Advertisement

ಹಾವೇರಿಯ ಮೊದಲ ಕೋವಿಡ್-19 ಸೋಂಕಿತ ವ್ಯಕ್ತಿ ಗುಣಮುಖ

03:59 PM May 26, 2020 | keerthan |

ಹಾವೇರಿ: ಕೊವಿಡ್-19 ಸೋಂಕಿನಿಂದ ಗುಣಮುಖನಾದ ಜಿಲ್ಲೆಯ ಮೊದಲ ಸೋಂಕಿತ ಪಿ- 639 ವ್ಯಕ್ತಿಯನ್ನು ಮಂಗಳವಾರ ಹೂ ನೀಡಿ, ಚಪ್ಪಾಳೆ ತಟ್ಟಿ ಕೋವಿಡ್-19 ಆಸ್ಪತ್ರೆಯಿಂದ ಬೀಳ್ಕೊಡಲಾಯಿತು.

Advertisement

ಸೋಂಕಿತ ಸಂಖ್ಯೆ 639 ಸೋಂಕಿತನ ನಾಲ್ಕನೇ ಲ್ಯಾಬ್ ವರದಿಯೂ ನೆಗೆಟಿವ್ ಬಂದಿದ್ದು ಸಂಪೂರ್ಣ ಗುಣಮುಖನಾದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಯಿತು. ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೊಟ್ಟರು.

ಪಿ-639 ಸೋಂಕಿತ ಜಿಲ್ಲೆಯ ಸವಣೂರು ಪಟ್ಟಣದ ನಿವಾಸಿಯಾಗಿದ್ದಾನೆ. 32 ವರ್ಷದ ಈತ ಮುಂಬಯಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದನು. ಮುಂಬಯಿಯಿಂದ ಪೊಲೀಸರ ಕಣ್ತಪ್ಪಿಸಿ ಲಾರಿಯಲ್ಲಿ ಸವಣೂರಿಗೆ ಬಂದಿದ್ದನು.

ಈತನ ಸಹೋದರ ಪಿ- 672 ಎರಡು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದನು. ಜಿಲ್ಲೆಯಲ್ಲಿ ಈವರೆಗೆ ಆರು ಕೊವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಇದರಲ್ಲಿ ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನಾಲ್ವರಿಗೆ ಚಿಕಿತ್ಸೆ ಮುಂದುವರಿದೆ.

Advertisement

Udayavani is now on Telegram. Click here to join our channel and stay updated with the latest news.

Next