Advertisement
ಈ ಬಾರಿಯ ಚುನಾವಣೆಗೆ ಬರೋಬ್ಬರಿ 11 ಮಂದಿ ಅಭ್ಯರ್ಥಿಗಳು ಇದ್ದು, ಯಾರಿಗೂ ಸ್ಪಷ್ಟ ಬಹುಮತ ದೊರೆಯದೇ ಇರುವ ಬಗ್ಗೆ ಫ್ರಾನ್ಸ್ ರಾಜಕೀಯ ವಿಶ್ಲೇಷಕರು ಸಂಶಯ ವ್ಯಕ್ತಪಡಿಸಿದ್ದಾರೆ. ಎರಡು ಹಂತದ ಮತದಾನ ಇಲ್ಲಿದ್ದು, ಮೇಯಲ್ಲಿ ನಡೆಯಲಿರುವ 2ನೇ ಸುತ್ತಿಗೆ ನಾಲ್ಕು ಮಂದಿ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಫ್ರಾನ್ಸ್‌ನ ಈ ಬಾರಿಯ ಚುನಾವಣೆಯಲ್ಲಿ ಭದ್ರತೆ, ವಲಸೆ ನೀತಿ ಪ್ರಮುಖ ಚುನಾವಣೆ ವಿಷಯವಾಗಿದೆ. 4.7 ಕೋಟಿ ಮಂದಿ ಮತದಾರರು ನೋಂದಾಯಿಸಲ್ಪಟ್ಟಿದ್ದು, ಬೆಳಗ್ಗೆ 8ರಿಂದ ಮತದಾನ ಆರಂಭವಾಗಿತ್ತು. ಸ್ಪರ್ಧಾಕಣದಲ್ಲಿ ಎಡಪಂಥೀಯ ಜೆನ್ ಲಾಕ್ ಮೆಲಂಕೊನ್, ಕನ್ಸರ್ವೇಟಿವ್ ಪಕ್ಷದ ಫ್ರಾಂಕೊಯಿಸ್ ಫಿಲ್ಲನ್, ಬಲಪಂಥೀಯ ಅಭ್ಯರ್ಥಿ ಮರೈನ್ ಲಾ ಪೆನ್ ಪ್ರಬಲ ಅಭ್ಯರ್ಥಿಗಳಾಗಿದ್ದಾರೆ. ಲಾ ಪೆನ್ ಅವರು ಫ್ರಾನ್ಸ್ ಕೂಡ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಧೋರಣೆ ಹೊಂದಿದ್ದಾರೆ. Advertisement
ಫ್ರಾನ್ಸ್ ಅಧ್ಯಕ್ಷರ ಆಯ್ಕೆಗೆ ಮೊದಲ ಹಂತದ ಮತದಾನ
10:37 AM Apr 24, 2017 | |
Advertisement
Udayavani is now on Telegram. Click here to join our channel and stay updated with the latest news.