Advertisement

ಡಾನ್‌ ಬ್ರಾಡ್‌ಮನ್‌ ಅಪೂರ್ವ ವೀಡಿಯೋ ಕ್ಲಿಪಿಂಗ್‌ ಬಿಡುಗಡೆ

11:46 PM Feb 21, 2020 | Sriram |

ಸಿಡ್ನಿ: ಸರ್‌ ಡಾನ್‌ ಬ್ರಾಡ್‌ಮನ್‌ ಆಸ್ಟ್ರೇಲಿಯದಲ್ಲಿ ಮಾತ್ರವಲ್ಲ ಕ್ರಿಕೆಟ್‌ ಇತಿಹಾಸದಲ್ಲೇ ಸರ್ವಶ್ರೇಷ್ಠ ಬ್ಯಾಟ್ಸ್‌ಮ್ಯಾನ್‌ ಎಂದು ಹೆಸರಾದವರು. ಆದರೆ ಈಗಿನ ಪೀಳಿಗೆಗೆ ಅವರ ಬಗ್ಗೆ ಕೇಳಿ ಗೊತ್ತೇ ಹೊರತು ಅವರ ಆಟವನ್ನು ನೋಡುವ ಭಾಗ್ಯವಿಲ್ಲ. ಈ ಕೊರತೆಯನ್ನು ನೀಗಿಸಲೆಂಬಂತೆ ಇದೀಗ ಬ್ರಾಡ್‌ಮನ್‌ ಆಟದ ವೀಡಿಯೊ ಕ್ಲಿಪಿಂಗ್‌ ಒಂದು ಬೆಳಕಿಗೆ ಬಂದಿದೆ.

Advertisement

ಬ್ರಾಡ್‌ಮನ್‌ 1948ರಲ್ಲಿ ಕ್ರಿಕೆಟಿಗೆ ವಿದಾಯ ಹೇಳಿದರು. ಇಂಗ್ಲೆಂಡ್‌ ವಿರುದ್ಧ ಆಡಿದ ಟೆಸ್ಟ್‌ ಅವರ ಕೊನೆಯ ಪಂದ್ಯವಾಗಿತ್ತು. ಆದರೆ ಇದಾದ ಬಳಿಕ ಅವರು 3 ಸೌಹಾರ್ದ ಪಂದ್ಯಗಳಲ್ಲಿ ಆಡಿದ್ದಾರೆ. ಈ ಪೈಕಿ 1949ರ ಫೆ. 26ರಂದು ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದ ಎಎಫ್ ಕಿಪ್ಪಕ್ಸ್‌ ಮತ್ತು ಡಬ್ಲ್ಯುಎ ಓಲ್ಡ್‌ಫೀಲ್ಡ್‌ ನಡುವಣ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡಿದ್ದರು. ಈ ವೀಡಿಯೋ ಚಿತ್ರಿಕೆಯನ್ನು ನ್ಯಾಶನಲ್‌ ಫಿಲ್ಮ್ ಆ್ಯಂಡ್‌ ಸೌಂಡ್‌ ಆರ್ಕಿವ್ಸ್‌ ಆಫ್ ಆಸ್ಟ್ರೇಲಿಯ (ಎನ್‌ಎಫ್ಎಸ್‌ಎ) ಬಿಡುಗಡೆಗೊಳಿಸಿದೆ. ಚ ಜಾರ್ಜ್‌ ಹಾಬ್ಸ್ ಕೆಮರಾಮನ್‌ ವರ್ಣದಲ್ಲಿರುವ ಈ ವೀಡಿಯೋ ಮೂಕಿ ಆಗಿದ್ದರೂ ಬ್ರಾಡ್‌ಮನ್‌ ಮೈದಾನಕ್ಕೆ ಬರುತ್ತಿರುವಾಗ ಪ್ರೇಕ್ಷಕರು ಎದ್ದು ನಿಂತು ಅಭಿನಂದಿಸುವ ದೃಶ್ಯವನ್ನು ತೋರಿಸುತ್ತದೆ. ಜಾರ್ಜ್‌ ಹಾಬ್ಸ್ ಎಂಬ ಕೆಮರಾಮನ್‌ ಇದನ್ನು ಚಿತ್ರೀಕರಿಸಿದ್ದಾರೆ. ಬಳಿಕ ಹಾಬ್ಸ್ ಎಬಿಸಿ ಟಿವಿಗೆ ಸೇರಿದ್ದರು.

66 ಸೆಕುಂಡುಗಳ ಅವಧಿಯ 16 ಎಂಎಂ ವೀಡಿಯೋ ಕ್ಲಿಪ್ಪಿಂಗ್‌ ಅತ್ಯಂತ ಅಮೂಲ್ಯವಾದ ಸಂಗ್ರಹ ಎಂದು ಎನ್‌ಎಫ್ಎಸ್‌ಎ ಹೇಳಿಕೊಂಡಿದೆ. ಇದು ಈ ಮೈದಾನದಲ್ಲಿ ಬ್ರಾಡ್‌ಮನ್‌ ಆಡಿದ ಕೊನೆಯ ಪಂದ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next