Advertisement

ಇಂಗ್ಲೆಂಡ್‌ ಕ್ರಿಕೆಟಿಗರಿಗೆ ಕೋವಿಡ್ ಸೋಂಕು? ರದ್ದುಗೊಂಡಿತು ಮೊದಲ ಏಕದಿನ

08:00 AM Dec 07, 2020 | keerthan |

ಪಾರ್ಲ್: ಇಂಗ್ಲೆಂಡಿನ ಇಬ್ಬರು ಕ್ರಿಕೆಟಿಗರಿಗೆ ಕೋವಿಡ್-19 ಸೋಂಕು ತಗಲಿರುವ ಶಂಕೆಯಿಂದ ಆತಿಥೇಯ ದಕ್ಷಿಣ ಅಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ.

Advertisement

ಸೋಮವಾರ ಮತ್ತು ಬುಧವಾರ ಸರಣಿಯ ಇನ್ನೆರಡು ಪಂದ್ಯಗಳಿವೆ. ಇವನ್ನು ನಡೆಸಬೇಕೇ, ಬೇಡವೇ ಎನ್ನುವುದನ್ನು ಅಂತಿಮ ಪರೀಕ್ಷಾ ವರದಿಯ ಬಳಿಕ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಸೋಮವಾರವೇ ಎರಡನೇ ಪಂದ್ಯವಿರುವುದರಿಂದ ಅದು ರದ್ದಾಗುವ ಸಾಧ್ಯತೆಯೇ ಜಾಸ್ತಿ.

ಆತಂಕ ಹುಟ್ಟಿಸಿರುವ ಸಂಗತಿಯೆಂದರೆ, ಎರಡೂ ತಂಡಗಳಿದ್ದ ಜೈವಿಕ ಸುರಕ್ಷಾ ವಲಯದಲ್ಲಿನ ಇಬ್ಬರು ಹೊಟೇಲ್‌ ಸಿಬಂದಿಗೆ ಕೋವಿಡ್ ಬಂದಿರುವುದು. ಆದ್ದರಿಂದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.

ಪಂದ್ಯ ರದ್ದಾಗಿರುವುದಕ್ಕೆ ಇಂಗ್ಲೆಂಡ್‌ ಬೇಸರ ವ್ಯಕ್ತಪಡಿಸಿದರೂ, ನಮ್ಮ ಮೊದಲ ಆದ್ಯತೆ ಆಟಗಾರರ ಆರೋಗ್ಯ ಎಂದಿದೆ. ಜೈವಿಕ ಸುರಕ್ಷಾ ವಲಯ ಇನ್ನಷ್ಟು ಬಿಗುವಾಗಿರಬೇಕಿತ್ತು ಎಂದು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next