Advertisement

ಮಕ್ಕಳಿಗೆ ಅಪಘಾತ ವಿಮೆ

07:00 AM Oct 16, 2017 | Team Udayavani |

ತಿರುಚ್ಚಿ: ತಮಿಳುನಾಡು ಸರ್ಕಾರವು ಶಾಲಾ ಮಕ್ಕಳಿಗೆ ಅಪಘಾತ ವಿಮೆ ಯೋಜನೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. 

Advertisement

ಈ ಬಗ್ಗೆ ಮುಖ್ಯಮಂತ್ರಿ ಪಳನಿಸ್ವಾಮಿ ಜತೆ ಮಾತುಕತೆ ನಡೆಸಲಾಗಿದ್ದು, ಜಾರಿಗೆ ಬಂದಲ್ಲಿ ಇದು ದೇಶದಲ್ಲೇ ಮೊದಲ ಯೋಜನೆಯಾಗಿ ರಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಕೆ ಎ ಸೆಂಗೊಟ್ಟಾಯನ್‌ ಹೇಳಿದ್ದಾರೆ. ಈ ಯೋಜನೆ ಸರ್ಕಾರಿ ಶಾಲೆಗಳಿಗೆ ಮಾತ್ರವೇ ಅಥವಾ ಖಾಸಗಿ ಶಾಲೆಗಳಿಗೂ ಯೋಜನೆ ಜಾರಿಗೊಳಿಸಲಾಗುತ್ತ ದೆಯೇ ಎಂಬ ಬಗ್ಗೆ ಅವರು ವಿವರಣೆ ನೀಡಿಲ್ಲ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1.4 ಕೋಟಿ ಮಕ್ಕಳಿದ್ದಾರೆ.

ಶೈಕ್ಷಣಿಕ ಸಂಸ್ಥೆಗಳ ಬಳಿ ನಡೆವ ಅಪಘಾತಗಳ ಪೈಕಿ ತಮಿಳು ನಾಡಿನಲ್ಲೇ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, 2016ರಲ್ಲಿ 5010 ಪ್ರಕರಣ ನಡೆದಿದ್ದು, ಈ ಪೈಕಿ 1207 ಮಂದಿ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next