- ಹೆಣ್ಣನ್ನು ಕೇವಲವಾಗಿ ನೋಡಬಾರದು, ನಮ್ಮ ಭಾಷೆಯ ಬಗ್ಗೆ ಕೆಟ್ಟದಾಗಿ ಬಿಂಬಿಸಬಾರದು, ಮೂರನೇಯದಾಗಿ ಎಲ್ಲಿಂದಲೇ ಕಾಸು ತಂದು ಸಿನಿಮಾ ನಿರ್ಮಿಸುವ ನಿರ್ಮಾಪಕನಿಗೆ ಒಳ್ಳೆಯದಾಗುವಂತಿರಬೇಕು… ಈ ಮೂರರ ಮೇಲೆ ನನ್ನ ಸಿನಿಮಾ ಆಯ್ಕೆ ನಡೆಯುತ್ತದೆ.
- ಯಾವುದೇ ಒಂದು ಕನ್ನಡ ಸಿನಿಮಾದ ಗೆಲುವು ಇಡೀ ಚಿತ್ರರಂಗಕ್ಕೆ ದೊಡ್ಡ ಸ್ಫೂರ್ತಿ ನೀಡುತ್ತದೆ. ಈಗ “ಕಾಟೇರ’ ಗೆದ್ದಿದೆ. ಚಿತ್ರಮಂದಿರ ಮಾಲೀಕರಿಂದ ಹಿಡಿದು ಪ್ರತಿ ವಿಭಾಗಗಳು ಆ್ಯಕ್ಟಿವ್ ಆಗಿವೆ. ಇನ್ನು ನೋಡಿ ಸಾಲು ಸಾಲು ಸಿನಿಮಾಗಳು ಬರಲಿವೆ ಮತ್ತು ಬರಬೇಕು. ಆಗ ಮಾತ್ರ ಚಿತ್ರರಂಗ ಜೀವಂತಿಕೆಯಿಂದ ಇರಲು ಸಾಧ್ಯ.
- ನಮ್ಮ ಮಣ್ಣಿನ ಕಥೆ ಹೇಳಿದಾಗ ಜನರಿಗೆ ಅದು ಬೇಗ ಕನೆಕ್ಟ್ ಆಗುತ್ತದೆ. ಆ ನಿಟ್ಟಿನಲ್ಲಿ ನಮ್ಮ “ಕಾಟೇರ’ ಚಿತ್ರ ಗೆದ್ದಿದೆ. ಇದು ನನ್ನೊಬ್ಬನ ಪ್ರಯತ್ನವಲ್ಲ. ಇಡೀ ತಂಡದ ಶ್ರಮ.
- ಚಿತ್ರದಲ್ಲಿ ಬರುವ ಪೌರಾಣಿಕ ದೃಶ್ಯ ನೋಡಿ ಕೆಲವರು ಡಾ. ರಾಜ್‌ಕುಮಾರ್ ಅವರಿಗೆ ನನ್ನನ್ನು ಹೋಲಿಸುತ್ತಿದ್ದಾರೆ. ದಯವಿಟ್ಟು ಹೋಲಿಸಬೇಡಿ, ನಾನು ಅವರ ಪಾದದ ಧೂಳಿಗೂ ಸಮವಲ್ಲ.
- ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೊರಟರೆ ಆಯಾ ರಾಜ್ಯಗಳನ್ನು ಪ್ರತಿನಿಧಿಸುವ ಅಂಶಗಳನ್ನು ಹಾಕಲೇಬೇಕು. ಆಗ ನಮ್ಮ ಮಣ್ಣಿನ ಕಥೆಯ ಸಾರ ಹೊರಟು ಹೋಗುತ್ತದೆ. ಅದಕ್ಕೆ ಮೊದಲು ನಮ್ಮ ನೆಲದ, ನಮ್ಮ ಭಾಷೆಯ ಸಿನಿಮಾ ಮಾಡುವ, ಮುಂದೆ ಅದು ಎಲ್ಲಿ ಬೇಕಾದರೂ ತಲುಪಬಹುದು
- ಪೈರಸಿ ಮಾಡುವವರು ಇಲ್ಲೇ ಓಡಾಡುತ್ತಿದ್ದಾರೆ. ನಿಮ್ಮ ಮಣ್ಣಿಗೆ ನೀವು ಬೆಲೆ ಕೊಡದಿದ್ದರೆ ಹೇಗೆ? ಪೈರಸಿ ಮಾಡಿ ಸಿಕ್ಕಿ ಹಾಕಿಕೊಂಡರೆ ಟಾಟ, ಬೈಬೈ, ಸೀಯೂ… ನಾನು ಸಿನಿಮಾ ಮಾಡೋದು ಪ್ರಶಸ್ತಿಗಾಗಿ ಅಲ್ಲ. ನನ್ನ ಸೆಲೆಬ್ರೆಟಿಗಳ ಮೆಚ್ಚುಗೆಯೇ ನನಗೆ ದೊಡ್ಡ ಪ್ರಶಸ್ತಿ
- ಲುಕ್ ಟೆಸ್ಟ್‌ನಲ್ಲಿ ನಾನು ಮೇಕಪ್ ಹಾಕಿದ ಬಳಿಕ ಮೊದಲು ನೋಡೋದು ಕನ್ನಡಿನ್ನಲ್ಲ… ಬದಲು ನನ್ನ ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕ ಹಾಗೂ ತಂಡವನ್ನು. ಅವರ ಮೊಗದಲ್ಲಿ ಸಂತೃಪ್ತ ಭಾವ ಮೂಡಿದರೆ ಅದು ಗೆದ್ದಂತೆ.
Advertisement
ವಾರಾಂತ್ಯದಲ್ಲಿ ವಿದೇಶದಲ್ಲಿ ಕಾಟೇರ
Related Articles
Advertisement