Advertisement

ಗೆದ್ದರೆ ವಸತಿ ಕಲ್ಪಿಸಲು ಪ್ರಥಮ ಆದ್ಯತೆ: ರಾಮಪ್ಪ

12:58 PM Apr 20, 2018 | Team Udayavani |

ಹರಿಹರ: ಚುನಾವಣೆ ನಿಮಿತ್ತ ತಾವು ಯಾವುದೇ ಸುಳ್ಳು ಭರವಸೆ ನೀಡುವುದಿಲ್ಲ. ಆದರೆ ಮತದಾರರಿಗೆ ಕೊಟ್ಟ ಮಾತನ್ನು ಮಾತ್ರ ಈಡೇರಿಸದೇ ಬಿಡುವುದಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಎಸ್‌. ರಾಮಪ್ಪ ಹೇಳಿದರು.

Advertisement

ನಗರದ ಎಸ್‌.ಎಸ್‌.ಕೆ. ಕಲ್ಯಾಣ ಮಂಟಪದಲ್ಲಿ ಗುರುವಾರ ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಆಯೋಜಿಸಿದ್ದ ಚುನಾವಣಾ ಪ್ರಚಾರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಾಲಿ ಶಾಸಕರು 5 ವರ್ಷಗಳ ಹಿಂದೆ ಪ್ರಕಟಿಸಿದ್ದ ಚುನಾವಣಾ ಪ್ರಣಾಳಿಕೆಯ ಯಾವುದೇ ಭರವಸೆ ಈಡೇರಿಸಿಲ್ಲ ಎಂದರು. 

ಆಟೋ ಚಾಲಕರು, ಕೂಲಿ ಕಾರ್ಮಿಕರಿಗೆಲ್ಲ ಯಾರದೋ ಜಮೀನು ತೋರಿಸಿ, ಮನೆ ಕಟ್ಟಿಸಿ ಕೊಡುವುದಾಗಿ ಹೇಳಿ ಶಾಸಕರು ಮತ ಪಡೆದಿದ್ದರು. ಆದರೆ ಆಯ್ಕೆಯಾದ ನಂತರ ಮನೆ ಕೊಡಿಸುವುದಿರಲಿ, ಅವರತ್ತ ತಿರುಗಿಯೂ ನೋಡಿಲ್ಲ. ತಾವು ಶಾಸಕರಾದರೆ ನಿರ್ವಸತಿಕರಿಗೆಲ್ಲ ವಸತಿ ಕಲ್ಪಿಸಲು ಪ್ರಥಮ ಆದ್ಯತೆ ನೀಡುವುದಾಗಿ ತಿಳಿಸಿದರು.

ತಾಲೂಕು ಆಸ್ಪತ್ರೆಗೆ ಡಯಾಲಿಸಿಸ್‌ ಕೇಂದ್ರ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ರಸ್ತೆ, ಚರಂಡಿ ನಿರ್ಮಾಣ ಮುಂತಾದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಯೋಜನೆಗಳೆಲ್ಲಾ ತಮ್ಮವೇ ಎಂದು ಶಾಸಕರು ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಅವರು, ಏ. 24 ರಂದು ನಗರದ ನೀರಾವರಿ ಇಲಾಖೆ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಾಗುವುದು ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ ಪಟೇಲ್‌ ಮಾತನಾಡಿ, ಬಿಜೆಪಿ ಮಾತ್ರ ನಮಗೆ ಪ್ರತಿಸ್ಪರ್ಧಿ. ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ದುಡಿದರೆ ಬಿಜೆಪಿಯನ್ನು ಸಹ ಸುಲಭವಾಗಿ ಸೋಲಿಸಬಹುದು ಎಂದರು.

Advertisement

ಉದ್ಯಮಿ ಕೃಷ್ಣಾಸಾ ಭೂತೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಸಮಯದ ಅಭಾವದಿಂದ ಸೂಕ್ತ ಪ್ರಚಾರ ನಡೆಸಲಾಗದಿದ್ದರೂ ರಾಮಪ್ಪ 40 ಸಾವಿರ ಮತ ಗಳಿಸಿದರು. ಈಗ ಹೆಚ್ಚಿನ ಕಾಲಾವಕಾಶವಿದ್ದು, 80 ಸಾವಿರಕ್ಕೂ ಅಧಿಕ ಮತ ಪಡೆಯುವಲ್ಲಿ ಅನುಮಾನವಿಲ್ಲ ಎಂದರು. 

ಸಭೆಯಲ್ಲಿ ನಿವೃತ್ತ ಡಿವೈಎಸ್ಪಿ ನಾಗರಾಜ, ಜಿ.ವಿ. ವಿರೇಶ, ಅಂಜುಮನ್‌ ಸಂಸ್ಥೆಯ ಅಧ್ಯಕ್ಷ ಬಿ.ಕೆ ಸೈಯ್ಯದ್‌ ರೆಹಮಾನ್‌, ಸಿ.ಎನ್‌.ಹುಲಿಗೇಶ, ಕೂಕ್ಕನೂರು ದ್ಯಾಮಣ್ಣ, ಕುಂಬಳೂರು ಹಾಲಪ್ಪ, ವಕೀಲರಾದ ಬಿ.ನಾಗೇಂದ್ರಪ್ಪ, ಹನಗವಾಡಿ ಹನುಮಂತಪ್ಪ, ಜಿ.ಬೇವಿನಹಳ್ಳಿಯ ದಾನಮ್ಮ, ನಿಖೀಲ್‌ ಕೊಂಡಜ್ಜಿ, ಬಿ.ರೇವಣಸಿದ್ದಪ್ಪ, ನಿಂಗಣ್ಣ, ಎಂ.ಬಿ.ಅಣ್ಣಪ್ಪ ಮತ್ತಿತರರು ಮಾತನಾಡಿದರು. 

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಲ್‌.ಬಿ. ಹನುಮಂತಪ್ಪ, ಅಬಿದಲಿ, ರಾಜ್ಯ ಹಿಂದುಳಿದ ವರ್ಗಗಳ ಮಹಿಳಾ ಕಾರ್ಯದರ್ಶಿ ಗೀತಾ ಕದರಮಂಡಲಗಿ, ಜಿಪಂ ಸದಸ್ಯೆ ಅರ್ಚನಾ ಬಸವರಾಜ್‌, ಜಿಪಂ ಮಾಜಿ ಸದಸ್ಯೆ ಗಂಗಮ್ಮ, ದೊಸ್ಥಾನಾ ಖಲೀಲ, ರಾಜನಹಳ್ಳಿ ರಾಮಪ್ಪ, ಕೆ. ಜಡಿಯಪ್ಪ, ಬಿಳಸನೂರು ಬಸವರಾಜ, ಬಿ.ಕೆ ಮುಸ್ತಾಫ್‌, ಶ್ಯಾಮ್‌ಸನ್‌ ಮೇಸ್ತ್ರಿ, ಭಾನುವಳ್ಳಿ ಅತ್ತಾವುಲ್ಲಾ, ಸೇವಾದಳ ಅಧ್ಯಕ್ಷೆ ಪುಷ್ಪಾ, ಹಂಚಿನ ನಾಗಣ್ಣ, ಬಿ. ಬಾಲರಾಜ್‌, ಎಚ್‌. ಶಿವಪ್ಪ, ವೈ. ರಘುಪತಿ, ಜೆ.ಟಿ ಪ್ರವೀಣಕುಮಾರ, ಎ.ಕೆ. ನಾಗೇಂದ್ರಪ್ಪ, ಪುರುಷೋತ್ತಮ, ನೇತ್ರಾವತಿ ಪ್ಯಾಟಿ, ಡಿ.ವೈ ಇಂದಿರಾ, ನೇತ್ರಾವತಿ, ವೈ. ಭಾಗ್ಯಾದೇವಿ, ತಿಪ್ಪೇಸ್ವಾಮಿ, ಮಲೇಬೆನ್ನೂರು ಗ್ರಾಪಂ ಮಾಜಿ ಅಧ್ಯಕ್ಷೆ ಮಂಜಮ್ಮ ಮತ್ತಿತರರಿದ್ದರು.

ಮುಖಂಡ ಅಜಮ್‌ಖಾನ್‌, ಮೌಲಾನಾ ನಜೀರ ಅಹ್ಮದ್‌ಸಾಬ್‌, ಶಬ್ಬಿರ ಮೌಲಾನಾಸಾಬ್‌, ಫಜಲ್‌ಸಾಬ್‌, ಶಮಿಉಲ್ಲಾ, ಎಳೆಹೊಳೆ ಪ್ರಭುಗೌಡ, ಚಂದ್ರಪ್ಪ ಹುಲ್ಮನಿ, ಕುಣೆಬೇಳಕೇರಿ ಚಿಕ್ಕಪ್ಪ, ನಿವೃತ್ತ ಶಿಕ್ಷಕ ಟಿ. ಪುಟ್ಟಪ್ಪ, ಮಲೇಬೆನ್ನೂರಿನ ಬಿಜೆಪಿ ಮತ್ತು ಜೆಡಿಎಸ್‌ನ 40ಕ್ಕೂ ಹೆಚ್ಚು ಜನ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ,
ಮಾಜಿ ಸಚಿವ ಡಾ| ವೈ. ನಾಗಪ್ಪ, ನಗರಸಭಾ ಸದಸ್ಯ ಶಂಕರ್‌ ಖಟಾವಕರ್‌ ಮತ್ತಿತರರ ಗೈರು ಹಾಜರಿ ಎದ್ದು ಕಾಣುತ್ತಿತ್ತು 

Advertisement

Udayavani is now on Telegram. Click here to join our channel and stay updated with the latest news.

Next