಪಡೆಯಲು ಯಾವುದೇ ತೊಂದರೆಗಳು ಆಗಿರಲಿಲ್ಲ ಎಂದು ಉಡುಪಿ ಜಿಲ್ಲೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಪ್ರಕಟನೆ ತಿಳಿಸಿದೆ.

ಮುಂದಿನ ವರ್ಷದಿಂದ ಪ್ರತ್ಯೇಕ ವೆಬ್‌ಸೈಟ್‌
ಪ್ರಸ್ತುತ ರಾಜ್ಯ ಮಟ್ಟದ ಆ್ಯಪ್‌ನಿಂದಲೇ ಯಾವುದೇ ಸಮಸ್ಯೆ ಇಲ್ಲದೆ ಫ‌ಲಿತಾಂಶ ಸಿಗುತ್ತಿದೆ. ಇಲಾಖೆಯ ಅನುಮತಿ ಪಡೆದು ಆಯಾ ಜಿಲ್ಲೆಯ ವೆಬ್‌ ವಿಳಾಸ ರಚನೆಗೆ ಅವಕಾಶವಿದೆ. ಉಡುಪಿಯಲ್ಲಿ ಇದು ಪ್ರಕ್ರಿಯೆಯ ಹಂತದಲ್ಲಿದೆ. ಮುಂದಿನ ವರ್ಷದಿಂದ ಇಲ್ಲಿಗೂ ಪ್ರತ್ಯೇಕ ವೆಬ್‌ಸೈಟ್‌ ವಿಳಾಸ ಸಿಗಲಿದೆ.

ದ್ವಿತೀಯ ಪರೀಕ್ಷೆಗೆ ಪ್ರವೇ ಶಾತಿ ಪಡೆಯುವ ಮಾನ ದಂಡದ ಬಗ್ಗೆ ಸರಕಾರದ ಸುತ್ತೋಲೆ ಹೊರಡಿಸಿಲ್ಲ. ಹೊರಡಿಸಿದ ಬಳಿಕವೇ ಈ ಬಗ್ಗೆ ನಿರ್ಧಾರವಾಗಲಿದೆ. ಶೈಕ್ಷಣಿಕ ತರಗತಿ ಗಳು ಜೂನ್‌ 15ರ ಅನಂತರವೇ ತೆರೆದು ಕೊಳ್ಳುವ
ಸಾಧ್ಯತೆಗಳಿವೆ.
-ಭಗವಂತ ಕಟ್ಟಿಮನಿ,
ಉಪನಿರ್ದೇಶಕರು, ಪ.ಪೂ. ಶಿಕ್ಷಣ ಇಲಾಖೆ, ಉಡುಪಿ

ಪ್ರಥಮ ಪಿಯುಸಿಯಲ್ಲಿ ದ.ಕ.ಜಿಲ್ಲೆಗೆ ಶೇ. 91.36 ಫಲಿತಾಂಶ ಬಂದಿದೆ. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪ್ರವೇಶಾತಿ ಬಗ್ಗೆ ಸರಕಾರದ ನಿರ್ದೇಶ ಬಂದ ಬಳಿಕ  ವಷ್ಟೇ ಗೊತ್ತಾಗಲಿದೆ. ಈಗಲೇ ಏನನ್ನೂ ಹೇಳಲು ಬರುವುದಿಲ್ಲ.
– ಕಲ್ಲಯ್ಯ, ಜಂಟಿ ನಿರ್ದೇಶಕರು, ಪ.ಪೂ. ಶಿಕ್ಷಣ ಇಲಾಖೆ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next