Advertisement

ಗ್ರಾಮೀಣ ಭಾಗದ ರಸ್ತೆ  ನಿರ್ಮಾಣಕ್ಕೆ  ಮೊದಲ ಆದ್ಯತೆ

04:14 PM Nov 17, 2018 | |

ನರೇಗಲ್ಲ: ರೋಣ ಮತಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಸಂಚರಿಸಲು ತೊಂದರೆಯಾಗುತ್ತಿರುವ ರಸ್ತೆ ಸುಧಾರಣೆಗೆ ಮೊದಲ ಆದ್ಯತೆ ನೀಡಿ, ಬಹುತೇಕ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು.

Advertisement

ಪಟ್ಟಣದ ಯರೇಹಂಚಿನಾಳ ರಸ್ತೆಯಲ್ಲಿ ಶುಕ್ರವಾರ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 4.11 ಕೋಟಿ ರೂ. ವೆಚ್ಚದಲ್ಲಿ 7 ಕಿ.ಮೀ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನರೇಗಲ್ಲ ಹಾಗೂ ಯರೇಹಂಚಿನಾಳ ಗ್ರಾಮದ ಜನತೆ ಬಹು ದಿನಗಳ ಬೇಡಿಕೆಯಾದ ಈ ರಸ್ತೆಗೆ ಇಂದು ಕಾಯಕಲ್ಪ ಲಭಿಸಿದೆ. ರೈತರಿಗೆ, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿರುವ ರಸ್ತೆ ಸುಧಾರಣೆಗೆ ಎಲ್ಲರೂ ಸಹಕಾರ ನೀಡಬೇಕು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು. ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.

ನರೇಗಲ್ಲ ಬಿಜೆಪಿ ಘಟಕದ ಅಧ್ಯಕ್ಷ ಉಮೇಶ ಸಂಗನಾಳಮಠ, ಪ.ಪಂ ಸದಸ್ಯ ಈರಪ್ಪ ಜೋಗಿ, ಮಲ್ಲಿಕಸಾಬ ರೋಣದ, ಕುಮಾರಸ್ವಾಮಿ ಕೋರಧ್ಯಾನಮಠ, ಶ್ರೀಶೈಲಪ್ಪ ಬಂಡಿಹಾಳ, ಫಕೀರಪ್ಪ ಭೂಮ್ಮಲ್ಲಾಪುರ, ಫಕೀರಪ್ಪ ಮಳ್ಳಿ, ಮುಖಂಡರಾದ ಶಶಿಧರಗೌಡ ಸಂಕನಗೌಡ್ರ, ಯಲ್ಲಪ್ಪ ಮಣ್ಣೊಡ್ಡರ, ಬಸವರಾಜ ಕೊಟಗಿ, ನಿಂಗಪ್ಪ ಕಣವಿ, ಬಸವರಾಜ ವಂಕಲಕುಂಟಿ, ಮುತ್ತು ಕಡಗದ, ಬಸವರಾಜ ಒಳಕೋಟಿ, ರವಿ ಯತ್ನಟ್ಟಿ ಸೇರಿದಂತೆ ಇತರರು ಇದ್ದರು. 

ಸಮಸ್ಯೆ ತೋಡಿಕೊಂಡ ಜನ
ಈ ವೇಳೆ ಶಾಸಕರ ಎದುರು ರೈತರು ಹಾಗೂ ಮಹಿಳೆಯರು ಸಮಸ್ಯೆ ತೋಡಿಕೊಂಡರು. ಆಶ್ರಯ ಮನೆಗಳನ್ನು ಕೂಡಲೇ ಹಂಚಿಕೆ ಮಾಡಿ ಬಡವರಿಗೆ ಸೂರು ನೀಡಬೇಕು. ಈ ವರ್ಷದ ಹಿಂಗಾರು ಹಾಗೂ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರೈತರಿಗೆ ಕೆಲಸ ಇಲ್ಲದಂತಾಗಿದೆ. ಬರಗಾಲ ಎಂದು ಘೋಷಣೆಯಾಗಿರುವ ನರೇಗಲ್ಲದ ಜನತೆಗೆ ಬರಗಾಲ ಕಾಮಗಾರಿ ಕೂಡಲೇ ಪ್ರಾರಂಭ ಮಾಡಬೇಕು ಎಂದು ಮಹಿಳೆಯರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು,  ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಕೇಂದ್ರದ ನಮ್ಮ ನಾಲ್ಕೂವರೆ ವರ್ಷದ ಅವಧಿಯಲ್ಲಿ ರೋಣ ಮತಕ್ಷೇತ್ರದ ಪ್ರತಿಯೊಂದು ಗ್ರಾಮದ ಜನತೆಗೆ ವಸತಿ ಯೋಜನೆಯಡಿ ಮನೆ ನೀಡಲಾಗುತ್ತದೆ ಎಂದು ಶಾಸಕರು ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next