Advertisement
ಗರಿಷ್ಟ ತೆರಿಗೆ ವಸೂಲು ಮಾಡಿದ ಪಂಚಾಯತ್ಗಳುಗ್ರಾ. ಪಂ.ಗಳು ಪಂಚತಂತ್ರ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿದ ಪ್ರಕಾರ ತೆಂಕಮಿಜಾರು ಗ್ರಾ. ಪಂ.ಶೇ. 63 ತೆರಿಗೆ ವಸೂಲು ಮಾಡಿದ್ದು, ಮಂಗಳೂರು ತಾ. ಪಂ.ನಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಳೆದ ಬಾರಿಯೂ ಈ ಪಂಚಾಯತ್ ಶೇ.95ರಷ್ಟು ತೆರಿಗೆ ವಸೂಲಾತಿ ಮಾಡಿದೆ. ಆ ಬಳಿಕದ ಸ್ಥಾನ ಅಡ್ಯಾರು (ಶೇ.58), ಬೆಳ್ಮ (ಶೇ.57), ಕಲ್ಲಮುಂಡ್ಕೂರು (ಶೇ.51), ಮಲ್ಲರೂ(ಶೇ.50) ತೆರಿಗೆ ವಸೂಲಾತಿ ಮಾಡಿವೆ.
ಕನಿಷ್ಠ ತೆರಿಗೆ ವಸೂಲಾತಿ ಮಾಡಿದ ಗ್ರಾ.ಪಂ.ಗಳಲ್ಲಿ ಬಳ್ಕುಂಜೆ (ಶೇ.0), ಬಾಳ (ಶೇ.0), ಹರೇಕಳ(ಶೇ.0), ಮುಚ್ಚಾರು (ಶೇ.3), ಶಿರ್ತಾಡಿ(ಶೇ.4) ಸೇರಿವೆ. ತೆರಿಗೆ ವಸೂಲು ಮಾಹಿತಿ ಅಗತ್ಯ
ಪಂಚತಂತ್ರ ತಂತ್ರಾಂಶದಲ್ಲಿ ಗ್ರಾ. ಪಂ.ಗಳು ತೆರಿಗೆ ವಸೂಲಾತಿಯ ಅಂಕಿ ಅಂಶಗಳನ್ನು ಅಪ್‌ಲೋಡ್ ಮಾಡ ಬೇಕು ಎಂದು ಸರಕಾರದ ಆದೇಶ ಇದೆಯಾದರೂ ಕೆಲವು ಗ್ರಾ.ಪಂ.ಗಳು ತಮ್ಮ ಅಂಕಿ-ಅಂಶಗಳನ್ನು ಅಪ್‌ಲೋಡ್ ಮಾಡದಿರುವುದು ಇಲ್ಲಿ ಕಂಡು ಬಂದಿದೆ. ಇದರಿಂದ ಆ ಗ್ರಾ.ಪಂ.ಗಳ ತೆರಿಗೆ ವಸೂಲಾತಿಗಳ ಶೇಕಡಾ ಪ್ರಮಾಣವೂ ಕಡಿಮೆ ತೋರಿಸಲು ಒಂದು ಕಾರಣವಿರಬಹುದು. ಮಾರ್ಚ್ ತಿಂಗಳೊಳಗೆ ತೆರಿಗೆ ವಸೂ ಲಾತಿ ಆಗ ಬೇಕಾಗಿದೆ. ಇದಕ್ಕೆ ಇನ್ನೂ ಸುಮಾರು 75ದಿನಗಳು ಬಾಕಿಯಿವೆ. ಈ ದಿನಗಳಲ್ಲಿ ತೆರಿಗೆ ವಸೂಲಾತಿ ವೇಗ ಪಡೆಯಬೇಕಾಗಿದೆ.
Related Articles
ಮೂಲಸೌಕರ್ಯಗಳಾದ ಚರಂಡಿ, ರಸ್ತೆ, ದಾರಿದೀಪ, ಕುಡಿ ಯುವ ನೀರು, ಸ್ವಚ್ಛತೆಗಳನ್ನು ಗ್ರಾ.ಪಂ.ಗಳು ಮಾಡಬೇಕಾದರೆ ಈ ತೆರಿಗೆ ಹಣ ದಿಂದಲೇ ಮಾಡಬೇಕಾಗಿದೆ. ಬೇಸಗೆ ಕಾಲ ಸಮೀಪಿಸುತ್ತಿದ್ದು, ನೀರಿನ ಕೊರತೆ ಕೆಲವೆಡೆ ಕಾಣ ಬಹುದು. ಇಂತಹ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ನೀಡುವ ಸಂದರ್ಭಗಳು ಗ್ರಾ.ಪಂ.ಗೆ ಬರಬಹುವುದು. ಇಲ್ಲಿ ಗ್ರಾ.ಪಂ.ಗಳಿಗೆ ಈ ತೆರಿಗೆ ಹಣವೇ ಮುಖ್ಯವಾಗಿರುತ್ತದೆ.
Advertisement
ಕೆಲವೆಡೆ ವಸೂಲಾತಿಗೆ ತೊಂದರೆಹೆಚ್ಚಿನ ಫ್ಲ್ಯಾಟ್‌ಗಳ ತೆರಿಗೆಗಳು ವಸೂಲಾತಿಗೆ ಕಷ್ಟಕರವಾದುದು. ಫ್ಲ್ಯಾಟ್‌ಗಳನ್ನು ಖರೀದಿಸಿ ಮನೆ ನಂಬ್ರ ಪಡೆದು ವಿದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ತೆರಿಗೆ ವಸೂ ಲಾತಿಗೆ ಅವರ ವಿಳಾಸ ಗ್ರಾ.ಪಂ.ಗೆ ಇರುವುದಿಲ್ಲ ಇದರಿಂದ ಅವರ ತೆರಿಗೆ ವಸೂಲಾತಿ ಗ್ರಾ.ಪಂ.ಗೆ ತೊಂದ ರೆಯಾಗುತ್ತದೆ. ಈ ಬಗ್ಗೆ ಗ್ರಾ.ಪಂ. ಫ್ಲಾ ್ಯಟ್‌ಗಳಿಗೆ ಮನೆನಂಬ್ರ ನೀಡುವಾಗ ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾಗಿದೆ. ಗ್ರಾ.ಪಂ.ಗಳಿಗೆ ಆದೇಶ
ಕೆಲವೆಡೆ ತಾಂತ್ರಿಕ ತೊಂದರೆ, ಇನ್ನೂ ಕೆಲವೆಡೆ ತೆರಿಗೆ ಪರಿಷ್ಕರಣೆಯಿಂದಾಗಿ ಪಂಚತಂತ್ರದಲ್ಲಿ ಅಪ್‌ಲೋಡ್ ಮಾಡದೇ ಇರಲು ಒಂದು ಕಾರಣವಾಗಿದೆ. ತೆರಿಗೆ ವಸೂಲಾತಿ ಬಗ್ಗೆ ಗ್ರಾ.ಪಂ.ಗಳಿಗೆ ಆದೇಶ ನೀಡಲಾಗುವುದು. ಗ್ರಾಮ ಪಂಚಾಯತ್‌ಗಳಲ್ಲಿ ಮಾರ್ಚ್ ತಿಂಗಳಲ್ಲಿ ಹೆಚ್ಚಿನ ತೆರಿಗೆ ವಸೂಲಾತಿ ಆಗಲಿದೆ.
– ರಘು ಎ.ಇ.
ಮಂಗಳೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ •ಸುಬ್ರಾಯ ನಾಯಕ್ ಎಕ್ಕಾರು