Advertisement
ಖಾಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 7 ವಿಕೆಟಿಗೆ 258 ರನ್ ಪೇರಿಸಿದರೆ, ನ್ಯೂಜಿಲ್ಯಾಂಡ್ 41 ಓವರ್‌ಗಳಲ್ಲಿ 187ಕ್ಕೆ ಕುಸಿಯಿತು. ಕಮಿನ್ಸ್, ಮಿಚೆಲ್ ಮಾರ್ಷ್ ತಲಾ 3 ವಿಕೆಟ್, ಹ್ಯಾಝಲ್‌ವುಡ್ ಮತ್ತು ಝಂಪ ತಲಾ 2 ವಿಕೆಟ್ ಕಿತ್ತು ಕಿವೀಸ್‌ಗೆ ಘಾತಕವಾಗಿ ಪರಿಣಮಿಸಿದರು.
ಆಸ್ಟ್ರೇಲಿಯಕ್ಕೆ ನಾಯಕ ಆರನ್ ಫಿಂಚ್ (60) ಮತ್ತು ಡೇವಿಡ್ ವಾರ್ನರ್ (67) ಭದ್ರ ಬುನಾದಿ ನಿರ್ಮಿಸಿದರು. 24.1 ಓವರ್‌ಗಳಲ್ಲಿ 124 ರನ್ ಪೇರಿಸಿದರು. ಆದರೆ ಮಧ್ಯಮ ಸರದಿಯಲ್ಲಿ ಆಸೀಸ್ ಕುಸಿತ ಕಂಡಿತು. ಸ್ಮಿತ್ (14) ಮತ್ತು ಶಾರ್ಟ್ (5) ಬೇಗನೇ ಪೆವಿಲಿಯನ್ ಸೇರಿಕೊಂಡರು. 41 ರನ್ ಅಂತರದಲ್ಲಿ 4 ವಿಕೆಟ್ ಬಿತ್ತು. 5ನೇ ಕ್ರಮಾಂಕದಲ್ಲಿ ಆಡಲಿಳಿದ ಮಾರ್ನಸ್ ಲಬುಶೇನ್ 56 ರನ್ ಬಾರಿಸಿ ತಂಡದ ಕುಸಿತಕ್ಕೆ ತಡೆಯಾಗಿ ನಿಂತರು. ನ್ಯೂಜಿಲ್ಯಾಂಡ್ ಅರ್ಧ ಹಾದಿ ಕ್ರಮಿಸುವ ವೇಳೆ 96 ರನ್ನಿಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಟಕ್ಕೆ ಸಿಲುಕಿತ್ತು. ಆಗಲೇ ತಂಡದ ಸೋಲು ಖಾತ್ರಿಯಾಗಿತ್ತು. 40 ರನ್ ಮಾಡಿದ ಆರಂಭಕಾರ ಮಾರ್ಟಿನ್ ಗಪ್ಟಿಲ್ ಅವರದೇ ಕಿವೀಸ್ ಸರದಿಯ ಗರಿಷ್ಠ ವೈಯಕ್ತಿಕ ಗಳಿಕೆ. ಲ್ಯಾಥಂ 38, ಗ್ರ್ಯಾಂಡ್‌ಹೋಮ್ 25 ರನ್ ಮಾಡಿದರು.
Related Articles
Advertisement