ತುಮಕೂರು: ಜನರಿಗೆ ಕುಡಿಯುವ ನೀರಿನಸಮಸ್ಯೆ ಬಾರದಂತೆ ಅಗತ್ಯ ಕ್ರಮ ಕೈಗೊಳ್ಳ ಲಾಗಿದೆಎಂದು ಗ್ರಾಮಾಂತರ ಕ್ಷೇತ್ರದ ಶಾಸಕಡಿ.ಸಿ.ಗೌರಿಶಂಕರ್ ತಿಳಿಸಿದರು.
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗಳಿಗೇನಹಳ್ಳಿ,ದೊಮ್ಮನಕುಪ್ಪೆ ಹಾಗೂ ಅರೆಯೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಮಾಕನಹಳ್ಳಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆನೀಡಿ ಮಾತನಾಡಿದ ಅವರು, ಕೊರೊನಾಎರಡನೇ ಅಲೆ ಜಾಸ್ತಿಯಾಗುತ್ತಿದೆ.
ಈ ಮಧ್ಯೆಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ ಎಂದುಗಳಿಗೇನಹಳ್ಳಿ, ದೊಮ್ಮನಕುಪ್ಪೆ ಹಾಗೂಮಾಕನಹಳ್ಳಿ ಗ್ರಾಮಸ್ಥರು ನನಗೆ ಮನವಿ ಮಾಡಿದಮೇರೆಗೆ ಈ ಗ್ರಾಮಗಳಿಗೆ ತುರ್ತಾಗಿ ಶುದ್ಧ ನೀರಿನಘಟಕ ನಿರ್ಮಿಸಿ ಜನರ ಕುಡಿಯುವ ನೀರಿನಬವಣೆ ನೀಗಿಸಿರುವುದಾಗಿ ತಿಳಿಸಿದರು. 2ನೇಹಂತದಲ್ಲಿ ಮಾರಣಾಂತಿಕವಾದ ಕೊರೊನಾ ಅಲೆಎದ್ದಿದೆ.
ಜನತೆ ಜಾಗರೂಕರಾಗಿರ ಬೇಕು.ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.
ಮಾಸ್ಕ್ ವಿತರಣೆ: ತಾಲೂಕಿನ ವೈದ್ಯಾಧಿಕಾರಿ,ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂಕೊರೊನಾ ವಾರಿಯರ್ಸ್‌ಗೆ 1ಸಾವಿರ ಪಿಪಿಇ ಕಿಟ್‌ಹಾಗೂ 5ಸಾವಿರ ಒ- 95 ಮಾÓR… ವಿತರಿಸಲಾಗಿದೆ.ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಕ್ಷೇತ್ರದಜನರಿಗೆ 80 ಸಾವಿರ ಆಹಾರ ಕಿಟ್ ಹಾಗೂ 2 ಲಕ್ಷ ಮಾಸ್ಕ್ ವಿತರಿಸಲಾಗಿತ್ತು. ಈ ಬಾರಿಯೂ ಸಹಅತೀ ಅಗತ್ಯವಿರುವ ಬಡವರಿಗೆ, ನಿರ್ಗತಿಕರಿಗೆಹಾಗೂ ಕಾರ್ಮಿಕರಿಗೆ ಮೇ 5ರ ನಂತರ ಆಹಾರಕಿಟ್ ವಿತರಿಸಲು ನಿರ್ಧರಿಸುವುದಾಗಿ ತಿಳಿಸಿದರು.ಹೊನ್ನುಡಿಕೆ ಜಿಲ್ಲಾ ಪಂಚಾಯ್ತಿ ಉಸ್ತುವಾರಿಪಾಲ ನೇತ್ರಯ್ಯ, ಗಳಿಗೇನಹಳ್ಳಿ ಗ್ರಾಪಂ ಅಧ್ಯಕ್ಷರವಿಕುಮಾರ್, ಸದಸ್ಯ ವಿನೋದ್ ಕುಮಾರ್,ಸಿದ್ದರಾಜು, ಮಾಕನಹಳ್ಳಿ ಗ್ರಾಪಂ ಸದಸ್ಯ ರುದ್ರೇಶ,ಶಂಕರ್ ಹಾಗೂ ಇತರರು ಇದ್ದರು.