Advertisement
ಎರಡು ಪ್ರಶ್ನೆ ಪತ್ರಿಕೆ ಗಳಿಗೆ ವಿದ್ಯಾರ್ಥಿಗಳಿಂದ ಉತ್ತರ ಪಡೆದು ಮೌಲ್ಯಾಂಕನ ಮಾಡು ವಂತೆ ಪ.ಪೂ. ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಪ್ರಯೋಗ ರಹಿತ ವಿಷಯಗಳಿಗೆ ತಲಾ 35 ಅಂಕ ನೀಡಬೇಕು. ಎರಡು ಪ್ರಶ್ನೆಪತ್ರಿಕೆ ನೀಡಿ, 30+30 ಸೇರಿಸಿ 60 ಅಂಕಗಳಿಗೆ ಪರಿವರ್ತಿಸಬೇಕು. ಉಳಿದ ಐದು ಅಂಕಗಳನ್ನು ಆಂತರಿಕ ಮೌಲ್ಯಮಾಪನವೆಂದು ನೀಡಿ, 35+30+30+5 ಒಟ್ಟು ನೂರು ಅಂಕಕ್ಕೆ ನಡೆಸಬೇಕು. ಪ್ರಯೋಗ ಸಹಿತ ವಿಷಯಕ್ಕೆ 21 ಅಂಕ, ಪ್ರಾಯೋಗಿಕಕ್ಕೆ 10 ಅಂಕ ಸೇರಿಸಿ 31 ಅಂಕಕ್ಕೆ ಅಸೈನ್ಮೆಂಟ್ ನೀಡಬೇಕು. 31+22+22+5+20 ಈ ಮಾದರಿ ಅಂಕ ನೀಡಲು ಹೇಳಿದೆ.
Related Articles
ಪಿಯು ಕಾಲೇಜುಗಳು ಮಾತ್ರ ಅಸೈನ್ಮೆಂಟ್ ಹೆಸರಿನಲ್ಲಿ ಪರೀಕ್ಷೆಯನ್ನೇ ನಡೆಸು ತ್ತಿವೆ. 70 ಅಂಕಗಳ 2 ಮಾದರಿ ಪ್ರಶ್ನೆಪತ್ರಿಕೆ ನೀಡು ತ್ತಿವೆ. ಅದರಲ್ಲಿ 1, 2, 3, 4 ಅಂಕಗಳ ಪ್ರಶ್ನೆ ಗಳನ್ನು ಪ್ರತ್ಯೇಕ ವಾಗಿ ನೀಡಿ ಪರೀಕ್ಷೆ ಬರೆಸು ತ್ತಿವೆ. ವಿದ್ಯಾರ್ಥಿಗಳು ತಲಾ 70 ಅಂಕ ಗಳ ಎರಡು ಪರೀಕ್ಷೆ ಗಳನ್ನು ಅನಿವಾರ್ಯವಾಗಿ ಉತ್ತರಿಸಬೇಕಾದ ಪರಿಸ್ಥಿತಿಯನ್ನು ಪ.ಪೂ. ಕಾಲೇಜುಗಳು ನಿರ್ಮಾಣ ಮಾಡಿವೆ.
Advertisement
ದ್ವಿತೀಯ ಪಿಯುಸಿಗೆ ದಾಖಲಾತಿ ಮತ್ತು ವಿದ್ಯಾರ್ಥಿ ಗಳಿಗೆ ಸಿಗಬೇಕಾದ ವಿದ್ಯಾರ್ಥಿ ವೇತನ ಸೌಲಭ್ಯಕ್ಕೆ ಅನು ಕೂಲ ಆಗುವಂತೆ ಅಸೈನ್ಮೆಂಟ್ ನಡೆಸಿ, ಅಂಕ ನಮೂದಿಸಲು ನಿರ್ದಿಷ್ಟ ಮಾನದಂಡ ನೀಡಿದ್ದು, ಅದರಂತೆ ಮೌಲ್ಯಾಂ ಕನ ಪ್ರಕ್ರಿಯೆ ನಡೆಯು ತ್ತಿದೆ. ಎರಡು ಮಾದರಿ ಪ್ರಶ್ನೆಪತ್ರಿಕೆ ಅಸೈನ್ಮೆಂಟ್‌ಗಾಗಿ ನೀಡಿರುವುದು.-ಆರ್. ಸ್ನೇಹಲ್, ನಿರ್ದೇಶಕಿ, ಪದವಿಪೂರ್ವ ಶಿಕ್ಷಣ ಇಲಾಖೆ