Advertisement

ಕೋವಿಡ್-19 ಮಹಾಮಾರಿಗೆ ಅಸ್ಸಾಂನಲ್ಲಿ ಮೊದಲ ಬಲಿ

05:43 PM Apr 10, 2020 | Mithun PG |

ಅಸ್ಸಾಂ: ಕೋವಿಡ್ 19 ಅಟ್ಟಹಾಸಕ್ಕೆ ಈಶಾನ್ಯ ರಾಜ್ಯದಲ್ಲಿ ಮೊದಲ ಬಲಿಯಾಗಿದ್ದು, ಕಳೆದ ಎರಡು ವಾರಗಳಿಂದ ಸೋಂಕಿನಿಂದ ಬಳಲುತ್ತಿದ್ದ ಅಸ್ಸಾಂ ರಾಜ್ಯದ ಹೈಲಕಂಡಿ ಜಿಲ್ಲೆಯ 65 ವರ್ಷದ ವೃದ್ಧರೋರ್ವರು ಇಂದು ಮೃತಪಟ್ಟಿದ್ದಾರೆ.

Advertisement

ಈ ಕುರಿತು ಟ್ವೀಟ್ ಮಾಡಿರುವ ಅಸ್ಸಾಂನ  ಆರೋಗ್ಯ ಸಚಿವ ಹಿಮಂತ್ ಬಿಸ್ವಾ ಶರ್ಮಾ, ‘ಕೋವಿಡ್ 19 ವೈರಸ್‌ಗೆ ಅಸ್ಸಾಂ ರಾಜ್ಯದಲ್ಲಿ ಮೊದಲ ಬಲಿ ಆಗಿದೆ ಎಂದು ತಿಳಿಸಲು ನಾನು ವಿಷಾಧಿಸುತ್ತೇನೆ.   ಆ ಕುಟುಂಬಕ್ಕೆ ದೇವರು ನೋವನ್ನು ಬರಿಸುವ ಶಕ್ತಿ ನೀಡಲಿ” ಎಂದು ಸಂತಾಪ ಸೂಚಿಸಿದ್ದಾರೆ.

ಈ ವೃದ್ಧ ದೆಹಲಿಯ ಧಾರ್ಮಿಕ  ಸಭೆಯಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಸೌದಿ ಆರೇಬಿಯಾಕ್ಕೆ ಕೆಲ ತಿಂಗಳಷ್ಟೆ ಹಿಂದೆ ಭೇಟಿ ನೀಡಿ ಹಿಂದಿರುಗಿದ್ದರು ಆರೋಗ್ಯ ಸಚಿವ ಮಾಹಿತಿ ನೀಡಿದ್ದಾರೆ.

ಹೈಲಕಂಡಿ ಗ್ರಾಮವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಅಸ್ಸಾಂ ನಲ್ಲಿ ಈಗಾಗಲೇ 29 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next