Advertisement
ಆದರೆ ದೇಶದ ಪ್ರಜೆಗಳನ್ನು ಅವರ ಪರಾಧೀನಕ್ಕೆ ಒಪ್ಪಿಸಲು ಇಚ್ಛಿಸುವುದಿಲ್ಲ ಎಂಬ ಮನೋಭಾವದಿಂದಾಗಿ ಅಣ್ಣನೊಂದಿಗೆ ಯುದ್ಧ ಮಾಡುವುದು ಅನಿವಾರ್ಯವಾಯಿತು. ಆಗ ಪ್ರಮುಖರೆಲ್ಲಾ ಸೇರಿ ಎರಡೂ ಕಡೆಯ ಸೈನಿಕರ ರಕ್ತದ ಹೊಳೆ, ಪ್ರಾಣಿಗಳ ಸಾವು-ನೋವಿಗೆ ಬದಲಾಗಿ ಪರಸ್ಪರ ಜಲಯುದ್ಧ, ಮಲ್ಲಯುದ್ಧ, ದೃಷ್ಟಿ ಯುದ್ಧದೊಂದಿಗೆ ಸೆಣೆಸಲು ನಿರ್ಧಾರವಾಯಿತು ಎಂದು ವಿವರಿಸಿದರು.
Related Articles
Advertisement
ದೀಕ್ಷೆಗೆ ಹೊರಡುತ್ತಿದ್ದ ಬಾಹುಬಲಿಯ ಕಣ್ಣೀರು ಭರತನ ತಲೆಯ ಮೇಲೆ ಬಿದ್ದು, ರಾಜಾಭಿಷೇಕ ಮಾಡುತ್ತಿದ್ದಾನೆಂದು ಪಂಪ ಅದ್ಭುತವಾಗಿ ಚಿತ್ರಿಸಿದ್ದಾನೆ. ಪಂಪ ಶ್ರೇಷ್ಠ ಛಾಯಾಗ್ರಾಹಕ ಎಂದರೆ ತಪ್ಪಾಗಲಾರದು. ಪಂಪನ ವೈಯಕ್ತಿಕ ಕವಿತ್ವ, ಚಿಂತನೆ ಸ್ಪಷ್ಟವಾಗುತ್ತದೆ. ಉಳಿದ ಪ್ರಾಕೃತ, ಸಂಸ್ಕೃತದಲ್ಲಿ ಇಲ್ಲದ ಸನ್ನಿವೇಶವನ್ನು ಪಂಪ ಸೃಷ್ಟಿಸಿದ್ದಾನೆ ಎಂದು ಚರಿತ್ರೆಯನ್ನು ಸ್ಮರಿಸಿದರು.
ಬಾಹುಬಲಿಯು ಈ ಚಕ್ರ ಇನ್ನು ಸಂಹಾರ ಚಕ್ರವಲ್ಲ. ಶಾಂತಿ ಚಕ್ರ, ಧರ್ಮ ಚಕ್ರವಾಗಬೇಕೆಂದು ಘೋಷಿಸಿದ. ನಂತರ 365 ದಿನ ಅನ್ನಾಹಾರ ಇಲ್ಲದೇ ಕಠೊರ ತಪಸ್ಸು ಮಾಡಿದ. ಅಚಲವಾಗಿ ನಿಂತ ಬಾಹುಬಲಿಯನ್ನು ಹಾವು, ಹುತ್ತ, ಬಳ್ಳಿಗಳು ಆವರಿಸಿದವು. ಪ್ರಪಂಚದ ಯಾವ ಧರ್ಮ, ಪಂಥ, ವರ್ಗ ಮಾತ್ರವಲ್ಲದೆ ಜೈನ ಧರ್ಮದ 24 ತೀರ್ಥಂಕರರಲ್ಲೂ ಬಾಹುಬಲಿಯಷ್ಟು ಘೋರ ತಪಸ್ಸು ಮಾಡಿದ ಮತ್ತೂಬ್ಬರಿಲ್ಲ.
ವರ್ಷದ ಬಳಿಕ ಸಿದ್ಧಿ ಲಭಿಸಿತು. ಆಕಾಶದಲ್ಲಿ ದೇಹ ತೇಲಾಡಲಾರಂಭಿಸಿತು. ಗಂಗಾ, ಸಿಂಧು ನದಿ ನೀರಿನಿಂದ ಅಭಿಷೇಕವಾಗಿ ಪುಷ್ಪ$ವೃಷ್ಠಿಯಾಯಿತು. ಅದು ಬಾಹುಬಲಿಯ ನಿಜ ಜೀವನದ ಮಹಾಮಸ್ತಕಾಭಿಷೇಕ. ನಂತರ ಅದು ಪರಂಪರೆಯಾಗಿ ನಡೆದುಕೊಂಡುಬಂದಿದೆ ಎಂದು ಪ್ರತೀತಿಯನ್ನು ಪ್ರಸ್ತಾಪಿಸಿದರು. ಭರತ- ಬಾಹುಬಲಿಯ ಆದರ್ಶವನ್ನು ಪರಿಚಯಿಸುವ ಜತೆಗೆ ಆದರ್ಶ ಬಿಂಬಿಸುವ ಕೆಲಸವನ್ನು “ತರಂಗ’ ಮಾಡಿದೆ.
ಇದಕ್ಕಾಗಿ ಮಣಿಪಾಲ್ ಮೀಡಿಯಾ ಸಮೂಹವನ್ನು ಅಭಿನಂದಿಸುತ್ತೇನೆ. ತರಂಗ ವ್ಯವಸ್ಥಾಪಕ ಸಂಪಾದಕರಾದ ಡಾ.ಸಂಧ್ಯಾ ಪೈ ಅವರು ಆದರ್ಶ ಮಹಿಳೆ. ಸರಳ ಜೀವಿ. ಲೇಖಕಿ, ಸಂಪಾದಕರಾಗಿ ಉತ್ತಮವಾಗಿ ಸಂಸ್ಥೆಯ ಆಡಳಿತ ನಡೆಸುತ್ತಿದ್ದಾರೆ. ಜೈನ ಧರ್ಮವನ್ನು ಜಾಗೃತಗೊಳಿಸುವ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ. ಮಹಿಳೆಯೊಬ್ಬರು ಯಾವುದೇ ಜವಾಬ್ದಾರಿ ನಿರ್ವಹಿಸಬಲ್ಲರು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಎಂದರು.
ಹಾಗೆಯೇ ಡಾ.ಯು.ಬಿ.ರಾಜಲಕ್ಷ್ಮೀ ಅವರು ಬಾಹುಬಲಿ ಹಾಗೂ ಜೈನ ಧರ್ಮ ಕುರಿತಂತೆ ಅಧ್ಯಯನ ಮಾದರಿಯಲ್ಲಿ ಹೊಸ ವಿಚಾರಗಳನ್ನು ನಿರೂಪಿಸುತ್ತಿರುವುದು ಉತ್ತಮ ಕಾರ್ಯಎಂದು ಹೇಳಿದರು. ಬಳಗಕ್ಕೆ ಅಭಿನಂದನೆ: ಮಣಿಪಾಲ್ ಮೀಡಿಯಾ ಸಮೂಹದ ತರಂಗ, ಉದಯವಾಣಿ, ತುಷಾರ, ತುಂತುರು ಉತ್ತಮವಾಗಿ ಮೂಡಿಬರುತ್ತಿದ್ದು, ಇಡೀ ಬಳಗದ ಕಾರ್ಯ ಅಭಿನಂದನೀಯ ಎಂದೂ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.