1993 ಇರಬೇಕು. ಎಸ್ಸೆಸ್ಸೆಲ್ಸಿ ಬಳಿಕ ಕಾಲೇಜಿನ ದಿನಗಳಲ್ಲಿ ಆರ್ಥಿಕವಾಗಿ ಬಹಳ ಕಷ್ಟಕರ ಪರಿಸ್ಥಿತಿ ನನ್ನೆದುರಿಗಿತ್ತು. ಕಾಲೇಜಿಗೆ ಕನಿಷ್ಠ ಹಾಜರಾತಿ ಸರಿದೂಗಿಸಿಕೊಂಡು, ಮಿಗುವ ದಿನಗಳು ಮತ್ತು ಶನಿವಾರ- ಭಾನುವಾರಗಳನ್ನೂ ದುಡಿಮೆಗೆಂದೇ ಮೀಸಲಿಟ್ಟಿದ್ದೆ. ಹೈಸ್ಕೂಲಲ್ಲಿ ನನ್ನ ಸೀನಿಯರ್ ಆಗಿದ್ದಾತನೊಬ್ಬ ಮನೆಗಳಿಗೆ ಸುಣ್ಣ ಬಣ್ಣ ಬಳಿಯೋ ಪೈಂಟಿಂಗ್ ಕೆಲಸ ಮಾಡುತ್ತಿದ್ದ. ಅವನೊಂದಿಗೆ ಸೇರಿ ಪೈಂಟಿಂಗ್ ಕೆಲಸ ಮಾಡುತ್ತ ನನ್ನ ಮೊದಲ ಉದ್ಯೋಗ ಆರಂಭಿಸಿದ್ದೆ.
Advertisement
ಮೊದಲ ದಿನ, ನನ್ನ ಗಣಿತದ ಮೇಷ್ಟ್ರ ಮನೆಯಲ್ಲೇ ನೆಲಕ್ಕೆ ಕಾವಿ ಪಾಲಿಶ್ ಹಚ್ಚಿ ತೆಂಗಿನ ನಾರಿನಿಂದ ಒತ್ತಿ ತಿಕ್ಕಿ ಹೊಳಪು ಬರಿಸೋ ಕೆಲಸ. ಮತ್ತೆ ಮಣ್ಣು ಹಿಡಿದ ಕಿಟಕಿಯ ಕಂಬಿ ಜಾಲರಿಗಳನ್ನು ಸ್ಯಾಂಡ್ ಪೇಪರ್‌ನಿಂದ ಉಜ್ಜಿ ಸ್ವತ್ಛಗೊಳಿಸೋ ಕೆಲಸ. ಇದಕ್ಕೆ ದಿನವಹಿ ಇಪ್ಪತ್ತೈದು ರೂಪಾಯಿ ವೇತನ. ಕಾಲೇಜು ದಿನಗಳಲ್ಲಿ ಮಧ್ಯಾಹ್ನ ಊಟಕ್ಕೆ ಕಾಸಿಲ್ಲವೆಂದು ಎಂಟಾಣೆ ಕಡಲೆ ತಿಂದು ನೀರು ಕುಡಿಯುತ್ತಿದ್ದವ ಕ್ರಮೇಣ ಸ್ವಂತ ದುಡಿಮೆ ಕಾಸಲ್ಲಿ ಮೂರು ರೂಪಾಯಿಯ ಊಟಕ್ಕೆ ಹೋಗುವಷ್ಟು ಶಕ್ತನಾದೆ!
ಹೈಸ್ಕೂಲು ದಿನಗಳಲ್ಲಿ ನನಗೆ ಬರವಣಿಗೆ ಅಂದರೆ ಎಲ್ಲಿಲ್ಲದ ಆಸಕ್ತಿ. ಸದಾ ಒಂದಿಲ್ಲೊಂದು ಪತ್ರಿಕೆಗಳಿಗೆ ಬರಹಗಳನ್ನು ಬರೆದು ಕಳುಹಿಸುತ್ತಿದ್ದೆ. ಲೇಖನಗಳು ಪ್ರಕಟಗೊಂಡಾಗ ಸಂತೋಷದಿಂದ ಹಾರಾಡುತ್ತಿದ್ದೆ. ಸ್ನೇಹಿತರೆಲ್ಲರಿಗೂ ತೋರಿಸುತ್ತಾ, ಹೆಮ್ಮೆಯಿಂದ ಬೀಗುತ್ತಿದ್ದೆ.
Related Articles
Advertisement
ಪ್ರಜ್ಞಾ ಹೆಬ್ಟಾರ್