Advertisement
ಕಾಲೇಜು ಅಂಗಳಕ್ಕೆ ಹೆಜ್ಜೆ ಇಡಲು ಏನೋ ಸಂತೋಷ ಮತ್ತು ಸಡಗರ ! ಒಂದೇ ಶಾಲೆಯಲ್ಲಿ ಒಂದನೇ ಕ್ಲಾಸ್‌ನಿಂದ ಹತ್ತನೇ ತರಗತಿಯವರಿಗೆ ಓದಿದ್ದೂ ಇದೆ. ನಾವೆಲ್ಲರೂ ಚಡ್ಡಿ ದೋಸ್ತ್ಗಳು ಎಂದು ಹೇಳುವ ಮಟ್ಟಿಗೆ ನಮ್ಮ ಸ್ನೇಹ ಸಂಬಂಧವಿತ್ತು. ಶಾಲೆಯ ಪ್ರತಿಯೊಬ್ಬನೂ ಪ್ರತಿಯೊಬ್ಬಳೂ ಗೊತ್ತು. ಇಲ್ಲಿ ಎಲ್ಲರೂ ಆತ್ಮಿಯರೇ. ಹಾಗೆಯೇ ಶಾಲೆಯ ಶಿಕ್ಷಕ ವೃಂದವೂ ನಮ್ಮ ಕುಟುಂಬದವರಂತೆ. ಸುಮಾರು ಹತ್ತು ವರುಷ ಒಂದೇ ಶಾಲೆಯಲ್ಲಿ ಓದುವ ಒಂದು ಲಾಭ ಎಂದರೆ ಇದೇ. ಪ್ರತಿಯೊಬ್ಬರೂ ತುಂಬ ವಿಶ್ವಾಸದಿಂದ ತಮ್ಮ ತಮ್ಮ ಮನೆಯ ಮಕ್ಕಳು ಎಂಬ ರೀತಿಯಲ್ಲಿ ನೋಡಿಕೊಳ್ಳುತ್ತಾರೆ ಮತ್ತು ನಮ್ಮೆಲ್ಲರ ಏಳಿಗೆಯನ್ನು ನಿರೀಕ್ಷಿಸುತ್ತಾರೆ.
Related Articles
Advertisement
ಹಾಗೆಯೇ ಒಂದು ಸುತ್ತು ಕಣ್ಣು ಹಾಯಿಸಿದಾಗ ಬಗೆ ಬಗೆಯ ಉಡುಪಿನಲ್ಲಿ ಹೊಸ ಹೊಸ ಮುಖಗಳು. ಯಾರು ಪರಿಚಯವಿಲ್ಲ ಎಲ್ಲರು ಹೊಸಬರೇ ಆದರೆ, ನಮ್ಮ ನಮ್ಮ ಶಾಲೆಗಳಿಂದ ಒಬ್ಬರೋ ಇಬ್ಬರೋ ಮಾತ್ರ ಈ ಕಾಲೇಜಿಗೆ ಬಂದಿರುತ್ತಾರೆ ಅದರಲ್ಲೂ ಆ ಇಬ್ಬರೂ, ಒಬ್ಬರೂ ಬೇರೆ ವಿಭಾಗದಲ್ಲಿ ಸೇರಿಕೊಂಡಿರುತ್ತಾರೆ ನಾನು ಒಬ್ಬಂಟಿ ಎಂಬ ಗೋಳು. ನನ್ನ ಸ್ನೇಹಿತ/ತೆ ಅನ್ನುವವರೇ ಇಲ್ಲಾ. ಹೊಸಬರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ. ಇದರ ನಡುವೆ ಸಂಕೋಚ. ಇದು ಹುಡುಗ ಹುಡುಗಿ ಇಬ್ಬರಿಗೂ ಆಗುವ ಕಾಲೇಜಿನ ಮೊದಲ ದಿನದ ಅನುಭವ.
ಲೆಕ್ಚರರ್‌ಗಳು ಹೇಗೆ ಇರುತ್ತಾರೋ, ಅವರ ನಡೆನುಡಿ ಹೇಗೋ? ಇತ್ಯಾದಿ ಯೋಚನೆಗಳು. ಏಕೆಂದರೆ, ನಮ್ಮ ನಮ್ಮ ಹಳೆಯ ಶಾಲೆಗಳಲ್ಲಿ ನಾವು ಕಂಡಿರುವಂತೆ ಒಂದಷ್ಟು ಶಿಕ್ಷಕ ಶಿಕ್ಷಕಿಯರು ಇಲ್ಲಿಯೂ ನಮಗೆ ಸಿಗಬಹುದೆ ಎಂದು ಯೋಚನೆ. ಆದರೆ, ನಮಗೆ ಏನೂ ಮಾಡುವುದಕ್ಕೂ ಬರುವುದಿಲ್ಲ. ಒಂದೆರಡು ದಿನ ಸಾಗಲೇಬೇಕು. ಹೊಸ ಸ್ನೇಹಿತರ ಬಳಗ ಕಟ್ಟಬೇಕು. ಬಿಗು ವಾತಾವರಣವನ್ನು ತಿಳಿ ಮಾಡಬೇಕು. ಆಗ ಮಾತ್ರ ಕಾಲೇಜು ಲೈಫ್ ಎಂಜಾಯ್ ಮಾಡಲು ಸಾಧ್ಯ- ಎಂದುಕೊಂಡು ಮನಸ್ಸಿನಲ್ಲಿ ಚಿಕ್ಕ ಭರವಸೆಯನ್ನು ಕೊಂಡುಕೊಳ್ಳಬೇಕು.
“ನನ್ನ ಚಡ್ಡಿ ದೋಸ್ತ್¤ಗಳೆಲ್ಲ ಬೇರೆ ಬೇರೆ ಕಾಲೇಜುಗಳಿಗೆ ಸೇರಿ¨ªಾರೆ. ನಾನು ಮಾತ್ರ ಈ ಕಾಲೇಜು ನನಗೆ ಯಾರು ಸ್ನೇಹಿತರೇ ಇಲ್ಲ’ ಎಂದು ಈ ಹುಡುಗ ಹುಡುಗಿಯರ ವ್ಯರ್ಥ ಆಲಾಪ! ದೊಡ್ಡ ಕಾಲೇಜು! ಎಷ್ಟೊಂದು ಅಂತಸ್ತುಗಳ ಕಟ್ಟಡ. ಇದೆ ಮೊದಲು ನೋಡಿದ ಅನುಭವ! ಇನ್ನೂ ಎರಡು ವರುಷ ಅದು ಹೇಗೆ ನನ್ನ ಜೀವ ಇಲ್ಲಿ ಬೇಯುವುದೋ! ಏನೋ ಎಂಬ ದುಃಖ!
ಅಂತೂ ಮೊದಲನೆಯ ತರಗತಿ ಎಂದುಕೊಂಡು ನನ್ನ ತರಗತಿಯನ್ನು ಯಾವ ಕೊಠಡಿಯಲ್ಲಿ ಎಂದು ಹುಡುಕಿಕೊಂಡು ಎರಡು ಮೂರು ಬೆಂಚನ್ನು ಬಿಟ್ಟು ನಾಲ್ಕರಲ್ಲಿ ಮೂಲೆಯಲ್ಲಿ ಕುಳಿತೆ. “ಅಬ್ಟಾ ಏನು ಹುಡುಗರು ಹುಡುಗಿಯರುಗಳು. ಸಖತ್ ಫಾಸ್ಟ್ ಇದ್ದಾರೆ?’ ಅನಿಸಿತು. ಅವರ ಉಡುಪು ಮತ್ತು ನಡವಳಿಕೆಯನ್ನು ಕಂಡು ನಾನು ಅವರ ಹಾಗೆ ಫ್ಯಾಷನ್ ಇದ್ದೇನಾ ಎಂದು ಮನಸ್ಸಿನ ಒಂದು ಮೂಲೆಯಲ್ಲಿ ಆಲೋಚನೆ. ಪಕ್ಕದಲ್ಲಿ ಕುಳಿತುಕೊಂಡವಳು/ನು ಸುಮ್ಮನೇ ನೋಡಿ ನಕ್ಕನು/ಳು ಏನು ಮಾತಾಡಬೇಕೆಂಬುದು ತಿಳಿಯದೆ, “ನೀನು ಯಾವ ಸ್ಕೂಲ್‌ನಿಂದ ಬಂದಿದ್ದೀಯಾ?’ ಎಂದು ಕೇಳ್ಳೋದು, ಸ್ವಲ್ಪ ಹೊತ್ತು ಬಿಟ್ಟು, “ನಿನಗೆ ಎಷ್ಟು ಪರ್ಸೆಂಟ್ ಮಾರ್ಕ್ಸ್?’ ಎಂದು ಕೇಳ್ಳೋದು. ಎಲ್ಲಿಯಾದರೂ ಅವರಿಂದ ಸ್ವಲ್ಪ ಜಾಸ್ತಿ ಮಾರ್ಕ್ಸ್ ತೆಗೊಂಡಿದ್ದರೆ ಸ್ವಲ್ಪ ಜಂಭ ಕೊಚ್ಚಿಕೊಳ್ಳೋದು. ಇಷ್ಟು ಕೇಳಲು ಸ್ವಲ್ಪ ಭಯ ಬೇರೆ ಆದರೂ ಅಹಂ ಎನ್ನುವುದು ಬಿಡುತ್ತಿರಲಿಲ್ಲ.
– ಸೌಮಿನಿ ಹನುಮಜೆಮೊದಲ ಬಿಸಿಎ, ಕಾಲೇಜು, ಪುತ್ತೂರು